ETV Bharat / state

ರಾಣೆಬೆನ್ನೂರು: ಸರ್ಕಾರಿ ಬಸ್ ಹರಿದು ಅಂಗನವಾಡಿ ಶಿಕ್ಷಕಿ ಸಾವು - ranebennuru death case

ರಾಣೆಬೆನ್ನೂರು ತಾಲೂಕಿನ ನಿಟ್ಟೂರು ಗ್ರಾಮದ ಅಂಗನವಾಡಿ ಶಿಕ್ಷಕಿ ಕಮಲಮ್ಮ ಕಾಸಂಬಿ‌ ತನ್ನ ಬೈಕ್​ನಲ್ಲಿ ಮಕ್ಕಳನ್ನು ಕರೆದೊಯ್ಯತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿ, ಕಮಲಮ್ಮ ಕಾಸಂಬಿ ಸರ್ಕಾರಿ ಬಸ್​ನ ಹಿಂದಿನ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾರೆ.

Anganwadi teacher Kamalamma Kasambi death case
ಅಂಗನವಾಡಿ ಶಿಕ್ಷಕಿ ಕಮಲಮ್ಮ ಕಾಸಂಬಿ‌ ಸಾವು
author img

By

Published : Aug 14, 2021, 1:37 PM IST

ರಾಣೆಬೆನ್ನೂರು: ಸರ್ಕಾರಿ ಬಸ್ ಹರಿದು ಅಂಗನವಾಡಿ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ರಾಣೆಬೆನ್ನೂರು ತಾಲೂಕಿನ ನಿಟ್ಟೂರು ಗ್ರಾಮದ ಬಳಿ ಇಂದು ಬೆಳಗ್ಗೆ ನಡೆದಿದೆ. ಗ್ರಾಮದ ಕಮಲಮ್ಮ ಕಾಸಂಬಿ‌(55) ಮೃತ ಶಿಕ್ಷಕಿ.

ಕಮಲಮ್ಮ ಹಾಗೂ ಆತನ ಮಗ ಸೇರಿದಂತೆ ಇಬ್ಬರು ‌ಚಿಕ್ಕ ಮಕ್ಕಳನ್ನು ಕರೆದುಕೊಂಡು ರಾಣೆಬೆನ್ನೂರು ನಗರಕ್ಕೆ ಬರುತ್ತಿದ್ದರು. ಗ್ರಾಮದ ಹೊರಭಾಗದಲ್ಲಿ ಸರ್ಕಾರಿ ಬಸ್ ಎದುರಾಗಿದ್ದು, ಸೈಡ್​ನಲ್ಲಿ ಹೋಗುವಾಗ ಶಿಕ್ಷಕಿಯ ಬೈಕ್ ನಿಯಂತ್ರಣ ತಪ್ಪಿದೆ. ಇದರಿಂದ ಬೈಕ್​​ನಲ್ಲಿದ್ದ ಕಮಲಮ್ಮ ಕಾಸಂಬಿ ಬಸ್​ನ ಹಿಂದಿನ ಚಕ್ರದಡಿ ಬಿದ್ದಿದ್ದಾರೆ. ಅವರ ತಲೆಯ ಮೇಲೆ ಬಸ್ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧ: ರಸ್ತೆಯಲ್ಲೇ ಪೂಜೆ ಸಲ್ಲಿಸುತ್ತಿರುವ ಭಕ್ತರು

ಅದೃಷ್ಟವಶಾತ್​ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.