ETV Bharat / state

ರಾಣೆಬೆನ್ನೂರು: ಸಾಮಾಜಿಕ ಅಂತರ ಮರೆತು ಒಂದೇ ಬಸ್​ನಲ್ಲಿ 70 ಜನ ಪ್ರಯಾಣ!

ರಾಜ್ಯಾದ್ಯಂತ ಸರ್ಕಾರ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಬಸ್​​ನಲ್ಲಿ 30 ಜನ ಮಾತ್ರ ಪ್ರಯಾಣ ಮಾಡಬೇಕು ಎಂದು ಆದೇಶಿಸಿತ್ತು. ಆದ್ರೆ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಸುಮಾರು 70 ಜನರನ್ನು ಬಸ್​​ನಲ್ಲಿ ಹತ್ತಿಸಿಕೊಂಡು ಪ್ರಯಾಣ ಮಾಡಿದ ಘಟನೆ ರಾಣೆಬೆನ್ನೂರಲ್ಲಿ ನಡೆದಿದೆ.

ಒಂದೇ ಬಸ್​ನಲ್ಲಿ ಸುಮಾರು 70 ಪ್ರಯಾಣಿಕರು ಸಂಚಾರ

author img

By

Published : May 19, 2020, 5:13 PM IST

ರಾಣೆಬೆನ್ನೂರು (ಹಾವೇರಿ): ಸಾಮಾಜಿಕ ಅಂತರ ಕಾಪಾಡಿಕೊಂಡು ಬಸ್​​ನಲ್ಲಿ ಮೂವತ್ತು ಜನರು ಮಾತ್ರ ಪ್ರಯಾಣ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ ಬಸ್ ಕಂಡಕ್ಟರ್ ಆದೇಶ ಉಲ್ಲಂಘನೆ ಮಾಡಿ, ಸರ್ಕಾರಿ ಬಸ್​​ನಲ್ಲಿ ಸುಮಾರು 70 ಜನರನ್ನು ಹತ್ತಿಸಿಕೊಂಡು ಪ್ರಯಾಣ ಮಾಡಿದ ಘಟನೆ ರಾಣೆಬೆನ್ನೂರಲ್ಲಿ ನಡೆದಿದೆ.

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರ ಬಸ್ ಸಂಚಾರಕ್ಕೆ ನಿರ್ಬಂಧ ಹೇರಿತ್ತು. ಆದರೆ ಸಾರ್ವಜನಿಕರ ಮತ್ತು ಕಾರ್ಮಿಕರ ಹಿತದೃಷ್ಠಿಯಿಂದ ರಾಜ್ಯ ಸರ್ಕಾರ ಬಸ್ ಓಡಾಟಕ್ಕೆ ಅನವು ಮಾಡಿಕೊಟ್ಟಿದೆ.

ಒಂದೇ ಬಸ್​ನಲ್ಲಿ ಸುಮಾರು 70 ಪ್ರಯಾಣಿಕರ ಸಂಚಾರ

ಸರ್ಕಾರದ ಆದೇಶದ ಪ್ರಕಾರ ಒಂದು ಬಸ್​​ನಲ್ಲಿ ಮೂವತ್ತು ಜನ ಮಾತ್ರ ಪ್ರಯಾಣ ಮಾಡಬೇಕು. ಕಂಡಕ್ಟರ್ ಮತ್ತು ಚಾಲಕರು ಕಡ್ಡಾಯವಾಗಿ ಮಾಸ್ಕ್​​ ಹಾಕಿಕೊಳ್ಳಲು ಸೂಚಿಸಿದೆ. ಆದರೆ ರಾಣೆಬೆನ್ನೂರು ಬಸ್ ನಿಲ್ದಾಣದಿಂದ ಹಾವೇರಿಗೆ ಹೊರಟಿದ್ದ ಬಸ್​​ನಲ್ಲಿ ಸುಮಾರು ಎಪ್ಪತ್ತು ಪ್ರಯಾಣಿಕರು ಸಂಚಾರ ಮಾಡುವ ಮೂಲಕ ಸರ್ಕಾರದ ಆದೇಶವನ್ನು ಬ್ರೇಕ್ ಮಾಡಿದ್ದಾರೆ.

ಬಸ್​ಗಳು ರಸ್ತೆಗಿಳಿದ ಕಾರಣ ಪ್ರಯಾಣಿಕರು ಊರಿಗೆ ಹೋಗಲು ಮುಗಿಬಿದ್ದಿದ್ದಾರೆ. ಇದರಿಂದ ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಯಾಣಿಕರನ್ನು ನಿಭಾಯಿಸುವುದು ಕಷ್ಟವಾಗಿದೆ ಎನ್ನುತ್ತಾರೆ ಸಾರಿಗೆ ಅಧಿಕಾರಿಯೊಬ್ಬರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.