ಹಾಸನ: ಒಂಬತ್ತು ಶತಮಾನದಷ್ಟು ಹಳೆಯದಾದ ದೊಡ್ಡಕೆರೆ ಸಾವಿರದ ಮುನ್ನೂರನೇ ಇಸವಿಯಲ್ಲಿ ರಾಷ್ಟ್ರಕೂಟರ ದೊರೆ ಧ್ರುವ ಎಂಬುವನು ಈ ಕರೆಯನ್ನು ಕಟ್ಟಿಸಿದ್ದು, ಆದರೆ ಇದನ್ನು ಇಂದಿನ ಅಧಿಕಾರಿಗಳು ಸಂರಕ್ಷಣೆ ಮಾಡುವಲ್ಲಿ ಎಡವಿದ್ದು ಕೆರೆ ಈಗ ಅಳಿವಿನಂಚಿನಲ್ಲಿದೆ.
ಹಾಸನ ಜಿಲ್ಲೆ ರಾಜಕೀಯವಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಬದಲಿಗೆ ಶಿಲ್ಪಕಲೆಗಳ ನಾಡು ಎಂದು ಕೂಡ ಹಾಸನ ಸುಪ್ರಸಿದ್ಧ. ಬೇಲೂರು ತಾಲೂಕಿನ ಹಳೇಬೀಡು ಗ್ರಾಮದ ದ್ವಾರಸಮುದ್ರ ಕೆರೆಯನ್ನು ಕಟ್ಟಿಸಿದ್ದು ರಾಷ್ಟ್ರಕೂಟರ ದೊರೆ. ಇತಿಹಾಸ ಹೊಂದಿರುವ ಕೆರೆ ಕಳೆದ 12 ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿ ಕೆರೆ ಬಣಗುಡುತ್ತಿತ್ತು. ಬಳಿಕ ಬೇಲೂರಿನ ಯಗಚಿ ಜಲಾಶಯದಿಂದ ರಣಘಟ್ಟ ಯೋಜನೆಯ ಮೂಲಕ ಹಳೇಬೀಡು ಸೇರಿದಂತೆ 15 ಕೆರೆಗಳನ್ನು ತುಂಬಿಸಬೇಕು ಎಂದು ಈ ಭಾಗದ ರೈತರು ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಪಟ್ಟು ಬಿಡದ ರೈತರು ತಲೆಯ ಮೇಲೆ ತುತ್ತಿನ ಬುಟ್ಟಿಯನ್ನು ಹೊತ್ತು ವಿಧಾನಸೌಧದ ಮುಂದೆ ಕುಳಿತು ಪ್ರತಿಭಟನೆ ಮಾಡಿದರು. ಅಷ್ಟೇ ಅಲ್ಲ ಹಾಸನ ಮತ್ತು ಚಿಕ್ಕಮಗಳೂರು ನಡುವಿನ ರಸ್ತೆಯನ್ನು ಬಂದ್ ಮಾಡಿ. ನಂತರ ಆದರೆ ಸಮೀಪ ರೈತರೇ ಸ್ವಯಂಪ್ರೇರಿತವಾಗಿ ಮಲ್ಲಿಕಾರ್ಜುನ ಪುರದ ಸಮೀಪ ನೀರಿಗಾಗಿ ಕಾಲುವೆ ತೆಗೆದು ನೀರು ಹರಿಸಲು ಮುಂದಾದಾಗ ಸರ್ಕಾರ ರೈತರ ಮೇಲೆ ಪ್ರಕರಣ ದಾಖಲಿಸಿ ರೈತರು ಮತ್ತಷ್ಟು ಕೆರಳುವಂತೆ ಮಾಡಿದ್ರು.
ಕೊನೆಗೂ ಈ ಭಾಗಕ್ಕೆ ನೀರು ಹರಿಸುವ ಉದ್ದೇಶದಿಂದ ಹಿಂದಿನ ಕುಮಾರಸ್ವಾಮಿಯವರ ಮೈತ್ರಿ ಸರ್ಕಾರದಲ್ಲಿ ರಣಘಟ್ಟ ಯೋಜನೆ ಮುಖಾಂತರ ಹಳೇಬೀಡು ಕೆರೆಗೆ ನೀರು ಹರಿಸುವ ಉದ್ದೇಶದಿಂದ 100 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದು, ಬಳಿಕ ಬಂದ ಬಿಜೆಪಿ ಸರ್ಕಾರ ಮುಂದುವರೆಸದ ಕಾರಣ ರೈತರು ಮತ್ತೆ ಪ್ರತಿಭಟನೆಗೆ ಹಿಡಿಯುವ ಸಂದರ್ಭದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸತತವಾಗಿ ಜಿಲ್ಲೆಯಲ್ಲಿ ಸುರಿದ ಮಳೆರಾಯನ ಕೃಪೆಯಿಂದ ಸದ್ಯ ಹಳೇಬೀಡಿನ ದ್ವಾರಸಮುದ್ರ ಕೆರೆ ಮೈದುಂಬಿ ಹರಿದು ಈ ಭಾಗದ ಜನರನ್ನು ಸಂಕಷ್ಟವನ್ನು ದೂರ ಮಾಡಿದಳು ಎನ್ನುವಷ್ಟರಲ್ಲಿ ಈಗ ಅದೇ 9 ಶತಮಾನದ ಕೆರೆ ಈಗ ಇಬ್ಭಾಗವಾಗುವ ಸನಿಹಕ್ಕೆ ತಲುಪುತ್ತಿದೆ.
ಹಳೇಬಿಡಿನ ದ್ವಾರಸಮುದ್ರ ಕೆರೆ ಸುಮಾರು 250 ಎಕರೆ ಪ್ರದೇಶದಲ್ಲಿದ್ದು, ದ್ವಾರಸಮುದ್ರ ಕೆರೆ ತುಂಬಿದರೆ ಹಳೇಬೀಡು ಸೇರಿದಂತೆ ಜಾವಗಲ್ ಮತ್ತು ಬೆಳವಾಡಿಯ ಭಾಗಕ್ಕೂ ನೀರನ್ನ ಕೊಂಡೊಯ್ಯಬಹುದು. ಇದರ ಜೊತೆಗೆ ಕೆರೆಯನ್ನೇ ನಂಬಿಕೊಂಡಿರುವ ಮಾಯಗೊಂಡನಹಳ್ಳಿ, ಕೆರೆಕಟ್ಟೆಹಳ್ಳಿ, ಚಟಚಟಹಳ್ಳಿ, ಹೊಸೂರು, ರಾಮೇನಹಳ್ಳಿ, ರಾಜನಶಿರಿಯೂರು ಸೇರಿದಂತೆ 15 ಗ್ರಾಮಗಳು ಈ ಕೆರೆಯ ನೀರನ್ನೇ ನಂಬಿಕೊಂಡು ಕೃಷಿ ಚಟುವಟಿಕೆ ಮೂಲಕ ಬದುಕು ಕಟ್ಟಿಕೊಂಡಿದ್ದರು. ಆದರೆ ಇವತ್ತು ಕೆರೆ ಭಾಗವಾದರೆ ಗ್ರಾಮಗಳು ಕೂಡ ಮುಳುಗಡೆಯಾಗುವ ಸಂಭವವಿದೆ.
ಕೆರೆಯ ಅವನತಿಗೆ ಸರ್ಕಾರ ಮತ್ತು ಲೋಕೋಪಯೋಗಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೇ ನೇರ ಹೊಣೆ. 2013ರಿಂದ ಪ್ರಾರಂಭವಾದ ಎತ್ತಿನಹೊಳೆ ಕಾಮಗಾರಿ ಈ ಭಾಗದಲ್ಲಿ ನಡೆಯುತ್ತಿದ್ದು, ಕೆರೆಯ ಮುಖಾಂತರವೇ ಭಾರಿ ಪ್ರಮಾಣದ ವಸ್ತುಗಳನ್ನು ಸಾಗಿಸಲು ದೊಡ್ಡ ದೊಡ್ಡ ವಾಹನಗಳು ಸಂಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಈಗ ಕೆರೆಯ ಏರಿ ಭಾಗವಾಗಲು ಪ್ರಮುಖ ಕಾರಣ ಎನ್ನುವುದು ಸ್ಥಳೀಯರ ಆರೋಪ. 12 ವರ್ಷಗಳ ಬಳಿಕ ತುಂಬಿದ ಕೆರೆಗೆ 12 ದಿನದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಬಾಗಿನ ಅರ್ಪಿಸಿದ್ರು. ಆದರೆ ಕೆರೆ ಇಬ್ಭಾಗವಾಗುತ್ತದೆ ಎಂದು ಗೊತ್ತಾದ ತಕ್ಷಣ ಸಣ್ಣ ನೀರಾವರಿ ಇಲಾಖೆ ಮೂಲಕ ಇಂದು ಬೆಳಗಿನ ಜಾವ ಇಟಾಚಿ ಮೂಲಕ ಕೆರೆಯ ನೀರನ್ನು ಬಿಟ್ಟಿದ್ದು ವಿರೋಧಿ ಚಟುವಟಿಕೆ. ನಾವು ರಕ್ತ ಕೊಟ್ಟೆವು ಆದರೆ ಕೆರೆಯ ನೀರನ್ನು ಪೋಲಾಗಲು ಬಿಡುವುದಿಲ್ಲ ಎಂಬುದು ರೈತರ ತಿಳಿಸಿದ್ದಾರೆ.
ಈಗಾಗಲೇ ಹಳೇಬೀಡು ಗ್ರಾಮದಲ್ಲಿ ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿದ್ದು, ರಸ್ತೆಯ ಮಧ್ಯೆ ಅಡುಗೆ ಮಾಡುವ ಮೂಲಕ ರೈತ ಸಂಘಟನೆಗಳು ಮತ್ತು ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಭಟನೆಯನ್ನು ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಂಬಂಧಪಟ್ಟವರು ಸ್ಥಳಕ್ಕಾಗಮಿಸಿ ಕೆರೆಯನ್ನು ಕೂಡಲೇ ದುರಸ್ತಿಪಡಿಸುವ ಕಾರ್ಯಕ್ಕೆ ಆದೇಶ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.