ಹಾಸನ: ಶಾಲೆಗೆ ಹೊರಟಿದ್ದ ತಾಯಿ-ಮಗ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಹಾಸನದ ಬಳಿ ನಡೆದಿದೆ.
![ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದು](https://etvbharatimages.akamaized.net/etvbharat/prod-images/accidentmotherandsondeath_08072022142745_0807f_1657270665_851.jpg)
ನಗರದ ಬಿ.ಟಿ. ಕೊಪ್ಪಲು ಸಮೀಪ ಸೀಮಾ (32) ಮತ್ತು ಇವರ ಪುತ್ರ ಮಯೂರ (10) ಮೃತಪಟ್ಟಿದ್ದಾರೆ. ಮಗನನ್ನು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಸೀಮಾ ಕರೆದೊಯ್ಯುತ್ತಿದ್ದರು. ಮಾರ್ಗಮಧ್ಯೆ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ, ಸ್ಥಳದಲ್ಲೇ ತಾಯಿ-ಮಗ ದುರಂತ ಅಂತ್ಯ ಕಂಡಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ: ನೀರಿನ ನಲ್ಲಿ ವಿಚಾರಕ್ಕೆ ಗ್ರಾಪಂ ಸದಸ್ಯನ ಮೇಲೆ ಹಲ್ಲೆ: ಬೆಂಬಲಿಗರಿಂದ ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನ