ಚನ್ನರಾಯಪಟ್ಟಣ : ಎರಡು ದಿನಗಳಿಂದ ಜಿಲ್ಲೆಯಲ್ಲೇ ಇದ್ದು ಸಂಪೂರ್ಣ ಮಾಹಿತಿ ಪಡೆಯುತ್ತಿದ್ದೇನೆ. ಇನ್ಮುಂದೆ ತಿಂಗಳಿಗೆ ಎರಡು ಬಾರಿ ಜಿಲ್ಲೆಗೆ ಆಗಮಿಸುತ್ತೇನೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು.
ಉಸ್ತುವಾರಿ ಸಚಿವರಾದ ಬಳಿಕ ಜಿಲ್ಲೆಗೆ ಆಗಮಿಸಿದ ಅವರು, ಎಲ್ಲಿ ಸಮಸ್ಯೆ ಇದೆಯೋ ಅಲ್ಲೇ ಕುಳಿತು ಬಗೆಹರಿಸುವ ಕೆಲಸ ಮಾಡುತ್ತೇನೆ. ಈಗಾಗಲೇ ಜಿಲ್ಲೆ ಅಭಿವೃದ್ಧಿಯಾಗಿದೆ. ಇನ್ನೂ ಅಭಿವೃದ್ದಿಪಡಿಸುವ ಕಾರ್ಯ ಮಾಡುತ್ತೇನೆ. ಎಲ್ಲಾ ಶಾಸಕರನ್ನು ಗಣನೆಗೆ ತೆಗೆದುಕೊಂಡು ಮುಂದುವರೆಯುತ್ತೇನೆ. ಚುನಾವಣೆ ಬಂದಾಗ ಚುನಾವಣೆ ಮಾಡೋಣ, ಈಗ ಅಭಿವೃದ್ಧಿ ಕಾರ್ಯ ಮಾಡೋಣ ಎಂದರು.
ಸದ್ಯ ಜಿಲ್ಲೆಯಲ್ಲಿ 72 ಕೊರೊನಾ ಪ್ರಕರಣಗಳಿವೆ. ಇನ್ಮುಂದೆ ಜಿಲ್ಲೆಗೆ ಆಗಮಿಸುವವರು 7 ದಿನ ಕ್ವಾರಂಟೈನ್ನಲ್ಲಿರಬೇಕು ಎಂದು ತಿಳಿಸಿದರು.