ETV Bharat / state

ಬೇಲೂರಿನ ರೈತರ ವಿಕಾಸಕ್ಕೆ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆ ಜಾರಿ: ಸ್ವಾಮೀಜಿ

ಪುಷ್ಪಗಿರಿ ಮಠವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಲು ಜನವರಿ 4, 5ರಂದು ಪುಷ್ಪಗಿರಿ ರಾಷ್ಟ್ರೀಯ ಉತ್ಸವ ನಡೆಯಲಿದೆ.

ಪುಷ್ಪಗಿರಿ ಮಠದ ಪೀಠಾಧ್ಯಕ್ಷ ಸೋಮಶೇಖರ ಸ್ವಾಮೀಜಿ
author img

By

Published : Nov 3, 2019, 10:21 PM IST

ಹಾಸನ: ಬೇಲೂರು ತಾಲೂಕಿನ ರೈತರ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆ ಜಾರಿಗೆ ತರಲಾಗುವುದು. ಜೊತೆಗೆ ಪುಷ್ಪಗಿರಿಯಲ್ಲಿ ಜಾತ್ಯಾತೀತವಾಗಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಪುಷ್ಪಗಿರಿ ಮಠದ ಪೀಠಾಧ್ಯಕ್ಷ ಸೋಮಶೇಖರ ಸ್ವಾಮೀಜಿ ಹೇಳಿದರು.

ಪುಷ್ಪಗಿರಿ ಬೆಟ್ಟದಲ್ಲಿ ಆಯೋಜಿಸಿದ್ದ ಪೂರ್ವಸಭೆಯಲ್ಲಿ ಮಾತನಾಡಿದ ಅವರು, ಮಠವು ಜಾತಿ, ಧರ್ಮ, ವರ್ಗರಹಿತವಾಗಿ ಹತ್ತಾರು ವರ್ಷಗಳಿಂದ ಸಮಾಜಮುಖಿ ಮತ್ತು ಜನಪರ ಧಾರ್ಮಿಕ ಸಮಾರಂಭಗಳನ್ನು ನಡೆಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಮಠವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಪ್ರತಿ ವರ್ಷ ಜನವರಿ 4, 5ರಂದು ಪುಷ್ಪಗಿರಿ ರಾಷ್ಟ್ರೀಯ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪುಷ್ಪಗಿರಿ ಮಠದ ಪೀಠಾಧ್ಯಕ್ಷ ಸೋಮಶೇಖರ ಸ್ವಾಮೀಜಿ

ಕಾರ್ಯಕ್ರಮಕ್ಕೆ ಕೇಂದ್ರದ ಸಚಿವರು, ರಾಜ್ಯದ ಸಿಎಂ, ಸಚಿವರು, ಶಾಸಕರು ಮತ್ತು ಎಲ್ಲಾ ಪಕ್ಷದ ಪ್ರಮುಖ ಮುಖಂಡರು ಹಾಜರಾಗಲಿದ್ದಾರೆ. ಅಂದು ಉತ್ಸನ ಹಳೇಬೀಡಿನಿಂದ ಆರಂಭವಾಗಲಿದ್ದು, 100ಕ್ಕೂ ಅಧಿಕ ಜಾನಪದ ಕಲಾ ತಂಡಗಳು, 1109 ಪೂರ್ಣಕುಂಭ ಕಳಸಗಳ ಮೂಲಕ ಅದ್ಧೂರಿ ಮೆರವಣಿಗೆ ಮಾಡಲಾಗುತ್ತದೆ ಎಂದರು.

Intro:ಹಾಸನ : ಬೇಲೂರು ತಾಲ್ಲೂಕಿನ ರೈತರ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆ ಜಾರಿಗೆ ತರಲಾಗುವುದು ಜೋತೆಗೆ ಜಾತ್ಯತೀತವಾಗಿ ಪುಷ್ಪಗಿರಿಯಲ್ಲಿ ಅದ್ದೂರಿಯಾಗಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಪುಷ್ಪಗಿರಿ ಪೀಠಾಧ್ಯಕ್ಷ ಸೋಮಶೇಖರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ವಿಶ್ವ ವಿಖ್ಯಾತ ಹಳೇಬೀಡಿನಲ್ಲಿರು ಪ್ರಸಿದ್ಧ ಪುಷ್ಪಗಿರಿ ಬೆಟ್ಟದಲ್ಲಿ ಆಯೋಜಿಸಿದ ಪೂರ್ವಭಾವಿ ಸಭೆಯಲ್ಲಿ ಸ್ವಾಮೀಜಿಯವರ ನೇತೃತ್ವದಲ್ಲಿ ಪ್ರಮುಖ ಮುಖಂಡರೊಂದಿಗೆ ಪುಷ್ಪಗಿರಿ ಮಠದಿಂದ ಪುಷ್ಪಗಿರಿ ಚಿಲ್ಕೂರು ಮಠದ ಶತಮಾನೋತ್ಸವ ಮತ್ತು ಮಠದ ಪೀಠಾಧ್ಯಕ್ಷರಾದ ಸೋಮಶೇಖರ ಸ್ವಾಮೀಜಿಯವರ ದಶಮಾನೋತ್ಸವ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆ ಕಾರ್ಯಕ್ರಮವನ್ನು ಜನವರಿ ೪ ಹಾಗೂ ೫ ರಂದು ಆಯೋಜಿಸಲಾಗುವುದು ಜೊತೆಗೆ ಜಾತ್ಯಾತೀತವಾಗಿ ಪುಷ್ಪಗಿರಿ ರಾಷ್ಟ್ರೀಯ ಉತ್ಸವವನ್ನು ನಡೆಸಲು ತೀರ್ಮಾನ ಮಾಡಲಾಗಿದೆ ಎಂದರು.

ಪುಷ್ಪಗರಿ ಮಠ ಜಾತಿ ಧರ್ಮ ವರ್ಗ ರಹಿತವಾಗಿ ಹತ್ತಾರು ವರ್ಷಗಳಿಂದ ಸಮಾಜಮುಖಿ ಮತ್ತು ಜನಪರ ಹಾಗೂ ಧಾರ್ಮಿಕ ಸಮಾರಂಭಗಳನ್ನು ನಡೆಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಪುಷ್ಪಗಿರಿ ಮಠವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ದೃಷ್ಟಿಯಿಂದ ಪ್ರತಿ ವರ್ಷ ಜನವರಿ ೪ ಮತ್ತು ೫ ರಂದು ಪುಷ್ಪಗಿರಿ ರಾಷ್ಟ್ರೀಯ ಉತ್ಸವ ನಡೆಸಲು ತಿರ್ಮಾನು ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಎಲ್ಲಾ ಪಕ್ಷದ ಪ್ರಮುಖ ಮುಖಂಡರು ಹಾಜರಾಗುತ್ತಾರೆ. ಅಂದಿನ ಕಾರ್ಯಕ್ರದಲ್ಲಿ ಬೃಹತ್ ಉತ್ಸವವನ್ನು ಹಳೇಬೀಡಿನಿಂದ ಅರಂಭವಾಗಲಿದೆ. ಸುಮಾರು ೧೦೦ ಜನಪದ ಕಲಾತಂಡಗಳು. ೧೧೦೯ ಪೂರ್ಣ ಕುಂಭ ಕಳಸಗಳ ಸೇರಿದಂತೆ ಅದ್ದೂರಿಯಿಂದ ಕೂಡಿದ ಎರಡು ದಿನದ ಅರ್ಥಪೂರ್ಣ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಶಾಸಕ ಕೆ.ಎಸ್.ಲಿಂಗೇಶ್, ಪುಷ್ಪಗಿರಿ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್, ಪುಷ್ಪಗಿರಿ ದೇಗುಲ ದಾಸೋಹ ಸಮಿತಿ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಕೊರಟಗೆರೆ ಪ್ರಕಾಶ್, ಸೋಮಣ್ಣ, ಬಸವರಾಜು, ಹೆಬ್ಬಾಳು ಹಾಲಪ್ಪ, ಸೇರಿದಂತೆ ನೂರಾರು ಸಮಾಜ ಬಂದವರು ಹಾಜರಿದ್ದರು.Body:ಬೈಟ್ : ಪುಷ್ಪಗಿರಿ ಪೀಠಾಧ್ಯಕ್ಷ ಸೋಮಶೇಖರ ಸ್ವಾಮೀಜಿ.Conclusion:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.