ETV Bharat / state

ಅಂಗನವಾಡಿ ಶಿಕ್ಷಕಿ ವಿರುದ್ಧ ಅಕ್ರಮ ಮದ್ಯ ಮಾರಾಟ ಆರೋಪ

author img

By

Published : Nov 2, 2019, 4:57 PM IST

ಅಂಗನವಾಡಿ ಶಿಕ್ಷಕಿಯೇ ಸುಮಾರು ಹತ್ತು ವರ್ಷಗಳಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಸ್ತ್ರೀ ಶಕ್ತಿ ಸಂಘದವರು ಪ್ರತಿಭಟನೆ ನಡೆಸಿದರು.

ಅಂಗನವಾಡಿ ಶಿಕ್ಷಕಿ ಮೇಲೆ ಅಕ್ರಮ ಮದ್ಯ ಮಾರಾಟ ಆರೋಪ

ಹಾಸನ: ಅಂಗನವಾಡಿ ಶಿಕ್ಷಕಿಯೇ ಸುಮಾರು ಹತ್ತು ವರ್ಷಗಳಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಸ್ತ್ರೀ ಶಕ್ತಿ ಸಂಘದವರು ಪ್ರತಿಭಟನೆ ನಡೆಸಿದರು.

ನಾರಾಯಣಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಮನೆಹಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿಯಾದ ಪದ್ಮ, ಸುಮಾರು ಹತ್ತು ವರ್ಷಗಳಿಂದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದಾರೆ. ಕೇಳಲು ಹೋದ ನಮಗೆ ಆ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಮಗೆ ರಾಜಕಾರಣಿಗಳ ಬೆಂಬಲವಿದೆ ಎನ್ನುತ್ತಾರೆ. ಈ ಕೂಡಲೇ ಅದನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸ್ತ್ರೀ ಶಕ್ತಿ ಸಂಘದವರು ಹಾಗೂ ಸ್ವ-ಸಹಾಯ ಸಂಘದವರು ಸೇರಿ ಪ್ರತಿಭಟನೆ ನೆಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಅಂಗನವಾಡಿ ಶಿಕ್ಷಕಿ ಮೇಲೆ ಅಕ್ರಮ ಮದ್ಯ ಮಾರಾಟ ಆರೋಪ

ಶಿಕ್ಷಕಿಯಾಗಿ ಮಕ್ಕಳಿಗೆ ನೀತಿ ಹೇಳುವ ಇವರೇ ಅಕ್ರಮ ಮದ್ಯ ಮರಾಟದಲ್ಲಿ ತೊಡಗಿರುವುದು ನಿಜಕ್ಕೂ ನಾಚಿಕೆಗೇಡು. ಅಲ್ಲದೆ ಅಂಗನವಾಡಿಗೆ ಬರುವ ಮಕ್ಕಳಿಗೆ ನೀಡುವ ಆಹಾರದಲ್ಲೂ ಸಹ ಮೋಸ ಮಾಡುವ ಇವರು, ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ನೀಡುವ ಪೌಷ್ಟಿಕ ಆಹಾರವನ್ನು ತಮ್ಮ ಮನೆಗಳಿಗೆ ಕದ್ದು ತೆಗೆದುಕೊಂಡು ಹೋಗುತ್ತಾರೆ. ಅದನ್ನು ಕೇಳಲು ಬಂದ ಗ್ರಾಮಸ್ಥರ ಮೇಲೆ ಅವರ ಪತಿ ಮಂಜೇಗೌಡ, ಮಗ ರಘು ಹಲ್ಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Intro:ಹಾಸನ : ಬೇಲೂರಿನ ನಾರಾಯಣಪುರ ಗ್ರಾಮಪಂಚಾಯ್ತಿ ವ್ಯಾಪ್ತೀಯ ಹೊಸಮನೆಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯೇ ಸುಮಾರು ಹತ್ತು ವರ್ಷಗಳಿಂದ ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅದನ್ನು ತಡೆಹಿಡಿಯಬೇಕು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಸ್ತ್ರೀ ಶಕ್ತಿ ಸಂಘದವರು ಪ್ರತಿಭಟನೆ ನೆಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರಾದ ಯಶೋದಮ್ಮ ನಮ್ಮ ಹೊಸಮನೇಹಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿಯಾದ ಪದ್ಮ ಎಂಬುವವರು ಸುಮಾರು ಹತ್ತು ವರ್ಷಗಳಿಂದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದಾರೆ, ಕೇಳಲು ಹೋದ ನಮಗೆ ಆ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಮ್ಮನ್ನು  ಕೆಟ್ಟದಾಗಿ ಬಯ್ಯುವುದು, ನಂತರ ನಿಮ್ಮಿಂದ ನಮಗೇನೂ ಮಾಡಲು ಸಾಧ್ಯವಿಲ್ಲ, ನಮಗೆ ರಾಜಕಾರಣಿಗಳ ಬೆಂಬಲವಿದೆ ಎನ್ನುವ ಅವರು, ಅಕ್ರಮವಾಗಿ ಮದ್ಯ ಮಾರಾಟ ದಂದೆಯಲ್ಲಿ ತೊಡಗಿದ್ದಾರೆ, ತಕ್ಷಣವೇ ಅದನ್ನು  ಸ್ಥಗಿತ ಗೊಳಿಸಿ ಮುಚ್ಚಬೇಕು, ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸ್ತ್ರೀ ಶಕ್ತಿ ಸಂಘದವರು ಹಾಗೂ ಸ್ವಸಹಾಯ ಸಂಘದವರು ಸೇರಿ ಪ್ರತಿಭಟನೆ ನೆಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೈಟ್-1 : ಯಶೋದಮ್ಮ, ಗ್ರಾಮಸ್ಥೆ‌.

ನಂತರ  ಅಶೋಕ್ ಮಾತನಾಡಿ ಒಬ್ಬ ಅಂಗನವಾಡಿ ಶಿಕ್ಷಕಿಯಾಗಿ ಮಕ್ಕಳಿಗೆ ನೀತಿ ಹೇಳುವ ಇವರೇ ಅಕ್ರಮ ಮಧ್ಯೆ ಮರಾಟದಲ್ಲಿ ತೊಡಗಿರುವುದು ನಿಜಕ್ಕೂ ನಾಚಿಕೆ ಗೇಡು, ಅಲ್ಲದೆ ಅಂಗನವಾಡಿ ಬರುವ ಮಕ್ಕಳಿಗೆ ನೀಡುವ ಆಹಾರದಲ್ಲೂ ಸಹ ಮೋಸ ಮಾಡುವ ಇವರು ಮಕ್ಕಳಿಗೆ ಹಾಗೂ ಗರ್ಭಿಣಿ ಯಾರಿಗೆ ನೀಡುವ ಪೌಷ್ಠಿಕ ಆಹಾರವನ್ನು ನೀಡದೆ ತಮ್ಮ ಮನೆಗಳಿಗೆ ಕದ್ದು ತೆಗೆದುಕೊಂಡು ಹೋಗುತ್ತಾರೆ, ಅದಲ್ಲದೆ ಕೇಳಲು ಬಂದಂತಹ ಗ್ರಾಮಸ್ಥರ ಮೇಲೆ ಅವರ ಪತಿ ಮಂಜೇಗೌಡ, ಮಗ ರಘು ಹಲ್ಲೆ ಮಾಡಿದ್ದು, ಇಲ್ಲ ಸಲ್ಲದ ವಿಚಾರಕ್ಕೆ ತಲೆ ಹಾಕಿದರೆ ನಿಮ್ಮಗಳ ಮೇಲೆದೂರು ನೀಡುತ್ತೇನೆ, ಎಂದು ಧಮಕಿ ಹಾಕುವ ಇವರು ಅಂಗನವಾಡಿಯಲ್ಲಿದ್ದುಕೊಂಡು ಅಕ್ರಮವಾಗಿ ಮಧ್ಯೆ ಮಾರಾಟ ಮಾಡುತ್ತಿರುವುದರಿಂದ ತಕ್ಷಣವೇ ಇವರನ್ನು ಬೇರೆ ಕಡೆಗೆ ವರ್ಗಾಹಿಸಬೇಕು ಮತ್ತು ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಿ,ಡಿ,ಪಿ,ಓ ಅಧಿಕಾರಿ ರಾಜೇಗೌಡ, ಹಾಗೂ ಅಬಕಾರಿ ಉಪನಿರೀಕ್ಷಕರಾದ ಪಾಂಡುರಂಗ ಅವರಿಗೆ ಮನವಿ ಸಲ್ಲಿಸಿದರು.

ಬೈಟ್-2 : ಅಶೋಕ್ ಗ್ರಾಮಸ್ಥ. ( ಪಿಂಕ್ ಬಣ್ಣದ ಅಂಗಿ )

ಬೈಟ್ 3: ಪಾಂಡುರಂಗ, ಅಬಕಾರಿ ಉಪನಿರೀಕ್ಷಕ. ( ಪುಲವರ್ ಆಕಿರುವವರು )

ಬೈಟ್ 4 : ರಾಜೇಗೌಡ, ಸಿ,ಡಿ,ಪಿ,ಓ ಅಧಿಕಾರಿ ( ಬಿಳಿ ಬಣ್ಣದ ಅಂಗಿ ಧರಿಸಿರುವವರು)

ಈ ಸಂದರ್ಭದಲ್ಲಿ ಶ್ರೀ ಶಕ್ತಿ ಸ್ವಸಹಾಯ ಸಂಘದ ಸುನಂದಾ, ಸೋಮಮ್ಮ, ವಿಜಯಮ್ಮ, ಲತಾ, ವನಜಾಕ್ಷಿ, ಸುರೇಶ್, ಮೋಹನ್, ಶೇಷೇಗೌಡ ಇದ್ದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Body:೦Conclusion:೦

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.