ಹಾಸನ: ಇಲ್ಲಿನ ಮಾಂಸಹಾರಿ ಹೋಟೆಲ್ ಮಾಲೀಕನ ಪುತ್ರ ಮಾಡಿರುವ ಅವಾಂತರಕ್ಕೆ ಜನತೆ ದಿಗ್ಭ್ರಮೆಗೊಂಡಿದ್ದಾರೆ.
ನಗರದ ಎಸ್. ಜೆ. ಪಿ. ರಸ್ತೆಯಲ್ಲಿರುವ ಬಿರಿಯಾನಿ ಪ್ಯಾಲೆಸ್ ಎಂಬ ಹೋಟೆಲ್ ಮಾಲೀಕನ ಪುತ್ರ ಮಹಮದ್ ಸೈಫ್ ಎಂಬಾತ ಜೊಮ್ಯಾಟೊ ಆರ್ಡರ್ ಬಂದಾಗ ತಯಾರಾಗಿದ್ದ ಆಹಾರದ ರುಚಿ ನೋಡಲು ಟೂತ್ ಪಿಕ್ ಬಳಸಿ ತಿಂದು ಎಂಜಲಾದ ಟೂತ್ಪಿಕ್ನಲ್ಲೇ ಇನ್ನೊಮ್ಮೆ ರುಚಿ ನೋಡಿರುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇನ್ನು ಇದರ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಹೋಟೆಲ್ನಲ್ಲಿ ಆಹಾರ ಖರೀದಿಸಿದರೆ ಏನಪ್ಪಾ ಕಥೆ ಎಂದು ಆತಂಕಕ್ಕೊಳಗಾಗಿದ್ದಾರೆ. ಈ ಸಂಬಂಧ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಪ್ರಕರಣ ದಾಖಲಾಗಿದೆ.