ಚನ್ನರಾಯಪಟ್ಟಣ (ಹಾಸನ): ಹಳ್ಳಿಯಲ್ಲಿ ಹುಟ್ಟಿ ಬೆಳೆದು ಪ್ರಜಾತಂತ್ರದ ದೊಡ್ಡ ಹುದ್ದೆಯಾದ ಪ್ರಧಾನಿ ಪಟ್ಟಕ್ಕೇರಿದವರು ದೇವೇಗೌಡರು. ಅಂಥವರ ಅನುಭವ ಈ ದೇಶಕ್ಕೆ ಬೇಕಾಗಿದೆ. ಹಾಗಾಗಿ, ರಾಜ್ಯಸಭಾ ಸದಸ್ಯರಾಗಿ ಅವರನ್ನ ಆಯ್ಕೆ ಮಾಡುವ ಮೂಲಕ ಅವರ ಅನುಭವ ಬಳಸಿಕೊಳ್ಳಬೇಕು ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಹೆಚ್. ವಿಶ್ವನಾಥ್ ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಕುರಿತಾಗಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಅಸ್ಥಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ. ರಾಹುಲ್ ಗಾಂಧಿಗೆ ನಾಯಕತ್ವ ಆಗಲ್ಲ ಎಂದು ನಾನು ಹಿಂದೆಯೇ ಹೇಳಿದ್ದೆ. 2012ರಲ್ಲಿ ನಾನು ಸಂಸದನಾಗಿದ್ದಾಗಲೇ ಹೇಳಿದ್ದೆ. ಕಾಂಗ್ರೆಸ್ಗೆ ಪುನರ್ಜನ್ಮ ನೀಡೋದಿದ್ದರೆ ಅದು ಪ್ರಿಯಾಂಕ ಗಾಂಧಿಯಿಂದ ಮಾತ್ರ ಸಾಧ್ಯ. 2020ರ ಕೊನೆಯಲ್ಲಿ ದೊಡ್ಡ ರಾಜಕೀಯ ದೃಢೀಕರಣ ಆಗಲಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಸಭಾ ಟಿಕೆಟ್ ನೀಡಿಕೆ ವಿಚಾರದ ಕುರಿತು ಮಾತನಾಡಿ, ಪಕ್ಷಕ್ಕಾಗಿ ದುಡಿದ ಇಬ್ಬರು ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ. ಅದರಲ್ಲೂ ಸವಿತ ಸಮುದಾಯಕ್ಕೆ ಟಿಕೆಟ್ ನೀಡಿರೋದು ಸಂತೋಷ ತಂದಿದೆ. ಮೋದಿಯವರ ನಾಯಕತ್ವದ ಸರ್ಕಾರ ದೇಶದ ಎಲ್ಲಾ ಜಾತಿ, ಜನಾಂಗ, ಧರ್ಮ ,ಭಾಷಿಕರಿಗೆ ಪ್ರಜಾಸತ್ತಾತ್ಮಕ ಅವಕಾಶ ನೀಡುತ್ತಿದೆ ಎಂದು ಹೇಳಿದರು.