ETV Bharat / state

ಅಕ್ರಮವಾಗಿ ಸಬ್ಸಿಡಿ ರಸಗೊಬ್ಬರ ಸಂಗ್ರಹ: ಗೋದಾಮಿಗೆ ಬೀಗ ಜಡಿದ ಅಧಿಕಾರಿಗಳು​

author img

By

Published : Jul 28, 2019, 6:10 AM IST

ರೈತರಿಗೆ ನೀಡುವ ಸಬ್ಸಿಡಿ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಂಗಡಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, 2000 ಮೂಟೆಗಳನ್ನು ಸೀಜ್ ​ ಮಾಡಿದ್ದಾರೆ.

ರೈತರಿಗೆ ನೀಡುವ ಸಬ್ಸಿಡಿ ರಸಗೊಬ್ಬರ ಅಕ್ರಮ ದಾಸ್ತಾನು

ಹಾಸನ: ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಎರಡು ಸಾವಿರಕ್ಕೂ ಅಧಿಕ ರಸಗೊಬ್ಬರದ ಚೀಲಗಳನ್ನ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೊಳೆನರಸೀಪುರ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ ಮಂಜುನಾಥ್ ಟ್ರಾವೆಲ್ಸ್​ ಹಾಗೂ ಹೆಚ್​ಟಿಎ ಗ್ರೂಪ್​ನ ಮಾಲೀಕರಿಗೆ ಸೇರಿದ ಗೋದಾಮಿನಲ್ಲಿ ರೈತರಿಗೆ ನೀಡುವ ಸಬ್ಸಿಡಿ ರಸಗೊಬ್ಬರದ ಸಾವಿರಾರು ಚೀಲಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಈ ಬಗ್ಗೆ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಗಿರೀಶ್ ಗೌಡ ಮತ್ತು ಜಿಲ್ಲಾಧ್ಯಕ್ಷ ಸುರೇಶ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಹಾಸನ ಪೊಲೀಸರು ಮತ್ತು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ನೇತೃತ್ವದ ತಂಡ ದಾಳಿ ನಡೆಸಿದಾಗ ರಸಗೊಬ್ಬರದ ಚೀಲಗಳು ಪತ್ತೆಯಾಗಿವೆ.

ರೈತರಿಗೆ ನೀಡುವ ಸಬ್ಸಿಡಿ ರಸಗೊಬ್ಬರ ಅಕ್ರಮ ದಾಸ್ತಾನು

ಹೆಚ್.ಟಿ.ಎ ಗ್ರೂಪ್​ ಗೋದಾಮಿನಲ್ಲಿ ಸಂಗ್ರಹಿಸಿರುವ ರಸಗೊಬ್ಬರವನ್ನ ಗಮ್ ತಯಾರಿಕೆಗಾಗಿ ಖರೀದಿಸಲಾಗಿದೆ ಎಂದು ಹೇಳಲಾಗ್ತಿದೆ. ಸದ್ಯ ಗೊಬ್ಬರದ ಚೀಲಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಗೋದಾಮಿಗೆ ಬೀಗ ಜಡಿದಿದ್ದಾರೆ.

Intro:ಹಾಸನ: ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದ ಎರಡು ಸಾವಿರಕ್ಕೂ ಅಧಿಕ ರಸಗೊಬ್ಬರದ ಮೂಡೆಗಳನ್ನ ರಾಜ್ಯ ರೈತ ಸಂಘಟನೆಯ ಗಿರೀಶ್ ಗೌಡ ಬಣದ ಕಾರ್ಯಕರ್ತರು ದಾಳಿ ನಡೆಸಿ ಪೊಲೀಸರಿಗೆ ಒಪ್ಪಿಸಿರೋ ಹಾಸನದಲ್ಲಿ ನಡೆದಿದೆ.

ಹೊಳೆನರಸೀಪುರ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ ಮಂಜುನಾಥ್ ಟ್ರಾವಲ್ ಹಾಗೂ ಹೆಚ್.ಟಿ.ಎ.ಗೂಪ್ ಮಾಲೀಕ ಕೀರಿಟ್ ಎಂಬುವರ ಗೋದಾಮಿನಲ್ಲಿ ಅಕ್ರಮವಾಗಿ ರೈತರಿಗೆ ನೀಡಿರುವ ಸಬ್ಸಿಡಿ ರಸಗೊಬ್ಬರವನ್ನ ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆಂಬ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಗಿರೀಶ್ ಗೌಡ ಮತ್ತು ಜಿಲ್ಲಾಧ್ಯಕ್ಷ ಸುರೇಶ್ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂಘಟನೆಯ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಹಾಸನ ಪೊಲೀಸರು ಮತ್ತು ಕೃಷಿ ಇಲಾಖೆಯ ಜಂಟಿ ನಿರ್ಧೇಶಕ ಮಧುಸೂದನ್ ನೇತೃತ್ವದ ತಂಡ ಸಾವಿರಾರು ರಸಗೊಬ್ಬರದ ಮೂಡೆಗಳನ್ನ ವಶಕ್ಕೆ ಪಡೆದಿದ್ದಾರೆ.

ಇನ್ನು ಎಚ್.ಟಿ.ಎ.ಗ್ರೂಪ್ ಎಂಬ ಹೆಸರಿನ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿರೋ ರಸಗೊಬ್ಬರವನ್ನ ಗಮ್ ತಯಾರಿಕೆಗೆ ರೈತರಿಗೆ ನೀಡುವ ಸಬ್ಸಿಡಿ ಮೂಲಕ ಖರೀದಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಸದ್ಯ ಗೋದಾಮಿನ ಮಾಲೀಕ ಕೀರಿಟ್ ಸ್ಥಳದಲ್ಲಿ ಇಲ್ಲದ ಕಾರಣ ಗೋದಾಮಿಗೆ ಕೃಷಿ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಬೀಗ ಜಡಿದಿದ್ದಾರೆ.

ಬೈಟ್: ಹರೀಶ್, ಕೃಷಿ ಅಧಿಕಾರಿ. ಹಾಸನ.

ಇನ್ನು ರೈತರ ಹೆಸರಲ್ಲಿ ನೂರಾರು ಟನ್ ರಸಗೊಬ್ಬರ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಅವ್ಯವಹಾರದಲ್ಲಿ ಕೆಲವು ಕೃಷಿ ಅಧಿಕಾರಿಗಳು ಹಾಗೂ ನೌಕರರರು ಭಾಗಿಯಾಗಿದ್ದಾರೆಂಬುದು ರೈತ ಸಂಘಟನೆಯ ಗಂಭೀರ ಆರೋಪವಾಗಿದ್ದು, ರಸಗೊಬ್ಬರ ದಾಸ್ತಾನು ಮಾಡಿರುವ ಹಿಂದೆ ಯಾರ್ಯಾರ ಕೈವಾಡವಿದೆ ಎಂಬುದನ್ನ ತನಿಖೆ ಮಾಡುವ ಮೂಲಕ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕೆಂದು ಜಿಲ್ಲಾಧ್ಯಕ್ಷ ಜೆ.ಎಸ್.ಸುರೇಶ್ ಆಗ್ರಹಿಸಿದ್ರು.

ಬೈಟ್: ಜೆ.ಎಸ್.ಸುರೇಶ್, ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ, ಗಿರೀಶ್ ಗೌಡ ಬಣ.

ಇನ್ನು ದಾಳಿವೇಳೆ ದಾಳಿ ರೈತ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಗೌಡ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ಸಿಪಿಐ ಸತ್ಯನಾರಾಯಣ್,
ಜಂಟಿ ಕೃಷಿ ನಿರ್ದೇಶಕರು ಮಧುಸೂಧನ್, ಕಾರ್ಯಾಧ್ಯಕ್ಷ ಪುನೀನ್, ನಗರ ಉಪಾಧ್ಯಕ್ಷ ಕೃಷ್ಣೇಗೌಡ, ಪಾಂಡು ವೈ.ಆರ್.ಜಿಲ್ಲಾ ಉಪಾಧ್ಯಕ್ಷ. ವಕೀಲ ಪ್ರದೀಪ್ ಕೃಷಿ ಕೃಷಿ ಅಧಿಕಾರಿ ನವೀನ್, ಹರೀಶ್ ಮುಂತಾದವರಿದ್ದರು.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.