ETV Bharat / state

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ  ಡಿಕೆಶಿ ಮೂಗು ತೂರಿಸುವ ಅಗತ್ಯವಿಲ್ಲ: ಎಂಬಿ ಪಾಟೀಲ್

author img

By

Published : Apr 11, 2019, 2:17 PM IST

ಜಲಸಂಪನ್ಮೂಲ ಸಚಿವರಿಗೆ ಅನ್ಯ ಧರ್ಮಗಳ ವಿಷಯದಲ್ಲಿ ಮೂಗು ತೂರಿಸುವ ಚಟ ಹೆಚ್ಚಿದೆ, ಅವರು ಒಕ್ಕಲಿಗ ಸಮಾಜದ ಒಳಗಿನ ಗೊಂದಲಗಳನ್ನು ಸರಿಪಡಿಸಿಕೊಳ್ಳಲಿ ನಂತರ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಲಿ ಎಂದ ಎಂಬಿ ಪಾಟೀಲ್.

ಎಂಬಿ ಪಾಟೀಲ್

ಹಾಸನ: ಡಿಕೆಶಿ ತನ್ನ ಒಕ್ಕಲಿಗ ಸಮಾಜದ ಒಳಗಿನ ಗೊಂದಲಗಳನ್ನು ಸರಿಪಡಿಸಿಕೊಳ್ಳಲಿ ನಂತರ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಲಿ ಎಂದು ಗೃಹ ಸಚಿವ ಎಂಬಿ ಪಾಟೀಲ್ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್​ಗೆ ತಿರುಗೇಟು ನೀಡಿದರು.

ಎಂಬಿ ಪಾಟೀಲ್

ಅರಸೀಕೆರೆಯ ಕಾಂಗ್ರೆಸ್ ಮುಖಂಡ ಶಿವಶಂಕರ್​ಸ್ವಾಮಿ ಮನೆಗೆ ಭೇಟಿ ನೀಡಿದ ಎಂಬಿ ಪಾಟೀಲ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಹಾಸನ ಜಿಲ್ಲೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಉತ್ತಮ ಕೆಲಸ ಮಾಡುವ ಇರಾದೆಯನ್ನು ಹೊಂದಿದ್ದು ಈ ಬಾರಿ ಅವರ ಪರವಾದ ವಾತಾವರಣ ಕಂಡುಬರುತ್ತಿದ್ದು ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಅಂತ ಹೇಳಿದರು.

ಇನ್ನು ಹಳೆ ಮೈಸೂರು ಭಾಗದಲ್ಲಿ 20 ಲಕ್ಷಕ್ಕೂ ಅಧಿಕ ಲಿಂಗಾಯತ ಮತದಾರರಿದ್ದು ಇವರಿಗೆ ಹೆಚ್ಚಿನ ಸ್ಥಾನಮಾನ ಸಿಕ್ಕಿಲ್ಲ ಹೀಗಾಗಿ ಹೇಗೆ ಮೈತ್ರಿಕೂಟವನ್ನು ಬೆಂಬಲಿಸುತ್ತಾರೆ ಎಂಬ ಪ್ರಶ್ನೆಗೆ ಮಾತನಾಡಿದ ಅವರು ಹಿಂದೆ ಮಹದೇವ ಪ್ರಸಾದ್ ಅವರು ಬಳಿಕ ಗೀತಾ ಮಹದೇವಪ್ರಸಾದ್ ಬಂದರು. ಹಾಗಾಗಿ ಅಲ್ಲಿ ಸಮಸ್ಯೆ ಉದ್ಭವ ಆಗೋದು. ಜೊತೆಗೆ ಈ ಭಾಗದಲ್ಲಿ ಲಿಂಗಾಯಿತ ಧರ್ಮಕ್ಕೆ ಯಾವುದೇ ನಿಗಮ ಮಂಡಳಿ ಸ್ಥಾನವನ್ನು ಕೂಡ ನೀಡದಿರುವುದರಿಂದ ಪಕ್ಷ ಸಂಘಟನೆಗೆ ತೊಂದರೆಯಾಗಬಹುದೆಂಬ ಕಾರಣಕ್ಕಾಗಿ ನಾನು ವರಿಷ್ಠರೊಂದಿಗೆ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಈ ವಿಚಾರ ಎಲ್ಲಿ ಮುಟ್ಟಬೇಕು ಯಾರಿಗೆ ತಲುಪಿಸಬೇಕು ಅವರಿಗೆ ತಲುಪಿಸುತ್ತೇನೆ ಎಂದ್ರು.

Intro:ಹಾಸನ: ಡಿಕೆಶಿ ತನ್ನ ಒಕ್ಕಲಿಗ ಸಮಾಜದ ಒಳಗಿನ ಗೊಂದಲಗಳನ್ನು ಸರಿಪಡಿಸಿಕೊಳ್ಳಲು ನಂತರ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಲು ಅಂತ ಗೃಹ ಸಚಿವ ಎಂಬಿ ಪಾಟೀಲ್ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದರು.

ಅರಸೀಕೆರೆಯ ಕಾಂಗ್ರೆಸ್ ಮುಖಂಡ ಶಿವಶಂಕರ್ ಸ್ವಾಮಿ ಮನೆಗೆ ಭೇಟಿ ನೀಡಿದ ಗೃಹ ಸಚಿವ ಎಂಬಿ ಪಾಟೀಲ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಹಾಸನ ಜಿಲ್ಲೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಉತ್ತಮ ಕೆಲಸ ಮಾಡುವ ಇರಾದೆಯನ್ನು ಹೊಂದಿದ್ದು ಈ ಬಾರಿ ಅವರ ಪರವಾದ ವಾತಾವರಣ ಕಂಡುಬರುತ್ತಿದ್ದು ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಅಂತ ಹೇಳಿದರು.

ಇನ್ನು ಹಳೆ ಮೈಸೂರು ಭಾಗದಲ್ಲಿ 20 ಲಕ್ಷಕ್ಕೂ ಅಧಿಕ ಲಿಂಗಾಯತ ಮತದಾರರಿದ್ದು ಇವರಿಗೆ ಹೆಚ್ಚಿನ ಸ್ಥಾನಮಾನ ಸಿಕ್ಕಿಲ್ಲ ಹೀಗಾಗಿ ಹೇಗೆ ಮೈತ್ರಿಕೂಟವನ್ನು ಬೆಂಬಲಿಸುತ್ತಾರೆ ಎಂಬ ಪ್ರಶ್ನೆಗೆ ಮಾತನಾಡಿದ ಅವರು ಹಿಂದೆ ಮಹದೇವ ಪ್ರಸಾದ್ ಅವರು ಬಳಿಕ ಗೀತಾ ಮಹದೇವಪ್ರಸಾದ್ ಬಂದರು. ಹಾಗಾಗಿ ಅಲ್ಲಿ ಸಮಸ್ಯೆ ಉದ್ಭವ ಆಗೋದು. ಜೊತೆಗೆ ಈ ಭಾಗದಲ್ಲಿ ಲಿಂಗಾಯಿತ ಧರ್ಮಕ್ಕೆ ಯಾವುದೇ ನಿಗಮ ಮಂಡಳಿ ಸ್ಥಾನವನ್ನು ಕೂಡ ನೀಡದಿರುವುದರಿಂದ ಪಕ್ಷ ಸಂಘಟನೆಗೆ ತೊಂದರೆಯಾಗಬಹುದೆಂಬ ಕಾರಣಕ್ಕಾಗಿ ನಾನು ವರಿಷ್ಠರೊಂದಿಗೆ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಈ ವಿಚಾರ ಎಲ್ಲಿ ಮುಟ್ಟಬೇಕು ಯಾರಿಗೆ ತಲುಪಿಸಬೇಕು ಅವರಿಗೆ ತಲುಪಿಸುತ್ತೇನೆ ಎಂದ್ರು.

ಚುನಾವಣೆ ಇರುವುದರಿಂದ ನಾನು ಲಿಂಗಾಯತ ಧರ್ಮದ ಬಗ್ಗೆ ಹೆಚ್ಚು ಮಾತನಾಡುತ್ತಾರೆ ಆದರೆ ಪ್ರತ್ಯೇಕ ಧರ್ಮ ಎಂದು 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಇದೀಗ ದೇಶದ ವಿಚಾರದಲ್ಲಿ ಚುನಾವಣೆ ನಡೆಯುತ್ತಿದೆ ಧರ್ಮದ ವಿಚಾರವನ್ನಾಗಲೀ, ಜಾತಿಯ ವಿಚಾರವನ್ನು ಮುಂದಿಟ್ಟು ಚುನಾವಣೆ ಮಾಡುವುದಿಲ್ಲ. ಬದಲಿಗೆ ಮೋದಿಯ ವೈಫಲ್ಯ ಉದ್ಯೋಗ ಸೃಷ್ಟಿ ಮತ್ತು ಇನ್ನಿತರ ವಿಚಾರಗಳ ಕುರಿತು ಚುನಾವಣೆ ನಡೆಸಬೇಕಾಗಿದೆ ಆಗಾಗ ರಾಷ್ಟ್ರಮಟ್ಟದಲ್ಲಿ ಲಿಂಗಾಯಿತ ಧರ್ಮದ ಪ್ರಶ್ನೆಯೇ ಬರುವುದಿಲ್ಲ ನಾನು ವಿಧಾನಸಭಾ ಚುನಾವಣೆಯಲ್ಲೂ ಕೂಡ ಧರ್ಮದ ವಿಚಾರ ಪ್ರಸ್ತಾಪ ಮಾಡಿ ಮತ ಕೇಳಿಲ್ಲ ಬದಲಿಗೆ ಅಭಿವೃದ್ಧಿ ವಿಚಾರದಲ್ಲಿ ಮತ ಕೇಳಿದ್ದೇನೆ ಅಂದರು.

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೂಗು ತೂರಿಸುವ ಅಗತ್ಯವಿಲ್ಲ,ಅವರು ಮೊದಲು ತನ್ನ ಮನೆ ಸರಿಪಡಿಸಿಕೊಂಡು ನಂತರ ಸರಿ ಮಾಡಲಿ, ಒಕ್ಕಲಿಗರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನಿಂದ ಎಷ್ಟು ಮಂದಿ ಶಾಸಕರನ್ನ ಗೆಲ್ಲಿಸಿಕೊಂಡು ಬಂದಿದ್ದಾರೆ, ಜಲಸಂಪನ್ಮೂಲ ಸಚಿವರಿಗೆ ಅನ್ಯ ಧರ್ಮಗಳ ವಿಷಯದಲ್ಲಿ ಮೂಗು ತೂರಿಸುವ ಚಟ ಹೆಚ್ಚಿದೆ, ಮೊದಲು ತನ್ನ ಮನೆ ಸರಿಮಾಡಿಕೊಳ್ಳಲಿ,ನಮ್ಮ ಧರ್ಮದ ವಿಚಾರ ಮಾತನಾಡಲು ಮಠಾಧೀಶರಿದ್ದಾರೆ ಎಂದು ವಾಗ್ದಾಳಿ, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನನ್ನ ಹೇಳಿಕೆಗೆ ಈಗಲೂ ಬದ್ದನಾಗಿದ್ದು, ಎರಡು ಕಡೆಯ ಮಠಾಧೀಶರ ಗಳನ್ನು ಒಂದೆಡೆ ಸೇರಿಸಿ ಧರ್ಮದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಇದಕ್ಕೆ ಡಿಕೆಶಿ ಪದೇ ಪದೇ ಮೂಗು ತೂರಿಸುವುದು ತರವಲ್ಲ.ಮೊದಲು ಒಕ್ಕಲಿಗರ ಸಮುದಾಯದಲ್ಲಿ ಜಲಸಂಪನ್ಮೂಲ ಸಚಿವರು ಎಷ್ಟು ಸೀಟುಗಳನ್ನು ಗೆದ್ದಿದ್ದಾರೆ ಮತ್ತು ಎಷ್ಟು ಗೆಲ್ಲಿಸಿದ್ದಾರೆ ಎಂಬುದನ್ನು ಹೇಳಲಿ. ಅವರ ಮತ್ತು ಅವರ ಸಹೋದರ ನನ್ನ ಬಿಟ್ಟು ಮೊದಲು ಅವರ ಅಕೌಂಟ್ ಓಪನ್ ಮಾಡಿ ನಂತರ ನಮ್ಮ ಧರ್ಮದ ಬಗ್ಗೆ ಮಾತನಾಡಲಿ ಅಂತ ರಿಟರ್ನ ಟಾಂಗ್ ಕೊಟ್ಟರು.

ಇನ್ನು ನೆನ್ನೆ ಅರಸೀಕೆರೆಯಲ್ಲಿ ಮಾಜಿ ಸಚಿವ ಎ ಮಂಜು ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಯಾದ 24 ಗಂಟೆಗಳ ಬಳಿಕ ಸರ್ಕಾರ ಬಿದ್ದು ಹೋಗುತ್ತೆ ಎಂಬ ಮಾತುಗಳನ್ನು ಆಡಿದ್ದಾರೆ ಎಂಬ ಮಾತಿಗೆ ಈ ಹಿಂದೆ ಅವರು ಡೆಡ್ಲೈನ್ ಕೊಟ್ಟಿದ್ದು, ಅಮಾವಾಸ್ಯೆ, ಹುಣ್ಣಿಮೆ, ಯುಗಾದಿ, ದೀಪಾವಳಿ, ಎಲ್ಲವೂ ಕಳೆದು ಹೋಗಿದೆ. ಮುಂದೆಯೂ ಸರ್ಕಾರಕ್ಕೆ ಯಾವುದೇ ತೊಂದರೆಯಾಗದು, ಸರ್ಕಾರ ಸುಭದ್ರವಾಗಿರುತ್ತೆ ಅಂತ ಸ್ಪಷ್ಟ ಪಡಿಸಿದರು

ಬೈಟ್: ಎಂಬಿ ಪಾಟೀಲ್, ಗೃಹ ಸಚಿವ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.