ಹಾಸನ: ಯುಗಾದಿ ಹಬ್ಬದ ಬಾಡೂಟಕ್ಕಾಗಿ ತಮ್ಮ ಮನೆ ಹಸುಗಳನ್ನೇ ಕೊಯ್ದು ಅಡುಗೆ ಮಾಡಲು ಮತ್ತು ಮಾರಾಟ ಮಾಡಲು ಮುಂದಾಗಿದ್ದ ಹತ್ತಕ್ಕೂ ಅಧಿಕ ಮನೆಗಳ ಮೇಲೆ ಪೊಲೀಸರು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ದಾಳಿ ನಡೆಸಿ ಗೋಮಾಂಸ ವಶಪಡಿಸಿಕೊಂಡ ಘಟನೆ ಜಿಲ್ಲೆಯ ಅರಕಲಗೂಡಿನಲ್ಲಿ ನಡೆದಿದೆ.
ಅರಕಲಗೂಡು ಪಟ್ಟಣದ ಸುಭಾಷ್ ನಗರ ಮತ್ತು ದಲಿತ ಕಾಲೊನಿಯಲ್ಲಿ ಹಸುಗಳನ್ನು ಕೊಯ್ದು ಬಾಡೂಟಕ್ಕಾಗಿ ಮತ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪಟ್ಟಣ ಪಂಚಾಯಿತಿಯ ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿ 350 ಕೆಜಿಗೂ ಅಧಿಕ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಗೋಮಾಂಸ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಹಬ್ಬ- ಹರಿದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಅಲ್ಲದೇ ಈ ಹಿಂದೆ ಪುರಸಭೆ ಮೌಖಿಕವಾಗಿ ಆದೇಶ ನೀಡಿತ್ತು. ಸ್ಥಳಕ್ಕೆ ಆರೋಗ್ಯಾಧಿಕಾರಿ ಸೇರಿದಂತೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.