ETV Bharat / state

ಕೊರೊನಾ ವೇಳೆ ಸ್ಲಂ ಸ್ವಚ್ಛತೆ: ಕೋವಿಡ್- 19 ತಡೆಗಟ್ಟಲು ನಗರಸಭೆ ಶ್ರಮ - corona awarness by muncipality

ಭಾರತದಲ್ಲಿ ಕೊರೊನಾ ಪ್ರಾರಂಭವಾಗಿ ಏಳು ತಿಂಗಳುಗಳೇ ಕಳೆದು ಹೋಯಿತು. ಸ್ಲಂಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದೇ ಹೆಚ್ಚು. ಅಂತಹ ಸ್ಲಂಗಳಲ್ಲಿ ಕೋವಿಡ್ -19 ತಡೆಗಟ್ಟಲು ಹಾಸನ ನಗರಸಭೆಯ ಸದಸ್ಯರು ಹೆಚ್ಚಿನ ಪಾತ್ರವಹಿಸಿದ್ದಾರೆ.

corona awarness in hassan slum areas by muncipality
ಹಾಸನ
author img

By

Published : Sep 23, 2020, 8:06 PM IST

ಹಾಸನ: ಕೊರೊನಾ ಕಾಣಿಸಿಕೊಂಡಾಗಿನಿಂದ ಅದನ್ನು ಹರಡದಂತೆ ತಡೆಯುವುದು ಬಹುದೊಡ್ಡ ಸವಾಲಾಗಿದೆ. ಅದರಲ್ಲೂ ಸ್ವಚ್ಚತೆಯೇ ಇಲ್ಲದ ಸ್ಲಂ ಗಳಿಗೆ ಈ ಮಹಾಮಾರಿ ಹರಡದಂತೆ ತಡೆಯಲು ಹಾಸನ ನಗರಸಭೆ ಸಾಕಷ್ಟು ಶ್ರಮವಹಿಸಬೇಕಾಯ್ತು.

ಹಾಸನದಲ್ಲಿ ಸ್ಲಂಗಳಲ್ಲಿ ಸ್ವಚ್ಛತೆಗೆ ನಗರಸಭೆ ಕ್ರಮ
ಜಿಲ್ಲೆಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಸ್ಲಂ ಬಡಾವಣೆಗಳಿವೆ. ಅದರಲ್ಲಿ ಸಿದ್ದಯ್ಯ ನಗರ, ರಾಜಕುಮಾರ್ ನಗರ, ಮೆಹಬೂಬನಗರ ಇಲಾಯಿ ನಗರ, ಮರಿಯಪ್ಪನ ವಠಾರ, ಹೊಸ ಲೈನ್ ರಸ್ತೆ ಅಂಬೇಡ್ಕರ್ ನಗರ, ಲಕ್ಷ್ಮಿಪುರ ಬಡಾವಣೆ ಪಕ್ಕದ ಬಡಾವಣೆಗಳು ಮತ್ತು ಪೆನ್ಷನ್ ಮೊಹಲ್ಲಾದ ಕೆಲವು ರಸ್ತೆಗಳನ್ನು ಸ್ಲಂಗಳೆಂದು ಗುರುತಿಸಲಾಗಿದೆ.
ಕೇವಲ ಹಾಸನದಲ್ಲಿ ಅಷ್ಟೇ ಅಲ್ಲ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೂಡ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವುದು ಸ್ಲಮ್ ಏರಿಯಾಗಳಲ್ಲಿಯೇ. ಹಾಗಾಗಿ ಇಂತಹ ಏರಿಯಾಗಳಲ್ಲಿ ಜಿಲ್ಲೆಯ ನಗರ ಸಭೆಗಳು ಮತ್ತು ತಾಲೂಕು ಆಡಳಿತಗಳು ಹೆಚ್ಚು ನಿಗಾ ಇಡಬೇಕಾಗುತ್ತದೆ. ಕೊರೊನಾ ಸಂದರ್ಭದಲ್ಲೂ ಹಾಸನ ನಗರಸಭೆ ಮತ್ತು ಈ ಬಡಾವಣೆಗಳ ನಗರಸಭೆ ಸದಸ್ಯರು ಕೊರೊನಾ ಅರಿವು ಕಾರ್ಯಕ್ರಮ ಮತ್ತು ತಡೆಗಟ್ಟಲು ಬೇಕಾದ ಪರಿಕರಗಳನ್ನು ಕೂಡ ನೀಡುವ ಮೂಲಕ ಸೋಂಕು ಹರಡುವಿಕೆ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
"ಸ್ಲಂ ಏರಿಯಾಗಳಿಗೆ ಉಚಿತ ಮಾಸ್ಕ್ ಸ್ಯಾನಿಟೈಸರ್ ವಿತರಣೆ": ಕೋವಿಡ್-19 ಸಂದರ್ಭದಲ್ಲಿ ಲಾಕ್​ಡೌನ್​​ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ಹತ್ತಕ್ಕೂ ಹೆಚ್ಚು ಬಡಾವಣೆಗಳಿಗೆ ನಗರಸಭೆ ಸದಸ್ಯರು ನಗರಸಭೆಯ ವತಿಯಿಂದ ಮತ್ತು ಕೆಲವು ಸದಸ್ಯರು ತಮ್ಮ ಪಕ್ಷದ ಆದೇಶದಂತೆ ತಮ್ಮ ಸ್ವಂತ ಹಣದಿಂದ ತಮ್ಮ ಬಡಾವಣೆಗಳ ಜನರಿಗೆ ಉಚಿತವಾಗಿ ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡುವ ಮೂಲಕ ಕೋವಿಡ್ -19 ತಡೆಗಟ್ಟುವಲ್ಲಿ ಮುಂಚೂಣಿ ಪಾತ್ರವಹಿಸಿದ್ದಾರೆ.

"ಹದಿನೈದು ದಿನಕ್ಕೊಮ್ಮೆ ಸೋಡಿಯಂ ಹೈಪೋಕ್ಲೋರೈಡ್ ಬಳಕೆ": ಸಾಂಕ್ರಾಮಿಕ ರೋಗ ಹರಡದಂತೆ ತಮ್ಮ- ತಮ್ಮ ವ್ಯಾಪ್ತಿಗೆ ಬರುವ ಏರಿಯಾಗಳ ರಸ್ತೆಗಳಿಗೆ, ಚರಂಡಿಗಳಿಗೆ ಹಾಗೂ ಹೋಂ ಕ್ವಾರಂಟೈನ್ ಮಾಡಿದ ಮನೆಗಳಿಗೆ ಸೋಡಿಯಂ ಹೈಪೋಕ್ಲೋರೈಟ್ ಸಿಂಪಡಿಸಿ ರೋಗ ಹರಡದಂತೆ ನಗರಸಭೆಯಿಂದ ಹೆಚ್ಚಿನ ಜಾಗೃತಿ ವಹಿಸಲಾಗಿತ್ತು.

"ನೀರು ನಿಲ್ಲದಂತೆ , ಎಳನೀರು ಸಿಪ್ಪೆ ಸಂಗ್ರಹ ಮಾಡದಂತೆ ಅರಿವು"ಪ್ರತಿ ಮನೆಯ ಮುಂಭಾಗದಲ್ಲಿರುವ ತೆರೆದ ನೀರಿನ ಟ್ಯಾಂಕ್​ಗಳಲ್ಲಿ ನೀರು ನಿಲ್ಲದಂತೆ ಮತ್ತು ಎಳನೀರು ಸಿಪ್ಪೆಗಳನ್ನು ಎಲ್ಲೆಂದರಲ್ಲಿ ಬಿಸಾಡದಂತೆ ನಗರಸಭಾ ಸದಸ್ಯರು ನಿತ್ಯ ಆಟೋ ಮೂಲಕ ಹಾಗೂ ಕೆಲವೊಂದು ಕಡೆ ತಾವೇ ಸ್ವತಃ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ.

ಅಲ್ಲದೆ ರಸ್ತೆ ಕಾಮಗಾರಿ ಮತ್ತು ಒಳಚರಂಡಿ ಕಾಮಗಾರಿ ಮಾಡುವ ಸಿಬ್ಬಂದಿಗೆ ಮಾಸ್ಕ್ ಮತ್ತು ಗ್ಲೌಸ್ ಬಳಸುವಂತೆ ಅರಿವಿನ ಜೊತೆಗೆ ಸೂಚನೆ ಕೊಟ್ಟಿದ್ದರು. ಇನ್ನು ಸ್ಲಮ್ ಬಡಾವಣೆಗಳ ಸಮೀಪವಿರುವ ರಸ್ತೆಬದಿಯ ಒಳಚರಂಡಿ ಹಾಗೂ ಜನನಿಬಿಡ ಪ್ರದೇಶಗಳಿಗೆ ಬ್ಲೀಚಿಂಗ್ ಪೌಡರ್ ಹಾಕುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ಕೈಗೊಂಡಿದ್ದರು.

ಒಟ್ಟಾರೆ ಕೋವಿಡ್ -19 ಸಂದರ್ಭದಲ್ಲಿ ಅಲ್ಲಿನ ನಗರಸಭಾ ಸದಸ್ಯರು ನಗರಸಭೆಯ ವತಿಯಿಂದ ಸ್ಲಂಗಳಲ್ಲಿ ಕೊರೊನಾ ಅರಿವು ಕಾರ್ಯಕ್ರಮಗಳನ್ನು ಮೂಡಿಸುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ.

ಲಾಕ್​ಡೌನ್​​ ಬಳಿಕ ಮತ್ತೆ ಏರಿಕೆಯಾದ ಸೋಂಕು:
ಲಾಕ್​ಡೌನ್​​ ಮುಗಿದ ಬಳಿಕ ಜನರ ಓಡಾಟ ಹೆಚ್ಚಾಗುತ್ತಿದ್ದು ಮತ್ತೆ ರಸ್ತೆಬದಿಯಲ್ಲಿ ತ್ಯಾಜ್ಯವನ್ನು ಎಸೆಯುವ ಮೂಲಕ ಮಲಿನ ಮಾಡುತ್ತಿದ್ದಾರೆ. ನಗರಸಭೆ ಈಗಾಗಲೇ ಇಂತಹ ಪ್ರದೇಶಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಹಾಗೂ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರೂ ರಾತ್ರಿ ವೇಳೆ ರಸ್ತೆಬದಿಗಳಲ್ಲಿ ಕಸ ಸುರಿದು ಹೋಗುತ್ತಿರುವುದು ಕಂಡುಬರುತ್ತಿದೆ. ಜನ ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದ್ರಿಂದ ಮತ್ತೆ ಸೋಂಕು ಹೆಚ್ಚಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.