ETV Bharat / state

ಹಾಡಹಗಲೇ ಅಂಗಡಿಗೆ ನುಗ್ಗಿ ಮಹಿಳೆಯ ಸರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಹಾಸನದಲ್ಲಿ ಹಾಡಹಗಲೇ ದುಷ್ಕರ್ಮಿಗಳು ಅಂಗಡಿಯೊಂದಕ್ಕೆ ನುಗ್ಗಿ, ವೃದ್ದೆಯೋರ್ವರ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳು
author img

By

Published : Oct 24, 2019, 3:50 AM IST

Updated : Oct 24, 2019, 5:16 AM IST

ಹಾಸನ/ಸಕಲೇಶಪುರ: ಹಾಡಹಗಲೇ ದುಷ್ಕರ್ಮಿಗಳು ಅಂಗಡಿಯೊಂದಕ್ಕೆ ನುಗ್ಗಿ, ವೃದ್ದೆಯೋರ್ವರ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿರುವ ಘಟನೆ, ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.

ನಗರದ ಲಕ್ಷ್ಮೀಪುರಂ ಬಡಾವಣೆಯ ನಿವಾಸಿ ಯಶೋಧ (60) ಮಾಂಗಲ್ಯ ಸರ ಕಳೆದುಕೊಂಡವರು. ಇವರ ದಿನಸಿ ಅಂಗಡಿ ಅಂಗಡಿಗೆ ವ್ಯಾಪಾರ ಮಾಡುವ ನೆಪದಲ್ಲಿ ಬಂದ ಮೂವರು, 60 ರೂ.ವ್ಯಾಪಾರ ಮಾಡಿ ಚಿಲ್ಲರೆ ಹಣ ವಾಪಸ್ ಪಡೆಯುವ ವೇಳೆ ಯಶೋಧರವರ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಂಡು ಬೈಕ್​ನಲ್ಲಿ ಪರಾರಿಯಾಗಿದ್ದಾರೆ.

ಸರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಈ ಸಂದರ್ಭದಲ್ಲಿ ವೃದ್ದೆ ಯಶೋಧರವರು ಕೂಗಿಕೊಂಡಿದ್ದು ಅಕ್ಕಪಕ್ಕದಲ್ಲೂ ಯಾರು ಇಲ್ಲದ ಕಾರಣ ಕಳ್ಳರಿಗೆ ಅನುಕೂಲವಾಗಿದೆ. ಮಾಂಗಲ್ಯ ಸರ ಸುಮಾರು 60 ಗ್ರಾಂ ತೂಕವಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುವಾಗಿದೆ. ಬಡಾವಣೆಯಲ್ಲಿ ಸಿಸಿ ಟಿವಿಗಳನ್ನು ಅಳವಡಿಸಿಕೊಳ್ಳದಿರುವುದರಿಂದ ಕಳ್ಳರಿಗೆ ಈ ರೀತಿಯ ಕೃತ್ಯವೆಸಗಲು ಸಹಕಾರಿಯಾಗಿದೆ.

ಇನ್ನು ಈ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ನೊಂದ ದಂಪತಿ ದೂರು ದಾಖಲಿಸಿದ್ದಾರೆ.

Intro:ಹಾಡು ಹಗಲೆ ಅಂಗಡಿಗೆ ನುಗ್ಗಿ ಮಹಿಳೆಯೋರ್ವಳ ಸರ ದೋಚಿದ ದುಷ್ಕರ್ಮಿಗಳು:

ಹಾಸನ/ಸಕಲೇಶಪುರ: ಹಾಡುಹಗಲೇ ದುಷ್ಕರ್ಮಿಗಳು ಅಂಗಡಿಯೊಂದಕ್ಕೆ ನುಗ್ಗಿ ಅಂಗಡಿ ವೃದ್ದೆಯೋರ್ವರ ಮಾಂಗಲ್ಯ ಸರವೊಂದನ್ನು ದೋಚಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಲಕ್ಷ್ಮೀಪುರಂ ಬಡಾವಣೆಯ ನಿವಾಸಿ ಯಶೋಧ (60) ಮಾಂಗಲ್ಯ ಸರ ಕಳೆದುಕೊಂಡ ನತದೃಷ್ಟೆ. ಬಡಾವಣೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ದಿನಸಿ ಅಂಗಡಿಯೊಂದನ್ನು ನಡೆಸುತ್ತಿರುವ ಇವರ ಅಂಗಡಿಗೆ ಇಂದು ವ್ಯಾಪಾರ ಮಾಡುವ ನೆಪದಲ್ಲಿ ಬಂದ ಮೂರು ಮಂದಿಯಲ್ಲಿ ಓರ್ವ 60 ರೂ.ವ್ಯಾಪಾರ ಮಾಡಿ ಚಿಲ್ಲರೆ ಹಣ ವಾಪಸ್ ಪಡೆಯುವ ವೇಳೆ ಅಂಗಡಿ ಮಾಲೀಕೆಯಾದ ಯಶೋಧರವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನ ಕಿತ್ತುಕೊಂಡು ಇನ್ನಿಬ್ಬರು ಯುವಕರೊಂದಿಗೆ ಬೈಕ್ ನಲ್ಲಿ ಪರಾರಿಯಾಗಿದ್ದಾನೆ.

ಬೈಟ್: ಯಶೋಧ, ಮಾಂಗಲ್ಯ ಸರ ಕಳೆದುಕೊಂಡವರು

ಈ ಸಂದರ್ಭದಲ್ಲಿ ವೃದ್ದೆ ಯಶೋಧರವರು ಕೂಗಿಕೊಂಡಿದ್ದು ಅವರ ಪತಿ ಹಿಂಭಾಗದಲ್ಲಿರುವ ಮನೆಯಲ್ಲಿದ್ದರಿಂದ ಕೇಳಿಸಿಲ್ಲ. ಅಕ್ಕಪಕ್ಕದಲ್ಲೂ ಯಾರು ಇಲ್ಲದ ಕಾರಣ ಕಳ್ಳರಿಗೆ ಅನುಕೂಲವಾಗಿದೆ. ಮಾಂಗಲ್ಯ ಸರ ಸುಮಾರು 60 ಗ್ರಾಂ ತೂಕವಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುವಾಗಿದೆ. ಪಟ್ಟಣದ ಪ್ರತಿಷ್ಠಿತ ಬಡಾವಣೆಯಲ್ಲಿ ಈ ರೀತಿಯ ಘಟನೆ ನಡೆದಿರುವುದು ಹಲವು ಆತಂಕಕ್ಕೆ ಕಾರಣವಾಗಿದೆ. ಬಡಾವಣೆಯಲ್ಲಿ ಹಲವಾರು ಶ್ರೀಮಂತರಿದ್ದರು ಸಹ ಮನೆಗೆ ಸಿಸಿ ಟಿವಿಗಳನ್ನು ಅಳವಡಿಸಿಕೊಳ್ಳದಿರುವುದರಿಂದ ಕಳ್ಳರಿಗೆ ಈ ರೀತಿಯ ಕೃತ್ಯವೆಸಗಲು ಸಹಾಯಕಾರಿಯಾಗಿದೆ.

ಬೈಟ್: ಸತ್ಯ, ಯೋಶೋಧರ ಪತಿ.

ಇನ್ನು ಈ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ನೊಂದ ದಂಪತಿ ದೂರು ನೀಡಿದ್ದು, ದೂರಿನನ್ವಯ ಪ್ರಕರಣ ದಾಖಲಾಗಿದೆ.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Oct 24, 2019, 5:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.