ಹಾಸನ: ಜಿಲ್ಲೆಯಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ ರಾತ್ರಿ ಬಸ್ ನಿಲ್ದಾಣದಿಂದ ಮನೆಗೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿ ಮೊಬೈಲ್ ಮತ್ತು ಆತನ ಬಳಿಯಿದ್ದ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಹಾಸನದ ಹೊಸ ಬಸ್ ನಿಲ್ದಾಣದ ಬಳಿ ಇರುವ ರೈಲ್ವೆ ಬ್ರಿಡ್ಜ್ ಸಮೀಪ ನಡೆದಿದೆ. ಮಹದೇವ್ (54) ಹಲ್ಲೆಗೊಳಗಾದ ವ್ಯಕ್ತಿ.
ನಡೆದಿದ್ದೇನು?: ಮಹದೇವ್ ಮೂಲತಃ ಕೊಡಗಿನವರು. ದೂರದ ಊರಿಗೆ ಹೋಗಿದ್ದ ಅವರು ಬರುವಾಗ ಸ್ವಲ್ಪ ತಡವಾಗಿತ್ತು. ಯುಗಾದಿ ಬಸ್ ನಿಲ್ದಾಣದ ಮೂಲಕ ಮನೆಗೆ ನಡೆದುಕೊಂಡು ಹೋಗುತ್ತಿರುವ ವೇಳೆ ರೈಲ್ವೆ ಗೇಟ್ ಸಮೀಪ ದುಷ್ಕರ್ಮಿಯೊಬ್ಬ ಮಹದೇವ್ ಅವರಿಗೆ ಮಾರಕಾಸ್ತ್ರ ತೋರಿಸಿ, ಮೊಬೈಲ್ ಹಾಗೂ ನಗದು ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹದೇವ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಅಲ್ಲೇ ಬಸ್ ನಿಲ್ದಾಣದಿಂದ ಬರುತ್ತಿದ್ದ ವ್ಯಕ್ತಿ ಘಟನೆಯನ್ನು ಗಮನಿಸಿ ದುಷ್ಕರ್ಮಿಯನ್ನು ಹಿಡಿಯಲು ಮುಂದಾಗಿದ್ದಾರೆ. ಅಷ್ಟರಾಗಲೇ ಮೊಬೈಲ್, ನಗದು ದೋಚಿ ಪರಾರಿಯಾಗಿದ್ದಾರೆ. ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಡವನ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಹಾವೇರಿ: ಕ್ಷುಲ್ಲಕ ಕಾರಣಕ್ಕಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿತ ಆರೋಪ... ನಾಲ್ವರ ಬಂಧನ
"ಮೂಲತ: ನಾನು ಮಡಿಕೇರಿಯವನು. ಕೆಲಸದ ನಿಮಿತ್ತ ಹಾಸನಕ್ಕೆ ಬಂದಿದ್ದೆ. ಬಸ್ ತಡವಾಗಿದ್ದರಿಂದ ಬಸ್ ನಿಲ್ದಾಣದಿಂದ, ಹಾಸನದ ಕೆಆರ್ಪುರಂ ಬಡಾವಣೆಗೆ ತೆರಳಬೇಕಿತ್ತು. ಯಾವುದೇ ವಾಹನದ ವ್ಯವಸ್ಥೆ ಇಲ್ಲದಿದ್ದರಿಂದ ನಡೆದುಕೊಂಡು ಹೋಗುತ್ತಿದ್ದೆ. ಈ ವೇಳೆ ಎದುರಿನಿಂದ ಬಂದ ವ್ಯಕ್ತಿಯೊಬ್ಬ ಏಕಾಏಕಿ ನನ್ನ ಜೊತೆ ಮಾತಿಗಿಳಿದು ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಕೇಳಿದ. ನಾನು ವಿರೋಧ ವ್ಯಕ್ತಪಡಿಸಿದಕ್ಕೆ ನನ್ನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಗಾಯಗೊಳಿಸಿದ್ದಾನೆ. ತಕ್ಷಣ ಸ್ಥಳೀಯರೊಬ್ಬರು ನನ್ನ ನೆರವಿಗೆ ಬಂದು ನನ್ನ ಪ್ರಾಣ ಉಳಿಸಿದ್ದಾರೆ" ಎಂದು ಹಲ್ಲೆಗೊಳದಾವ ವ್ಯಕ್ತಿ ಮಹದೇವ್ ಹೇಳಿದರು.
ಬಳಿಕ ಸ್ಥಳೀಯರೊಬ್ಬರು ಮಾತನಾಡಿ, "ಇಂತಹ ದರೋಡೆ ಪ್ರಕರಣಗಳು ಇದೇ ಸ್ಥಳದಲ್ಲಿ ನಡೆದಿರುವುದು ಹೊಸದೇನಲ್ಲ. ಹಿಂದೆ ಸಾಕಷ್ಟು ಪ್ರಕರಣಗಳು ನಡೆದಿದೆ. ಅಲ್ಲದೇ ಈ ಸ್ಥಳದಲ್ಲಿ ಕೊಲೆ ಪ್ರಕರಣಗಳು ನಡೆದಿರುವ ಉದಾಹರಣೆಗಳಿವೆ. ಹೀಗಾಗಿ ಪೊಲೀಸ್ ಇಲಾಖೆ ಇಲ್ಲಿ ರಾತ್ರಿಯ ವೇಳೆ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡುವ ಮೂಲಕ ದರೋಡೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು" ಎಂದು ಆಗ್ರಹಿಸಿದರು.
ಇದನ್ನೂ ಓದಿ: ಧಾರವಾಡದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ: ಸ್ಥಳೀಯರ ಮೊಬೈಲ್ನಲ್ಲಿ ದೃಶ್ಯ ಸೆರೆ.. WATCH VIDEO
ಜುಲೈ ತಿಂಗಳಿನಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿತ್ತು. 6 ಮಂದಿ ದುಷ್ಕರ್ಮಿಗಳು ಒಬ್ಬ ರೌಡಿಶೀಟರ್ನನ್ನು ಹಾಡಹಗಲೇ ಮನಸೋ ಇಚ್ಚೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಮಾಸ್ತಿಗೌಡ @ಮಾಸ್ತಿ ಹೊನ್ನ ಎಂಬವರು ಮಾರನಹಳ್ಳಿಯಿಂದ ಚನ್ನರಾಯಪಟ್ಟಣದ ಖಾಸಗಿ ಟೈಲ್ಸ್ ಮುಳುಗಿ ಅಂಗಡಿಗೆ ಭೇಟಿ ನೀಡಿ ವಾಪಸ್ ರಸ್ತೆ ದಾಟುತ್ತಿದ್ದ ವೇಳೆ, ದ್ವಿಚಕ್ರ ವಾಹನ ಮತ್ತು ಕಾರಿನಲ್ಲಿ ಬಂದ ಸುಮಾರು 6 ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಕೊಚ್ಚಿ ಪರಾರಿಯಾಗಿದ್ದರು.