ETV Bharat / state

ಗಂಭೀರ ಲಕ್ಷಣಗಳಿರದ ಸೋಂಕಿತರಿಗೆ ಮೊರಾರ್ಜಿ ಹಾಸ್ಟೆಲ್‍ಗಳಲ್ಲಿ ಚಿಕಿತ್ಸೆ: ಸಚಿವ ಸಿ.ಸಿ.ಪಾಟೀಲ್​​ - ಸಚಿವ ಸಿ.ಸಿ.ಪಾಟೀಲ್

ಯಾವುದೇ ರೀತಿಯ ಗಂಭೀರ ಲಕ್ಷಣಗಳು ಕಂಡು ಬರದ ಕೊರೊನಾ ಸೋಂಕಿತರಿಗೆ ಆಯಾ ತಾಲೂಕಿನಲ್ಲಿರುವ ಮೊರಾರ್ಜಿ ವಸತಿ ಹಾಸ್ಟೆಲ್‍ಗಳಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಿದ್ದೇವೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್​ಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.

Minister C. C. Patil statement about covid-19  Precautionary measures
ಗಂಭೀರ ಲಕ್ಷಣಗಳಿರದ ಸೋಂಕಿತರಿಗೆ ಮೊರಾರ್ಜಿ ವಸತಿ ಹಾಸ್ಟೆಲ್‍ಗಳಲ್ಲಿ ಚಿಕಿತ್ಸೆ: ಸಚಿವ ಸಿ.ಸಿ.ಪಾಟೀಲ್
author img

By

Published : Jul 1, 2020, 7:26 PM IST

ಗದಗ: ಜನರಲ್ಲಿ ಲಾಕ್‍ಡೌನ್ ಸಮಯದಲ್ಲಿದ್ದ ಶಿಸ್ತು ಈಗ ಮಾಯವಾಗಿದೆ. ಲಾಕ್‍ಡೌನ್ ಸಡಿಲಿಕೆಯಾಗಿದೆಯಷ್ಟೇ, ಕೊರೊನಾ ಸೋಂಕಿನಿಂದ ಮುಕ್ತಿ ದೊರೆತಿಲ್ಲ ಎಂಬುದನ್ನ ಜನರು ಮರೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.

ಗಂಭೀರ ಲಕ್ಷಣಗಳಿರದ ಸೋಂಕಿತರಿಗೆ ಮೊರಾರ್ಜಿ ಹಾಸ್ಟೆಲ್‍ಗಳಲ್ಲಿ ಚಿಕಿತ್ಸೆ: ಸಚಿವ ಸಿ.ಸಿ.ಪಾಟೀಲ್

ನಗರಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯ ಗಂಭೀರ ಲಕ್ಷಣಗಳು ಕಂಡು ಬರದ ಕೊರೊನಾ ಸೋಂಕಿತರಿಗೆ ಆಯಾ ತಾಲೂಕಿನಲ್ಲಿರುವ ಮೊರಾರ್ಜಿ ವಸತಿ ಹಾಸ್ಟೆಲ್‍ಗಳಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಿದ್ದೇವೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್​ಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು. ಮೊರಾರ್ಜಿ ವಸತಿ ಹಾಸ್ಟೆಲ್‍ಗಳಲ್ಲಿ ವೈದ್ಯಕೀಯ ಹಾಗೂ ಇತರೆ ಮೂಲ ಸೌಕರ್ಯಗಳ ಕೊರತೆಯಾಗದಂತೆ ಕ್ರಮ ವಹಿಸಬೇಕು. ಸೋಂಕಿತರಿಗೆ ಹಾಗೂ ಕ್ವಾರಂಟೈನ್‍ನಲ್ಲಿರುವವರಿಗೆ ಉತ್ತಮ ಆಹಾರ, ವಸತಿ ನೀಡಬೇಕು ಎಂದು ಸೂಚಿಸಲಾಗಿದ್ದು, ಅದಕ್ಕಾಗಿ ನೋಡಲ್ ಅಧಿಕಾರಿಗಳನ್ನ ನೇಮಿಸಲಾಗಿದೆ ಎಂದರು.

ಐಎಲ್‍ಐ ಹಾಗೂ ಸಾರಿ ಲಕ್ಷಣಗಳಿರುವವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು. ಇದನ್ನು ಆಸ್ಪತ್ರೆಯವರು ಆನ್‍ಲೈನ್‍ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ಸರ್ಕಾರದ ಕಾರ್ಯಸೂಚಿಗಳನ್ನ ತಪ್ಪದೇ ಎಲ್ಲರೂ ಪಾಲಿಸಬೇಕು. ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಡೆಗೆ ಜಾಗೃತಿಯೇ ಬಹು ಪರಿಣಾಮಕಾರಿ ಕ್ರಮ. ಆದ್ದರಿಂದ ಜನರು ಸೋಂಕು ತಡೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು 3 ದಿನಗಳ ಕಾಲ ಜಾಗೃತಿ ಕಾರ್ಯಕ್ರಮ ಜಿಲ್ಲಾಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದನ್ನ ಎಲ್ಲರೂ ಅರಿಯಬೇಕು. ಸಾರ್ವಜನಿಕರು, ಸಂಘ ಸಂಸ್ಥೆಗಳು ಕೋವಿಡ್-19 ಸೋಂಕು ತಡೆಯ ನಿಯಮಗಳನ್ನ ಉಲ್ಲಂಘಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ದಂಡ ಹಾಕಲಾಗುವುದು. ಸರ್ಕಾರದ ನಿಯಮಾವಳಿಗಳು ಉಲ್ಲಂಘನೆಯಾಗದಂತೆ ನೋಡಲ್ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.

ಜನರಲ್ಲಿ ಲಾಕ್‍ಡೌನ್ ಸಮಯದಲ್ಲಿದ್ದ ಶಿಸ್ತು, ಈಗ ಮಾಯವಾಗಿದೆ. ಲಾಕ್‍ಡೌನ್ ಸಡಿಲಿಕೆಯಾಗಿದೆಷ್ಟೇ, ಕೊರೊನಾ ಸೋಂಕಿನಿಂದ ಮುಕ್ತಿ ದೊರೆತಿಲ್ಲ ಎಂಬುದನ್ನ ಜನರು ಮರೆಯಬಾರದು. ಮದುವೆ ಸಮಾರಂಭಗಳಂತೆ ಶವ ಸಂಸ್ಕಾರಕ್ಕೂ ಕಡಿಮೆ ಜನ ಸೇರಿ ಅಂತ್ಯಕ್ರಿಯೆ ನೆರವೇರಿಸಬೇಕು. ಮದುವೆ ಸಮಾರಂಭಗಳಿಗೆ 50 ಜನಕ್ಕಿಂತ ಅಧಿಕ ಜನ ಸೇರಬಾರದು. ತಹಶೀಲ್ದಾರ್​ರಿಂದ ಕಡ್ಡಾಯವಾಗಿ ಅನುಮತಿ ಪಡೆದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಮದುವೆ ಸಮಾರಂಭಗಳನ್ನ ನಡೆಸಬೇಕು ಎಂದರು‌‌‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.