ಗದಗ: ಗೋದಾಮುಗಳಲ್ಲಿ ಅಪಾರ ಪ್ರಮಾಣದ ಯೂರಿಯಾ ಗೊಬ್ಬರ ಇದ್ದರೂ ಸಹಿತ ಗದಗನಲ್ಲಿ ರೈತರಿಗೆ ಸಿಗದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಖ್ಯವಾಗಿ ಕೃತಕ ಅಭಾವ ಸೃಷ್ಟಿ ಮಾಡಿ ಬಳಿಕ ಗೊಬ್ಬರದ ಅಂಗಡಿ ಮಾಲೀಕರು ದುಬಾರಿ ಬೆಲೆಗೆ ಗೊಬ್ಬರ ಮಾರಾಟ ಮಾಡುವಂತಹ ಪರಿಸ್ಥಿತಿಗೆ ತಲುಪಿಸುತ್ತಾರೆ ಎಂದು ರೈತರು ಆರೋಪ ಮಾಡಿದ್ದಾರೆ.
ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಡರಗಿ ತಾಲೂಕಿನ ನೂರಾರು ರೈತರು ಸದ್ಯ ರಸಗೊಬ್ಬರಕ್ಕಾಗಿ ಪರದಾಡ್ತಿದ್ದಾರೆ. ಬಿದರಳ್ಳಿ, ವಿಠಲಾಪೂರ ಗ್ರಾಮದ ರೈತರು ಕೂಡಾ ಯೂರಿಯಾ ಗೊಬ್ಬರ ಸಿಗದೇ ಕಂಗಾಲಾಗಿದ್ದಾರೆ.

ಇತ್ತ ಮುಂಡರಗಿಯ ಶಾಂಭವಿ ರಸಗೊಬ್ಬರ ಗೋದಾಮಿನಲ್ಲಿ ಅಪಾರ ಪ್ರಮಾಣದ ರಸಗೊಬ್ಬರ ಇದ್ದರೂ ರೈತರಿಗೆ ನೀಡಿದ ಗೋಳಾಡಿಸ್ತಿದ್ದಾರೆ. ಕೃತಕ ಅಭಾವ ಸೃಷ್ಟಿಸಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ.
ಸೂಕ್ತ ಸಮಯಕ್ಕೆ ರಸಗೊಬ್ಬರ ಹಾಕದಿದ್ರೆ ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ರಸಗೊಬ್ಬರ ಅಂಗಡಿ ಮಾಲೀಕರ ವಿರುದ್ಧ ಕ್ರಮಕ್ಕೆ ಕೈಗೊಳ್ಳಬೇಕು ಎಂದು ರೈತರ ಒತ್ತಾಯಿಸಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ರೂ ಇತ್ತ ಕೃಷಿ ಇಲಾಖೆಯವರು ನಮಗೂ ಅದಕ್ಕೂ ಸಂಬಂಧ ಇಲ್ಲ ಅಂತ ವರ್ತಿಸುತ್ತಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ.