ಗದಗ: ಕೊರೊನಾ ವೈರಸ್ ತಡೆಗೆ ದೇಶಾದ್ಯಂತ ಲಾಕ್‌ಡೌನ್ ಇದ್ರೂ ಅಕ್ರಮ ಮರಳು ದಂಧೆ ಕೋರರಿಗೆ ಮಾತ್ರ ಅದು ಅನ್ವಯವಾಗಿಲ್ವೇನೋ ಅನ್ಸುತ್ತಿದೆ. ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ಹಳ್ಳದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಟ್ರ್ಯಾಕ್ಟರ್ ಮತ್ತು ಜೆಸಿಬಿ ಮೂಲಕ ಹಗಲಿರುಳು ಹಳ್ಳದ ಒಡಲು ಬಗೆಯಲಾಗುತ್ತಿದೆ.
ಇತ್ತ ಅಧಿಕಾರಿಗಳು ಕೊರೊನಾ ವೈರಸ್ ನಿಯಂತ್ರಣಕ್ಕೆ ಹಗಲಿರುಳು ಕೆಲಸ ಮಾಡ್ತಿದ್ದಾರೆ. ಆದರೆ, ಇತ್ತ ಇದನ್ನೇ ಬಂಡವಾಳ ಮಾಡಿಕೊಂಡ ಮರಳು ದಂಧೆಕೋರರು ಜೆಸಿಬಿ ಮೂಲಕ ಭೂ ತಾಯಿಯ ಒಡಲು ಬಗೆಯುತ್ತಿದ್ದಾರೆ.