ಗದಗ: ನಗರದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಿಬ್ಬಂದಿ ಸರಿಯಾಗಿ ಕಚೇರಿಗೆ ಬಾರದ ಹಿನ್ನೆಲೆಯಲ್ಲಿ ಜನರು ಪರದಾಡುವಂತಾಗಿದೆ.
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಯಲ್ಲಿ ಎಇಇ, ಎಂಬಿ ಸಂಶಿ, ಎಇ ಕಿರಣ ಲಂಬಾಣಿ ಸೇರಿ 8 ಸಿಬ್ಬಂದಿ ಇದ್ದಾರೆ. ಆದರೆ, ಈ ಸಿಬ್ಬಂದಿ ಕಚೇರಿಯ ವಿದ್ಯುತ್ ದೀಪ, ಪ್ಯಾನ್ ಆನ್ ಮಾಡಿ ಹೊರಗೆ ಹೋಗುತ್ತಿದ್ದಾರೆ. ಇಂದು ಬೆಟಗೇರಿ ನಗರಸಭೆ ಮಾಜಿ ಸದಸ್ಯ ಎಂ ಸಿ ಶೇಖ್ ಅವರು ಕಚೇರಿಗೆ ಭೇಟಿ ನೀಡಿದ್ದ ವೇಳೆ ಕಚೇರಿ ಖಾಲಿ ಖಾಲಿಯಾಗಿತ್ತು. ಕೆಲ ಹೊತ್ತಿನ ನಂತರ ಒಬ್ಬ ಸಿಬ್ಬಂದಿ ಬಂದು ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೀಟಿಂಗ್‌ಗೆ ಹೋಗಿದ್ದಾರೆ. ಹಾಗಾಗಿ ಕಚೇರಿ ಖಾಲಿಯಾಗಿದೆ ಎಂದರು.
ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಎಂ ಸಿ ಶೇಖ್, ಒಬ್ಬ ಅಧಿಕಾರಿ ಮೀಟಿಂಗ್ ಹೋದ್ರೆ, ಇಡೀ ಕಚೇರಿ ಹೇಗೆ ಖಾಲಿಯಾಗುತ್ತೆ ಅಂತಾ ಪ್ರಶ್ನಿಸಿದ್ದಾರೆ. ಅಲ್ಲದೇ ಇಲ್ಲಿನ ಸಿಬ್ಬಂದಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡೋದಿಲ್ಲ. ಅವರು ನಮ್ಮ ಕೈಗೆ ಸಿಗೋದೆ ಇಲ್ಲ ಎಂದು ಆರೋಪಿಸಿದ್ದಾರೆ.