ಗದಗ : ನಗರದಲ್ಲಿ ಪ್ರವಾಸಿಗರ ಕಲರವ ಜೋರಾಗಿತ್ತು, ಬೋಟಿಂಗ್, ವಾಕಿಂಗ್ ಅಂತ ಸಂಜೆಯಾದ್ರೆ ಸಾಕು ನಗರವಾಸಿಗಳು ತಮ್ಮ ಫೇವರೆಟ್ ಪ್ಲೇಸ್ ಭೀಷ್ಮ ಕರೆಯ ಹಾದಿ ಹಿಡಿಯುತ್ತಿದ್ದರು. ಆದ್ರೆ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದರಿಂದ ಕರೆ ಬತ್ತಿ ಹೋಗಿದ್ದು, ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ.
ನಗರದ ಹೃದಯ ಭಾಗದಲ್ಲಿ ಇರುವ ಐತಿಹಾಸಿಕ ಕೆರೆ ಇದಾ ಗಿದೆ. ಈ ಬಾಗದಲ್ಲಿ ದೊಡ್ಡ ಕೆರೆ ಇದಾಗಿರುವುದರಿಂದ ಇದಕ್ಕೆ ಭೀಷ್ಮ ಕೆರೆ ಅಂತ ಹೆಸರಿಡಲಾಗಿದೆ. ಹೀಗಾಗಿ ಭೀಷ್ಮನ ಒಡಲಲ್ಲಿ 108 ಅಡಿ ಎತ್ತರದ ವಿಶ್ವ ಗುರು ಬಸವಣ್ಣ ಮೂರ್ತಿ ರಾರಾಜಿಸುತ್ತಿದೆ. ಹೀಗಾಗಿ ಇದು ಪ್ರವಾಸಿಗರ ಬೆಸ್ಟ್ ಪ್ಲೇಸ್ ಆಗಿತ್ತು. ಇಲ್ಲಿಗೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಬೃಹತ್ ಕೆರೆಗೆ ತುಂಗಭದ್ರಾ ನದಿ ನೀರು ಹರಿಸಿ ಬೋಟಿಂಗ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದಲೂ ಎಂಥಾ ಬೇಸಿಗೆಯಲ್ಲೂ ಕೂಡ ಭೀಷ್ಮ ಕೆರೆ ತುಂಬಿ ತುಳುಕುತ್ತಿತ್ತು.
ಹೀಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಸ್ಥಳೀಯರು, ಹೊರ ಜಿಲ್ಲೆಯ ಪ್ರವಾಸಿಗರ ದಂಡೇ ಹರಿದು ಬರ್ತಾಯಿತ್ತು. ಜನ ಭೀಷ್ಮ ಕೆರೆಯ ಒಡಲಲ್ಲಿ ಕಲರ್ ಫುಲ್ ಬೋಟಿಂಗ್ ಮಾಡಿ ಮಸ್ತ್ ಮಜಾ ಮಾಡ್ತಾಯಿದ್ರು. ಬೈಕ್ ಬೋಟಿಂಗ್ ಥ್ರೀಲ್ ಗೆ ಯುವ ಪಡೆ ಮಾರು ಹೋಗಿತ್ತು. ಆದ್ರೆ ಈ ವರ್ಷ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ತುಂಬಾ ಕಡಿಮೆಯಾಗಿದೆ. ಹೀಗಾಗಿ ಭೀಷ್ಮ ಕೆರೆಗೆ ನೀರು ಹರಿಸಿಲ್ಲ. ಇದ್ರಿಂದ ಕೆರೆಯಲ್ಲಿ ನೀರಿನ ಪ್ರಮಾಣ ತುಂಬ ಕಡಿಮೆಯಾಗಿದ್ದು ಬೋಟ್ ಗಳು ಮೂಲೆ ಸೇರಿವೆ, ಹಸಿರು ಮಾಯವಾಗಿದೆ. ಹೀಗಾಗಿ ಪ್ರವಾಸಿಗರ ಸಂಖ್ಯೆ ಕಡಿಯಾಗಿದೆ.
ಬಿಸಿಲಿನ ಝಳದಲ್ಲಿ ಬೋಟಿಂಗ್ ಮಾಡಿ ಕೂಲ್ ಆಗಬೇಕು ಅಂದ್ಕೊಂಡು ಬಂದ ಪ್ರವಾಸಿಗರಿಗೆ ನಿರಾಸೆಯುಂಟಾಗಿ ವಾಪಸ್ಸು ಮನೆ ಹಾದಿ ಹಿಡಿಯುತ್ತಿದ್ದಾರೆ. ಭೀಷ್ಮನ ಒಡಲು ಈಗ ಬಿರುಕು ಬಿಡುತ್ತಿದೆ. ವಿಶ್ವ ಗುರು ಬಸವಣ್ಣನವರು ಕೂಡ ಮೌನವಾಗಿದ್ದಾರೆ. ಫುಲ್ ನೀರು ಕಲರ್ ಫುಲ್ ಬೋಟಿಂಗ್ ನಿಂದ ಸದಾ ಗಿಜಿಗುಡುತ್ತಿದ್ದ ಬಸವಣ್ಣನವರ ಅಂಗಳ ಪ್ರವಾಸಿಗರು ಇಲ್ಲದೇ ಭಣಗುಡುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಆದಾಯ ಕೂಡ ಕಡಿಮೆಯಾಗಿ. ಪ್ರತಿನಿತ್ಯ ಬೋಟಿಂಗ್ ನಿಂದ ಬರುವ 25 ಸಾವಿರ ಆದಾಯಕ್ಕೂ ಕೊಕ್ಕೆ ಬಿದ್ದಿದೆ.
ಪ್ರವಾಸೋದ್ಯಮ ಬೆಳವಣಿಗೆಗೆ ಶಾಸಕ ಎಚ್ ಕೆ ಪಾಟೀಲ್ ಶಾಸಕರ ಅನುದಾನದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದ್ರು. ಎರಡು ಇಂಜಿನ್ ಬೋಟ್, ಎರಡು ಬೈಕ್ ಬೋಟ್, ಎರಡು ಪೈಡಲ್ ಬೋಟ್ ನಲ್ಲಿ ಮಸ್ತ್ ಎಂಜಾಯ್ ಮಾಡುವ ಪ್ರವಾಸಿಗರ ಕನಸು ಸದ್ಯಕ್ಕೆ ಸ್ಥಗಿತವಾಗಿದೆ. ಬೇಸಿಗೆಯಲ್ಲಿ ರಜಾ ಮಜಾ ಮಾಡುವ ವಿದ್ಯಾರ್ಥಿಗಳಿಗೂ ನಿರಾಸೆಯಾಗಿದೆ. ಪ್ರತಿ ವರ್ಷವೂ ಬೇಸಿಗೆ ಬಂದ್ರೆ ಸಾಕು ಭೀಷ್ಮನ ಒಡಲಲ್ಲಿ ಕಲರ್ ಫುಲ್ ಬೋಟಿಂಗ್ ಮಾಡಿ ಮಜಾ ಮಾಡುವ ಪ್ರವಾಸಿಗರಿಗೆ ಈ ಬಾರಿ ನಿರಾಸೆಯಾಗಿದೆ.