ETV Bharat / state

ಕೇವಲ 700. ರೂಗೆ  ಮೆಟ್ರಿಕ್ ಟನ್ ಮರಳು ಸಿಗುತ್ತೆ : ಸಚಿವ ಸಿ.ಸಿ. ಪಾಟೀಲ್ - c c patil news

ಕೊರೊನಾ ಪರಿಸ್ಥಿತಿ ಸದ್ಯ ಗದಗ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದೆ. ಸಾವಿನ ಪ್ರಮಾಣವೂ ಇಲ್ಲ ಸೋಂಕಿತರ‌ ಸಂಖ್ಯೆಯೂ ಕಡಿಮೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್​ ಹೇಳಿದ್ದಾರೆ.

c c patil
ರಾಜ್ಯದಲ್ಲಿ ಒಂದು ಮೆಟ್ರಿಕ್ ಟನ್ ಗೆ ಕೇವಲ 700. ರೂಗೆ ಮರಳು ಸಿಗುತ್ತೆ : ಸಚಿವ ಸಿ.ಸಿ. ಪಾಟೀಲ್
author img

By

Published : May 16, 2020, 9:51 PM IST

ಗದಗ : ನೂತನ ಮರಳು ನೀತಿಗೆ ಅನುಗುಣವಾಗಿ ಒಂದು ಮೆಟ್ರಿಕ್ ಟನ್​ಗೆ ಕೇವಲ 700 ರಿಂದ 750 ರೂಗೆ ಮರಳು ಸಿಗುವ ರೀತಿಯಲ್ಲಿ ವ್ಯವಸ್ಥೆ ಮಾಡ್ತೇವೆ ಅಂತ ಗದಗನಲ್ಲಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ನೂತನ ಮರಳು ನೀತಿ ಜಾರಿಗೆ ಬಂದು, ಕರ್ನಾಟಕದಲ್ಲಿ MML ಮತ್ತು ಹಟ್ಟಿ ಗೋಲ್ಡ್ ಮೈನ್ಸ್ ಎರಡು ಎಜೆನ್ಸಿ ಕಂಪನಿಗಳಿಗೆ ಲೈಸೆನ್ಸ್ ‌ನೀಡಿ ಆದೇಶ ಹೊರಡಿಸಿದ್ದೇವೆ ಎಂದರು.‌ ಸಿಎಂ ಯಡಿಯೂರಪ್ಪ ಅವರಿಂದ ಅನುಮತಿ ತೆಗೆದುಕೊಂಡು ಶಿವಮೊಗ್ಗ ಜಿಲ್ಲೆಯಿಂದ ಮರಳು ತೆಗೆಯಲು ಪ್ರಾರಂಭ ಮಾಡಲಿದ್ದೇವೆ. ಉದ್ಯಮಿದಾರರಿಗೆ, ರೈತರಿಗೆ ಎಲ್ಲರಿಗೂ ಕಡಿಮೆ ಬೆಲೆಯಲ್ಲಿ‌ ಮರಳು ಸಿಗುವಂತೆ ಮಾಡ್ತೇವೆ. ಕರ್ನಾಟಕ ಇತಿಹಾಸದಲ್ಲಿ ಇದೊಂದು ಹೊಸ ದಾಖಲೆಯ ಮರಳು ‌ನೀತಿಯಾಗಲಿದೆ ಎಂದರು.

ಇನ್ನು ಲಾಕ್​ಡೌನ್ ನಂತರ ಗದಗ ಜಿಲ್ಲೆಗೆ 3,195 ಜನರು ಹೊರಗಡೆಯಿಂದ ಬಂದಿದ್ದಾರೆ. ಎಲ್ಲರನ್ನೂ ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಲಾಗಿದೆ. ಗೋವಾದಿಂದ ಕಾರವಾರಕ್ಕೆ ಬಂದ್ರೆ ಅಲ್ಲಿಂದ ನಮ್ಮ ಜಿಲ್ಲೆಯವರಿಗೆ ಉಚಿತವಾಗಿ ಕರೆದುಕೊಂಡ ಬರಲಾಗಿದೆ ಅಂತಾ ತಿಳಿಸಿದ್ದಾರೆ.

ಕೊರೊನಾ ಸೋಂಕಿತ ಪಿ- 912 ಇಂದು ಗುಣಮುಖನಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ 06 ಜನ ಜನರಿಗೆ ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐದು ಜನ ಗುಜರಾತ್​​​​​​​ನಿಂದ ಬಂದವರಾಗಿದ್ದು, ಒಬ್ಬರು ಮಾತ್ರ‌ ಗದಗನಲ್ಲಿನವರು. ಕೊರೊನಾ ಪರಿಸ್ಥಿತಿ ಸದ್ಯ ಗದಗ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದೆ. ಸಾವಿನ ಪ್ರಮಾಣವೂ ಇಲ್ಲ ಸೋಂಕಿತರ‌ ಸಂಖ್ಯೆಯೂ ಕಡಿಮೆಯಿದೆ. ಸೋಂಕಿತರ ಪತ್ತೆ ಕಾರ್ಯ ನಡೆಯುತ್ತಿದ್ದು, ಶೇಕಡಾ 44 ರಷ್ಟು ಸರ್ವೆ ಕಾರ್ಯವನ್ನು ಮುಗಿಸಲಾಗಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.