ETV Bharat / state

ಮಾಜಿ ಸಿಎಂ ಯಡಿಯೂರಪ್ಪನವರು ಪ್ರಶ್ನಾತೀತ ನಾಯಕ: ಬಸವರಾಜ ಹೊರಟ್ಟಿ

ಯಡಿಯೂರಪ್ಪನವರು ನಾಲ್ಕು ಬಾರಿ ಸಿಎಂ ಆದವರು, ಅವರೊಬ್ಬ ಹೋರಾಟಗಾರ - ರಾಜಕಾರಣಿಗಳು ಟೀಕೆ, ಟಿಪ್ಪಣಿ ಬಿಟ್ಟು ರಾಜ್ಯದ ಅಭಿವೃದ್ಧಿಗಾಗಿ ಪ್ರಯತ್ನ ಪಡಬೇಕು - ಸಭಾಪತಿ ಬಸವರಾಜ ಹೊರಟ್ಟಿ

Legislative Council Chairman Basavaraj horatti
ಮಾಜಿ ಸಿಎಂ ಯಡಿಯೂರಪ್ಪನವರು ಪ್ರಶ್ನಾತೀತ ನಾಯಕ:ಬಸವರಾಜ ಹೊರಟ್ಟಿ
author img

By

Published : Feb 25, 2023, 6:24 PM IST

Updated : Feb 25, 2023, 6:58 PM IST

ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ

ಧಾರವಾಡ: ಇನ್ನು ಮುಂದೆ ಎಲ್ಲರೂ ಒಟ್ಟಿಗೆ ಸೇರುವುದಿಲ್ಲ, ಯಾವಾಗಲೂ ಕೊನೆ ಎನ್ನುವುದು ಹಿಂದಿನದರ ಎಲ್ಲವನ್ನೂ ಮರೆಸುತ್ತದೆ. ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪನವರು ಪ್ರಶ್ನಾತೀತ ನಾಯಕ ಎಂದು ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ವಿಧಾನಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಕೊನೆಯ ಭಾಷಣ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ನಾಲ್ಕು ಬಾರಿ ಸಿಎಂ ಆದವರು ಮತ್ತು ಅವರೊಬ್ಬ ಹೋರಾಟಗಾರ ಎಂದರು.

ಚುನಾವಣೆ ಬಂದಾಗ ಬೇರೆ ಏನೇ ಇರಬಹುದು, ಆದರೆ ಅಧಿವೇಶನ ನಡೆದಾಗ ಸರ್ಕಾರದ ಮೇಲೆ ಮತ್ತು ಒಬ್ಬರ ಮೇಲೆ ಒಬ್ಬರ ತಿಕ್ಕಾಟ ಇತ್ತು. ನಾನು ಕಳೆದ 6 ತಿಂಗಳಿಂದ‌ ನೋಡಿದ್ದೇನೆ. ಅಭಿವೃದ್ಧಿ ಬಗ್ಗೆ ಯಾವ ಪಕ್ಷದವರೂ ಮಾತನಾಡಿಲ್ಲ, ಇವರು ಅವರನ್ನು ಬೈಯುವುದು,‌ ಅವರು ಇವರನ್ನು ಬಯ್ಯೋದು ಈ‌ ರೀತಿ ರಾಜಕಾರಣಿಗಳು ಟೀಕೆ, ಟಿಪ್ಪಣಿ ಬಿಟ್ಟು ರಾಜ್ಯದ ಅಭಿವೃದ್ಧಿಗಾಗಿ ಪ್ರಯತ್ನ ಪಡಬೇಕು ಎಂದು ಸಲಹೆ ನೀಡಿದರು.

ನಿನ್ನೆ ಅಧಿವೇಶನ ಮುಗಿದಿದೆ. ಹೋಗುವ ಮುನ್ನ ಎಲ್ಲರೂ ಹೇಗೆ ಕ್ರೀಡೆ ಮುಗಿದ ನಂತರ ಗೆದ್ದವರು ಮತ್ತು ಸೋತವರು ಹಸ್ತಲಾಘವ ಮಾಡಿಕೊಳ್ಳುತ್ತಾರೋ ಅದೇ ರೀತಿ ಎಲ್ಲ ಪಕ್ಷದ ನಾಯಕರು ಮಾಡಿದ್ದಾರೆ. ಇದು ಒಳ್ಳೆಯದು, ಇದಕ್ಕಿಂತ ಮೊದಲು ರಾಜ್ಯದ ಬಗ್ಗೆ, ಜನರ ಬಗ್ಗೆ, ಸುಧಾರಣೆ ಬಗ್ಗೆ, ವೈಯಕ್ತಿಕ ಟೀಕೆ ಬಿಟ್ಟು ಪ್ರಯತ್ನ ಮಾಡಬೇಕಿತ್ತು‌. ಈಗಲಾದರೂ ಎಲ್ಲರೂ ತಿಳಿದುಕೊಂಡು ಮುಂದಿನ ದಿನಗಳಲ್ಲಿ ಸರ್ಕಾರ ಬಂದಾಗ ಒಳ್ಳೆಯ ವಾತಾವರಣ ನಿರ್ಮಾಣ ಆಗಲಿ ಎಂದು ಹಾರೈಸುತ್ತೇನೆ ಎಂದರು.

ಸ್ವಾಮೀಜಿಗಳು ವಿಧಾನಸೌಧಕ್ಕೆ ಬರಬಾರದು: ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆ‌ ಪಿ‌ ನಡ್ಡಾ ಅವರು ಸ್ವಾಮೀಜಿಗಳನ್ನು ರಾಜಕಾರಣಕ್ಕೆ ಕರೆದ‌‌‌ ವಿಚಾರವಾಗಿ ಪ್ರತಿಕ್ರಿಯಿಸಿದ ಹೊರಟ್ಟಿ, ಆ ಬಗ್ಗೆ ನಾನು ಹೇಳುವುದು ಸೂಕ್ತ ಅಲ್ಲಾ, ಮೊನ್ನೆ 8 ಜನ ಸ್ವಾಮೀಜಿಗಳು ವಿಧಾನಸೌಧಕ್ಕೆ ಬಂದಿದ್ದರು. ಸ್ವಾಮೀಜಿಗಳು ವಿಧಾನಸೌಧಕ್ಕೆ ಬರಬಾರದು. ಸ್ವಾಮಿಗಳು ಮಠ ಬಿಟ್ಟು ಹೊರ ಬರುವುದರಿಂದ ಅವರು ಆ ಅರ್ಥದಲ್ಲಿ‌ ಹೇಳಿರಬೇಕು‌.‌ ಮಠದಲ್ಲಿ ರಾಜಕಾರಣ ಸೇರಬಾರದು ಎಂದು ಹೇಳಿದ್ದೆ. ಆದರೆ ಅದನ್ನ ಎಲ್ಲರು‌ ಕೇಳಬೇಕಲ್ಲ ಎಂದರು.

ರಾಜಕಾರಣವು ಕೆಲ‌ ಮಠಗಳಲ್ಲಿ ಹುಟ್ಟುತ್ತಿವೆ, ಎಲ್ಲ ಮಠಗಳು ಹಾಗಲ್ಲಾ,‌ ಕೆಲ‌ ಮಠಗಳು ಇವೆ. ಸ್ವಾಮೀಜಿಗಳು ನಮಗೆ ಮಾದರಿ‌ಯಾಗಿರಬೇಕು, ಅವರು‌ ಇನ್ನೊಬ್ಬರಿಗೆ ಮಾದರಿಯಾಗಬೇಕಾದ್ದನ್ನು ಕಲಿಸಬೇಕು. ರಾಜಕಾರಣ ಇವತ್ತು ಕಲುಷಿತವಾಗಿದೆ. ಪ್ರಜಾಪ್ರಭುತ್ವ ಎಂದರೆ ಬಹಳ ಓವರ್ ಆಗಿದೆ‌. ಎಲ್ಲರೂ ಪ್ರಜಾಪ್ರಭುತ್ವದಲ್ಲಿ ಹಕ್ಕುಗಳನ್ನು ಚಲಾಯಿಸುತ್ತಾರೆ. ಆದರೆ ಕರ್ತವ್ಯಗಳನ್ನು ನಿರ್ಲಕ್ಷಿಸುತ್ತಾರೆ. ಓಟು ಹಾಕುವವರು ಎಲ್ಲಿಯವರೆಗೆ ಬುದ್ಧಿವಂತರಾಗುವುದಿಲ್ಲವೋ ಅಲ್ಲಿವರೆಗೆ‌ ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಭಾಪತಿಗಳು ಎಚ್ಚರಿಸಿದರು.

ಮಹದಾಯಿ ವಿಚಾರ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ಅನುಮತಿ ಕೊಟ್ಟರೂ, ಗೋವಾದವರು ಕ್ಯಾತೆ ತೆಗೆದರು. ಕಾರಣ ಪ್ರತಿ ಚುನಾವಣೆ ವೇಳೆ ಮಹದಾಯಿ ಇರೋದೆ. ಆದರೆ ಈಗ ಒಂದು ಹಂತಕ್ಕೆ ಬಂದಿತ್ತು, ಗೋವಾ ಮತ್ತೆ ಕೋರ್ಟ್ ಗೆ ಹೋಗಿ ಏನೋ‌ ಮಾಡಿದೆ. ಮಹದಾಯಿ ವಿಚಾರವಾಗಿ ನಾನು ಕಾನೂನು ಸಚಿವನಾಗಿದ್ದಾಗ ಮೂರು ರಾಜ್ಯದ ಸಭೆ ಮಾಡಿದ್ದೆ. ಕಾನೂನು ಪ್ರಕಾರ ಅವರಿಗೆ ಏನೂ ಹಕ್ಕಿಲ್ಲ. ಆದರೆ ಕೋರ್ಟ್​ ಕಚೇರಿ ಎಂದು ರಾಜಕೀಯ ನಡೆದಿದೆ ಎಂದು ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ನೀರು ಬಂದಾಗಲೇ ಸಮಸ್ಯೆ ಬಗೆಹರಿಯಲಿದೆ: ಮಹದಾಯಿ ಕರ್ನಾಟಕದ್ದೇ ಆಗಿದೆ, ಮಹಾರಾಷ್ಟ್ರಕ್ಕೆ ಗೋವಾಗೆ ಅಲ್ಲಾ, ಅನಿವಾರ್ಯವಾಗಿ ಕೆಲವೊಮ್ಮೆ ಕೋರ್ಟ್ ಆದೇಶ ಪಾಲನೆ ಮಾಡಬೇಕಾಗುತ್ತದೆ. ಈ‌ ಬಾರಿ ನೀರು ಬರಬಹುದು ಎಂದು ನಾನು ತಿಳಿದುಕೊಂಡಿದ್ದೆನೆ. ನಾನು ಸಚಿವ ಗೋವಿಂದ ಕಾರಜೋಳ‌ ಜೊತೆ ಮಾತನಾಡಿದ್ದೇನೆ ಈ ಬಾರಿ ಖಂಡಿತ ನೀರು ಬರಲಿದೆ, ನೀರು ಬಂದಾಗಲೇ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.

ಇದನ್ನೂ ಓದಿ:ನಾನೇ ಸ್ವಯಂ ಪ್ರೇರಿತವಾಗಿ ನಿವೃತ್ತಿಯಾಗಿದ್ದೇನೆ, ವೀರಶೈವ ಲಿಂಗಾಯತರು ಅಪಾರ್ಥ ಮಾಡಿಕೊಳ್ಳಬೇಡಿ: ಬಿಎಸ್​ವೈ

Last Updated : Feb 25, 2023, 6:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.