ಹುಬ್ಬಳ್ಳಿ: ಮಿರಿ ಮಿರಿ ಮಿಂಚೋ ಬಟ್ಟೆ ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕ್ತಿರೋ ಇವರೆಲ್ಲ ಸಿನಿಮಾ ನಟಿಯರು, ಮಾಡೆಲ್ಗಳು ಅಂದುಕೊಂಡ್ರೆ ನಿಮ್ಮ ಊಹೆ ಖಂಡಿತಾ ತಪ್ಪು. ಇವ್ರೆಲ್ಲಾ ಈಗಾಗ್ಲೆ ಮದುವೆಯಾಗಿ ಸಂಸಾರ ಅನ್ನೋ ಸಾಗರದಲ್ಲಿ ಸಾಗುತ್ತಿರುವ ತಾಯಂದಿರು.
ಇಂತಹ ದೃಶ್ಯ ಕಂಡುಬಂದಿದ್ದು ಹುಬ್ಬಳ್ಳಿಯ ಬಿ.ಡಿ.ಪಾಟೀಲ್ ಕಾಂಪ್ಲೆಕ್ಸ್ನಲ್ಲಿ. ತಾಯಂದಿರಿಗಾಗಿ ವಿಶೇಷವಾಗಿ ಹಮ್ಮಿಕೊಳ್ಳಲಾಗಿದ್ದ ‘ಮಿಸಸ್ ಬೆಸ್ಟ್ ಮಾಮ್ ಅವಾರ್ಡ್’ ಕಾರ್ಯಕ್ರಮದಲ್ಲಿ ಯಾವ ಮಾಡೆಲ್ಗಳಿಗೂ ಕಮ್ಮಿ ಇಲ್ಲದಂತೆ ಇವರು ರ್ಯಾಂಪ್ ವಾಕ್ ಮಾಡಿ ಹುಬ್ಬೇರಿಸುವಂತೆ ಮಾಡಿದ್ದಾರೆ.
ಎಸ್.ಕೆ ಶಿವಕಮಲ್ ಗ್ರೂಪ್ಸ್ ಪ್ರತಿವರ್ಷವೂ ವಿಭಿನ್ನವಾಗಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ತಾಯಂದಿರ ಈ ಕಾರ್ಯಕ್ರಮದಲ್ಲಿ ಬೆಸ್ಟ್ ಮಾಮ್ಗಾಗಿ ಹಲವು ಸುತ್ತಿನ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಂತಿಮವಾಗಿ ಒಬ್ಬರು ವಿನ್ನರ್ ಹಾಗೂ ರನ್ನರ್ ಅಪ್ ಎಂದು ವಿಜೇತರ ಆಯ್ಕೆ ಮಾಡಲಾಗಿದೆ. ಮಹಿಳೆಯರ ವಾಕ್, ವಸ್ತ್ರವಿನ್ಯಾಸ ಆಧರಿಸಿ ವಿಜೇತರ ಆಯ್ಕೆ ಮಾಡಲಾಗಿದೆ.
ಹುಬ್ಬಳ್ಳಿಯ ಅನುಷಾ ಮಿಸಸ್ ಬೆಸ್ಟ್ ಮಾಮ್ ಅವಾರ್ಡ್ ಗೆದ್ದುಕೊಂಡರೆ, ಲಾವಣ್ಯ ಸಾಳುಂಕಿ ರನ್ನರ್ ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನನ್ನ ಮಹದಾಸೆಯಾಗಿತ್ತು. ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಮುಂದೆ ಮಿಸಸ್ ಕರ್ನಾಟಕ ಸ್ಪರ್ಧೆಯಲ್ಲಿ ಭಾಗಿಯಾಗುವ ಕನಸು ಹೊಂದಿದ್ದೇನೆ ಅಂತ ವಿಜೇತೆ ಅನುಷಾ ಹೇಳಿದರು.
ಇದನ್ನೂ ಓದಿ: ವಾಣಿಜ್ಯ ನಗರಿಗೆ ಬರುತ್ತಿವೆ ವಿಶೇಷ ಸಾರ್ವಜನಿಕ ಶೌಚಾಲಯಗಳು