ETV Bharat / state

Vande Bharat train: ವಂದೇ ಭಾರತ್ ರೈಲು ಹುಬ್ಬಳ್ಳಿ ಆಗಮನಕ್ಕೆ ದಿನಗಣನೆ: ಎಸ್​ಡಬ್ಲ್ಯೂಆರ್ ಕೈ ಸೇರದ ಅಧಿಕೃತ ಮಾಹಿತಿ

ವಂದೇ ಭಾರತ್​ ರೈಲು ಚೆನ್ನೈನ ಪೆರಂಬೂರಿನಿಂದ ಹೊರಟು ಬೆಂಗಳೂರು ತಲುಪಿದ್ದು, ಇಲ್ಲಿನ ಕೆಎಸ್‌ಆರ್‌ ನಿಲ್ದಾಣದ 7ನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಲುಗಡೆಯಾಗಿದೆ.

Vande Bharat train to reach Hubli soon
ವಂದೇ ಭಾರತ್ ರೈಲು ಹುಬ್ಬಳ್ಳಿ ಆಗಮನಕ್ಕೆ ದಿನಗಣನೆ
author img

By

Published : Jun 17, 2023, 10:50 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಬಹುನೀರಿಕ್ಷಿತ ವಂದೇ ಭಾರತ್ ರೈಲು ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಆದರೆ ಭಾರತೀಯ ರೈಲ್ವೆ ಇಲಾಖೆಯಿಂದ ಇದುವರೆಗೂ ನೈಋತ್ಯ ರೈಲ್ವೆ ವಲಯಕ್ಕೆ ಮಾತ್ರ ಯಾವುದೇ ರೀತಿಯ ಅಧಿಕೃತ ಮಾಹಿತಿ ಕೂಡ ಲಭ್ಯವಾಗಿಲ್ಲ. ಜೂ.26ಕ್ಕೆ ವಂದೇ ಭಾರತ ರೈಲಿಗೆ ಚಾಲನೆ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಆದ್ರೆ ಇದುವರೆಗೂ ಅಧಿಕೃತ ಮಾಹಿತಿ ಮಾತ್ರ ಎಸ್.ಡಬ್ಲ್ಯೂ.ಆರ್ ಕೈ ಸೇರಿಲ್ಲ.

ಪ್ರತಿಷ್ಠಿತ ವಂದೇ ಭಾರತ್‌ ರೈಲು ಗುರುವಾರ ಬೆಂಗಳೂರು ರೈಲು ನಿಲ್ದಾಣಕ್ಕೆ ಆಗಮಿಸಿದೆ. ಬೆಂಗಳೂರು- ಧಾರವಾಡ ಮಾರ್ಗದಲ್ಲಿ ಸಂಚರಿಸಲು ಜೂ. 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಚಾಲನೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೂ ಮುನ್ನ ಸೋಮವಾರದಿಂದ ಇದರ ಪ್ರಾಯೋಗಿಕ ಚಾಲನೆ ನಡೆಯಲಿದೆ. ಎಂಟು ಬೋಗಿಗಳುಳ್ಳ ಮಿನಿ ವಂದೇ ಭಾರತ್‌ ಇದಾಗಿದೆ. ಚೆನ್ನೈನ ಪೆರಂಬೂರಿನಿಂದ ಹೊರಟು ಬೆಂಗಳೂರು ತಲುಪಿದ್ದು, ಇಲ್ಲಿನ ಕೆಎಸ್‌ಆರ್‌ ನಿಲ್ದಾಣದ 7ನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಲುಗಡೆಯಾಗಿದೆ ಎಂಬುವಂತ ಮಾಹಿತಿ ಲಭ್ಯವಾಗಿದೆ. ಆದರೆ ಧಾರವಾಡ-ಬೆಂಗಳೂರು ಸಂಚರಿಸುವ ವಂದೇ ಭಾರತ್ ರೈಲಿನ ಬಗ್ಗೆ ನೈಋತ್ಯ ರೈಲ್ವೆಗೆ ಮಾತ್ರ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಇನ್ನು ಈ ವಂದೇ ಭಾರತ್‌ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ ಮೂಲಕ ಧಾರವಾಡ ರೈಲು ನಿಲ್ದಾಣದವರೆಗೆ ಅಂದರೆ 487.47 ಕಿ.ಮೀ. ಸಂಚರಿಸಲಿದೆ. ಮಂಗಳವಾರ ಹೊರತುಪಡಿಸಿ ವಾರದ ಆರು ದಿನಗಳ ಕಾಲ ಇದು ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿಂದ 6 ಗಂಟೆ 55 ನಿಮಿಷಗಳ ಅಂತರದಲ್ಲಿ ಇದು ಧಾರವಾಡ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ. ಬೆಂಗಳೂರು ನಗರದಿಂದ ಬೆಳಗ್ಗೆ 5.45ಕ್ಕೆ ಹೊರಟು ಮಧ್ಯಾಹ್ನ 12.40ಕ್ಕೆ ಧಾರವಾಡ ತಲುಪಲಿದೆ. ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೊರಟು ರಾತ್ರಿ 8:10ಕ್ಕೆ ಬೆಂಗಳೂರು ನಗರವನ್ನು ತಲುಪುವ ನಿರೀಕ್ಷೆಯಿದೆ. ಇದು ಯಶವಂತಪುರ, ಸಂಪಿಗೆ ರೋಡ್‌ ರೈಲ್ವೇ ಸ್ಟೇಷನ್‌, ದಾವಣಗೆರೆ, ಕರ್ಜಗಿ, ಹುಬ್ಬಳ್ಳಿ ಮೂಲಕ ಧಾರವಾಡ ನಿಲ್ದಾಣದಲ್ಲಿ ನಿಲುಗಡೆ ಆಗಲಿದೆ. ಸಮಯದ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು. ಅಂತಿಮವಾಗಿ ರೈಲ್ವೇ ಮಂಡಳಿ ನಿರ್ಧರಿಸಲಿದೆ. ಚಾಲನೆ ದಿನಾಂಕದ ಬಗ್ಗೆ ನಮಗೆ ಈರೆಗೂ ಮಾಹಿತಿ ಲಭ್ಯವಾಗಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಗೆ ಬರಲಿದೆ ವಂದೇ ಭಾರತ್ ರೈಲು: ಯಾವಾಗ ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.