ಹುಬ್ಬಳ್ಳಿ: ನಗರದ ನೂತನ ನ್ಯಾಯಾಲಯದ ಆವರಣದಲ್ಲಿ ಹೆಬ್ಬಾವು ಪ್ರತ್ಯಕ್ಷವಾಗುವ ಮೂಲಕ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಶಿರೂರು ಪಾರ್ಕ್ ಬಳಿಯ ಹೊಸ ನ್ಯಾಯಾಲಯದ ಬಳಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಂಡು ಜನರು ಗಾಬರಿಗೊಂಡಿದ್ದರು. ಹಾವನ್ನು ನೋಡಲು ಜನರು ಸೇರುತ್ತಿದಂತೆ ಗಲಾಟೆಗೆ ಹೆದರಿ ಕೆಲವೇ ಕ್ಷಣದಲ್ಲಿ ಹಾವು ಮಾಯವಾಗಿದೆ.
ಹಾವು ಹಿಡಿಯುವವರನ್ನು ಕರೆಯುವಷ್ಟರಲ್ಲೇ ಹೆಬ್ಬಾವು ಕಣ್ಮರೆಯಾಗಿದ್ದು, ಹೆಬ್ಬಾವಿನ ಚಲನವಲನವನ್ನು ಮಧುಶ್ರೀ ದಿವಟೆ ಎಂಬುವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.