ETV Bharat / state

ದ್ವೀಪಥ, ವಿದ್ಯುದೀಕರಣ ಕಾಮಗಾರಿ ಬಹುತೇಕ ಪೂರ್ಣ: ವಿಶೇಷ ರೈಲುಗಳು ಇನ್ನು ಸೂಪರ್ ಫಾಸ್ಟ್! - South Western Railway Zone

ದ್ವೀಪಥ, ವಿದ್ಯುದೀಕರಣ ಕಾಮಗಾರಿ ಬಹುತೇಕ ಪೂರ್ಣ- ಗುಣಮಟ್ಟದ ಸೇವೆಗೆ ದಿನಗಣನೆ ಆರಂಭ- ವಿಶೇಷ ರೈಲುಗಳು ಸೂಪರ್‌ಫಾಸ್ಟ್‌ ಆಗಿ ಬದಲಾವಣೆ.

South Western Railway Zone
ನೈಋತ್ಯ ರೈಲ್ವೆ ವಲಯ
author img

By

Published : Apr 1, 2023, 5:31 PM IST

Updated : Apr 1, 2023, 6:26 PM IST

ವಿಶೇಷ ರೈಲುಗಳು ಇನ್ನು ಸೂಪರ್ ಫಾಸ್ಟ್

ಹುಬ್ಬಳ್ಳಿ: ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಶ್ರೀ ಸಿದ್ಧಾರೂಢ ರೈಲು ‌ನಿಲ್ದಾಣ ಪಾತ್ರವಾಗಿದೆ‌‌. ಸಾಕಷ್ಟು ಜನಪರ ಕಾರ್ಯಗಳ ಮೂಲಕ ಮಾತ್ರವಲ್ಲದೇ ಜನರಿಗೆ ಗುಣಮಟ್ಟದ ಸೇವೆ ನೀಡುವುದರಲ್ಲೂ ಗುರುತಿಸಿಕೊಂಡಿದೆ ನೈಋತ್ಯ ರೈಲ್ವೆ ವಲಯ. ಸದ್ಯ ಕಾಮಗಾರಿ ಚುರುಕುಗೊಳಿಸಿರುವುದು ಮಾತ್ರವಲ್ಲದೇ ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

ಹುಬ್ಬಳ್ಳಿ-ಬೆಂಗಳೂರು ಸೇರಿದಂತೆ ಬಹುತೇಕ ಮಾರ್ಗದಲ್ಲಿ ರೈಲ್ವೆ ಮೂಲಕ ಸಂಚಾರ ನಡೆಸಬೇಕಾದವರು ದಿನಗಟ್ಟಲೇ ಸಂಚಾರ ಮಾಡಬೇಕಿತ್ತು. ಆದರೆ, ಈಗ ನೈಋತ್ಯ ರೈಲ್ವೆ ವಲಯವು ದ್ವೀಪಥ ಕಾಮಗಾರಿ, ವಿದ್ಯುದೀಕರಣ, ಇಂಟರ್ ಲಾಕಿಂಗ್ ಸೇರಿದಂತೆ ಬಹುತೇಕ ಕಾಮಗಾರಿ ಪೂರ್ಣಗೊಳಿಸಿದೆ. ಸಾರ್ವಜನಿಕ ಸೇವೆಗೆ ಮುಕ್ತವಾಗಲು ದಿನಗಣನೆ ಆರಂಭವಾಗಿದೆ. ಪ್ರತಿ ಗಂಟೆಗೆ 130 ಕಿಮೀ ಕ್ರಮಿಸುವ ಸಾಮರ್ಥ್ಯವನ್ನು ಅಳವಡಿಸುವ ಮೂಲಕ ಜನರಿಗೆ ಹುಬ್ಬಳ್ಳಿ-ಬೆಂಗಳೂರು, ಹುಬ್ಬಳ್ಳಿ- ಮೈಸೂರು, ಹುಬ್ಬಳ್ಳಿ- ಬೆಳಗಾವಿ, ಹುಬ್ಬಳ್ಳಿ- ದೆಹಲಿ ಸೇರಿದಂತೆ ಹಲವಾರು ಮಾರ್ಗಗಳಲ್ಲಿ ಶೀಘ್ರಗತಿಯಲ್ಲಿ ಪ್ರಯಾಣ ಮಾಡಬಹುದಾಗಿದೆ.

ಜನಸ್ನೇಹಿಯಾದ ನೈಋತ್ಯ ರೈಲ್ವೆ ವಲಯ: ಇನ್ನೂ ಈಗಾಗಲೇ ಹುಬ್ಬಳ್ಳಿ-ಬೆಂಗಳೂರು ಮಾರ್ಗಮಧ್ಯದಲ್ಲಿ ದ್ವೀಪಥ ಕಾಮಗಾರಿ ಪೂರ್ಣಗೊಂಡಿದ್ದು, ಸ್ವಲ್ಪ ಪ್ರಮಾಣದ ವಿದ್ಯುದೀಕರಣ ಕಾಮಗಾರಿ ಮಾತ್ರ ಬಾಕಿ ಇದೆ. ಹೀಗಿರುವಾಗಲೇ ನೈಋತ್ಯ ರೈಲ್ವೆ ವಲಯ ಟ್ರಾಯಲ್ ರನ್ ಕೂಡ ಮಾಡಿದ್ದು, ಪ್ರತಿಗಂಟೆಗೆ 130 ಕಿ.ಮೀ ಓಡುವ ಬಗ್ಗೆ ಪ್ರಾಯೋಗಿಕ ಕಾರ್ಯಾಚರಣೆ ಕೂಡ ಮಾಡಿದೆ. ಈಗಾಗಲೇ ಇಂಧನ ಉಳಿಸುವ ಮೂಲಕ ಪರಿಸರ ಸ್ನೇಹಿಯಾಗಿದ್ದ ನೈಋತ್ಯ ರೈಲ್ವೆ ವಲಯವು ಈಗ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ.

ಸೂಪರ್‌ಫಾಸ್ಟ್‌ ಆಗಿ ಬದಲಾವಣೆಯಾದ ವಿಶೇಷ ರೈಲುಗಳು: ಇತ್ತೀಚೆಗೆ ಪ್ರಾರಂಭಿಸಲಾದ ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಕೆಎಸ್​ಆರ್‌ ಬೆಂಗಳೂರು ನಿಲ್ದಾಣಗಳ ನಡುವೆ ಸಂಚರಿಸುವ ರೈಲುಗಳ ಸಂಖ್ಯೆ 07339/ 07340 ಮತ್ತು 07353/ 07354 ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳಾಗಿ ಇದೇ ಏಪ್ರಿಲ್ 2ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗುತ್ತದೆ.

ಡೆಮು ವಿಶೇಷ ರೈಲುಗಳ ಸೇವೆ ವಿಸ್ತರಣೆ:

1. ಬಳ್ಳಾರಿ ಮತ್ತು ಹರಿಹರ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07395/ 07396 ಡೆಮು ವಿಶೇಷ ರೈಲುಗಳ ಸೇವೆಯನ್ನು 2023ರ ಏಪ್ರಿಲ್ 17ರಿಂದ ಅಕ್ಟೋಬರ್ 14ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 15ರವರೆಗೆ ಓಡಿಸಲು ಸೂಚಿಸಲಾಗಿತ್ತು.

2. ಹೊಸಪೇಟೆ ಮತ್ತು ಬಳ್ಳಾರಿ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07397/ 07398 ಡೆಮು ವಿಶೇಷ ರೈಲುಗಳ ಸೇವೆಯನ್ನು 2023ರ ಏಪ್ರಿಲ್ 17 ರಿಂದ ಅಕ್ಟೋಬರ್ 14ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 15 ರವರೆಗೆ ಓಡಿಸಲು ತಿಳಿಸಲಾಗಿತ್ತು.

3. ಹೊಸಪೇಟೆ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07393 ಡೆಮು ವಿಶೇಷ ರೈಲು ಸೇವೆಯನ್ನು 2023ರ ಏಪ್ರಿಲ್ 22ರಿಂದ ಅಕ್ಟೋಬರ್ 14ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 15 ರವರೆಗೆ ಓಡಿಸಲು ಹೇಳಲಾಗಿತ್ತು.

4. ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಹೊಸಪೇಟೆ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07394 ಡೆಮು ವಿಶೇಷ ರೈಲು ಸೇವೆಯನ್ನು 2023ರ ಏಪ್ರಿಲ್ 16ರಿಂದ ಅಕ್ಟೋಬರ್ 8 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 9ರವರೆಗೆ ಓಡಿಸಲು ಸೂಚಿಸಲಾಗಿತ್ತು.

ಈ ವಿಶೇಷ ಡೆಮು ರೈಲುಗಳ ಸೇವೆಯಲ್ಲಿನ ದಿನ, ವೇಳಾಪಟ್ಟಿ ಮತ್ತು ದರಗಳಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸದ್ಯಕ್ಕೆ ಬೆಂಗಳೂರು-ಮೈಸೂರು ಹೈವೇ ಟೋಲ್ ಹೆಚ್ಚಳ ಬೇಡ : ಸಂಸದ ಪ್ರತಾಪ್ ಸಿಂಹ ಮನವಿ

Last Updated : Apr 1, 2023, 6:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.