ETV Bharat / state

NWKRTC ಹೊಸ ಪ್ರಯೋಗ: ಸಾಮಾನ್ಯ ವರ್ಗಾವಣೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ - ಈಟಿವಿ ಭಾರತ್ ಕನ್ನಡ ಸುದ್ದಿ

2023ನೇ ಸಾಲಿನಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗದೊಳಗೆ ಸಾಮಾನ್ಯ ವರ್ಗಾವಣೆ ಬಯಸುವ ನೌಕರರಿಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

NWKRTC ಸಾರ್ವಜನಿಕ ಸಂಪರ್ಕಾಧಿಕಾರಿ ರಾಮನಗೌಡರ್

author img

By ETV Bharat Karnataka Team

Published : Aug 24, 2023, 6:02 PM IST

ಹುಬ್ಬಳ್ಳಿ : 2023ನೇ ಸಾಲಿನ ಸಾಮಾನ್ಯ ವರ್ಗಾವಣೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 9 ಸಾರಿಗೆ ವಿಭಾಗಗಳಿವೆ. 4,421 ಚಾಲಕರು, 2,992 ನಿರ್ವಾಹಕರು, 8,408 ಚಾಲಕ ಕಂ ನಿರ್ವಾಹಕರು, 2,844 ತಾಂತ್ರಿಕ ಸಿಬ್ಬಂದಿ ಹಾಗೂ 2,919 ಆಡಳಿತ ಸಿಬ್ಬಂದಿ ಸೇರಿದಂತೆ ಒಟ್ಟು 21,584 ನೌಕರರಿದ್ದಾರೆ.

2023ನೇ ಸಾಲಿನಲ್ಲಿ ವಿಭಾಗದೊಳಗೆ ಹಾಗೂ ಇತರೆ ವಿಭಾಗಗಳಿಗೆ ಸಾಮಾನ್ಯ ವರ್ಗಾವಣೆ ಬಯಸುವ ಅರ್ಹ ನೌಕರರಿಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದೆ. ವೆಬ್​ಸೈಟ್ ಲಿಂಕ್ transfernwkrtc.in ಬಳಸಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕೊನೆಯ ದಿನವಾಗಿದೆ.

ವರ್ಗಾವಣೆ ಬಯಸುವ ಸಿಬ್ಬಂದಿ ಆನ್​ಲೈನ್ ಮುಖಾಂತರವೇ ಅರ್ಜಿ ಸಲ್ಲಿಸುವುದು ಕಡ್ಡಾಯ. ನಂತರ ಅರ್ಜಿಯನ್ನು ಮುದ್ರಿಸಿಕೊಂಡು ಸಂಬಂಧಪಟ್ಟ ಪೂರಕ ದಾಖಲಾತಿಗಳೊಂದಿಗೆ ಘಟಕ ವ್ಯವಸ್ಥಾಪಕರು, ಕಾರ್ಯಸ್ಥಳದ ಮುಖ್ಯಸ್ಥರಿಗೆ ಸಲ್ಲಿಸಬೇಕು. ಈಗಾಗಲೇ ನೇರವಾಗಿ ಕೇಂದ್ರ ಕಚೇರಿಗೆ ಮ್ಯಾನ್ಯುವಲ್ ಅರ್ಜಿಗಳನ್ನು ಸಲ್ಲಿಸಿರುವವರೂ ಸಹ ಮತ್ತೊಮ್ಮೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು.

ವರ್ಗಾವಣೆಗೆ ಕನಿಷ್ಠ ಅರ್ಹತೆಗಳು: ವರ್ಗಾವಣೆ ಬಯಸುವ ಸಿಬ್ಬಂದಿ ಸಂಸ್ಥೆಯಲ್ಲಿ ಖಾಯಂ ನೌಕರರಾಗಿರಬೇಕು. ಪ್ರಸ್ತುತ ಕಾರ್ಯಸ್ಥಳದಲ್ಲಿ ಪರೀಕ್ಷಾರ್ಥ ದಿನಾಂಕದಿಂದ ಅಥವಾ ಪ್ರಸ್ತುತ ಕಾರ್ಯಸ್ಥಳದಲ್ಲಿ ವರ್ಗಾವಣೆಯಾದ ದಿನಾಂಕದಿಂದ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿರಬೇಕು. ಯಾವುದೇ ಶಿಸ್ತು ಪ್ರಕರಣಗಳಲ್ಲಿ ಇಲಾಖಾ ವಿಚಾರಣೆ ಬಾಕಿ ಇರಬಾರದು. ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ, ಭಾಗಿಯಾಗಿರುವ ನೌಕರರು ಅರ್ಹರಿರುವುದಿಲ್ಲ.

ಹೆಚ್.ಐ.ವಿ, ಹೃದಯ ರೋಗ, ಕ್ಯಾನ್ಸರ್, ಸ್ಪೈನಲ್ ಕಾರ್ಡ್ ತೊಂದರೆ, ಕಿಡ್ನಿ ವೈಫಲ್ಯ ಹಾಗೂ ಮೆದುಳು ಸಂಬಂಧಿತ ಕಾಯಿಲೆಗಳು ಮುಂತಾದ ತೀವ್ರ ತರಹದ ಅನಾರೋಗ್ಯ ಪ್ರಕರಣಗಳು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ಮಕ್ಕಳಿರುವ ವಿಧವೆ, ವಿದುರ ಹಾಗೂ ಶೇ 40ಕ್ಕೂ ಮೇಲ್ಪಟ್ಟು ಅಂಗವಿಕಲತೆ ಹೊಂದಿರುವ ನೌಕರರು ಕನಿಷ್ಠ ಪರೀಕ್ಷಾರ್ಥ ಸೇವೆಯ ಮೇಲೆ ನಿಯೋಜನೆಯಾಗಿರಬೇಕು. ಇವರಿಗೆ ಪ್ರಸ್ತುತ ಕಾರ್ಯಸ್ಥಳದಲ್ಲಿ ಕನಿಷ್ಠ ಸೇವಾವಧಿಯಲ್ಲಿ ವಿನಾಯಿತಿ ಇರುತ್ತದೆ.

ಪತಿ-ಪತ್ನಿ ಪ್ರಕರಣಗಳು: ಇಬ್ಬರೂ ಸರ್ಕಾರಿ, ನಿಗಮ, ಮಂಡಳಿ, ಸರ್ಕಾರದ ಸಾರ್ವಜನಿಕ ಉದ್ದಿಮೆಗಳ ನೌಕರರಾಗಿದ್ದಲ್ಲಿ ಮಾತ್ರ ಅನ್ವಯಿಸುತ್ತದೆ. ಇಬ್ಬರೂ ಖಾಯಂ ಸಿಬ್ಬಂದಿಯಾಗಿದ್ದು, ಇಬ್ಬರಲ್ಲಿ ಒಬ್ಬರು ಅವರ ಹುದ್ದೆಯಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿರಬೇಕು.

ಪರಸ್ಪರ ವರ್ಗಾವಣೆ ಪ್ರಕರಣಗಳು : ಇಬ್ಬರೂ ಖಾಯಂ ಸಿಬ್ಬಂದಿಯಾಗಿದ್ದು, ಪ್ರಸ್ತುತ ನಿಯೋಜಿಸಿರುವ ಸ್ಥಳದಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿರಬೇಕು. ಇಬ್ಬರೂ ಒಂದೇ ಹುದ್ದೆಯವಾಗಿರಬೇಕು. ಒಮ್ಮೆ ಪರಸ್ಪರ ವರ್ಗಾವಣೆ ಕೋರಿ ಸಲ್ಲಿಸಿದ ಅರ್ಜಿಯನ್ನು ಇಬ್ಬರಲ್ಲಿ ಯಾರೊಬ್ಬರೂ ಸಹ ರದ್ದುಪಡಿಸಲು ಕೋರುವಂತಿಲ್ಲ. ಹೆಚ್ಚಿನ ಮಾಹಿತಿಗೆ ಆಯಾ ವಿಭಾಗದ ಆಡಳಿತಾಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ರಾಮನಗೌಡರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: NWKRTC ಹೊಸ ಪ್ರಯೋಗ: ಜಲಪಾತಗಳ ವೀಕ್ಷಣೆಗೆ ವಿಶೇಷ ಬಸ್: ಶಕ್ತಿ ಯೋಜನೆಗಿಲ್ಲ ಅವಕಾಶ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.