ಹುಬ್ಬಳ್ಳಿ: ಕೇಂದ್ರ ಸರ್ಕಾರ ರೈತರು, ಬಡವರು ಹಾಗು ಕೂಲಿ ಕಾರ್ಮಿಕರ ಪರವಾಗಿದೆ. ನಾವು ರೈತರ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸುತ್ತಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ರೈತ ಮಸೂದೆ ಕಾಯ್ದೆ ತಿದ್ದುಪಡಿ ಖಂಡಿಸಿ ಪ್ರತಿಭಟನೆ ಮಾಡುತ್ತಿರುವ ರೈತರ ಜೊತೆ ಮುಕ್ತವಾಗಿ ಚರ್ಚೆ ಮಾಡಿದ್ದೇವೆ. ಕಾಯ್ದೆಗಳ ಬಗ್ಗೆ ಗೊಂದಲಗಳಿದ್ದರೆ ಅದನ್ನು ಬಗೆಹರಿಸಲು ಸರ್ಕಾರ ಸಿದ್ಧವಿದೆ. ಆದ್ದರಿಂದ ರೈತರು ಹೋರಾಟ ಹಿಂಪಡೆಯಬೇಕು ಎಂದು ಸಚಿವರು ಮನವಿ ಮಾಡಿದರು.
ಇದರ ಜೊತೆಗೆ ಡಿ.09 ರಂದು ರೈತರ ಜೊತೆ ಮತ್ತೆ ಸಭೆ ನಡೆಯಲಿದೆ. ಅಂದು ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗುವ ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ:
ಕಾಂಗ್ರೆಸ್ ಜೊತೆ ಸೇರಿ ಹಾಳಾದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ಭಸ್ಮಾಸುರ ಇದ್ದಂತೆ ಅನ್ನೋದು ಅವರಿಗೆ ಈಗ ಅರ್ಥವಾಗಿದೆ. ಇದು ಸಂತೋಷದ ವಿಚಾರ ಎಂದರು.
ಓದಿ: ಕುಮಾರಸ್ವಾಮಿ ಲೂಸ್ ಟಾಕ್ ಕಡೆಗಣಿಸಲು ತೀರ್ಮಾನ: ಹೆಚ್‌ಡಿಕೆ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ ತಂತ್ರ