ಹುಬ್ಬಳ್ಳಿ: ಲೋಕಸಭಾ ಫಲಿತಾಂಶ ಆಘಾತ ತಂದಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರೇ ದೇವರು ಅವರ ತೀರ್ಪಿಗೆ ತಲೆಬಾಗಬೇಕಾಗುತ್ತದೆ ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಈ ಫಲಿತಾಂಶ ರಾಜ್ಯ ರಾಜಕಾರಣಕ್ಕೆ ಪರಿಣಾಮ ಬೀರಲ್ಲ. ಎಚ್ಡಿಕೆ ಸಿಎಂ ಸ್ಥಾನದಲ್ಲಿ ಮುಂದುವರೆಯಬೇಕೆಂದು ನಮ್ಮೆಲ್ಲರ ನಿರ್ಧಾರವಾಗಿದೆ. ಚುನಾವಣೆ ಒಂದು ರೀತಿ ಕ್ರಿಕೆಟ್ ಮ್ಯಾಚ್ ಇದ್ದಹಾಗೆ ಸೋಲು ಗೆಲುವು ಸಾಮಾನ್ಯ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ಇದುವರೆಗೂ ನನ್ನ ಸಂಪರ್ಕದಲ್ಲಿ ಇಲ್ಲ ಎಂದರು. ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದಾರೆ. ಆದರೆ ಅವರೇ ಸಿಎಂ ಅಂತಾ ಪದೇ ಪದೆ ಹೇಳಿ ಗೊಂದಲ ಸೃಷ್ಟಿಸಬೇಡಿ, ಅದು ಅಪ್ರಸ್ತುತ ಎಂದರು.
ರಾಹುಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲು ನಿರ್ಧರಿಸಿರುವುದು ಸರಿಯಲ್ಲ. ಎಲ್ಲರೂ ಸೇರಿ ಚುನಾವಣೆ ಎದುರಿಸಿದ್ದೇವೆ. ಪ್ರತಿಪಕ್ಷದವರು ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ಕೊಡಿ ಎಂದು ಕೇಳುವುದು ಸಾಮಾನ್ಯ, ಆದರೆ ಅದು ಈಡೇರಬೇಕಲ್ಲ ಎಂದು ಪ್ರಶ್ನಿಸಿದರು.