ಹುಬ್ಬಳ್ಳಿ: ಸಾಮಾನ್ಯವಾಗಿ ದೊಡ್ಡ - ದೊಡ್ಡ ಬಾರ್ಗಳಲ್ಲಿ ಬಾರ್ಟೆಂಡರ್ಗಳನ್ನು ನೀವು ನೋಡಿರ್ತೀರಾ. ಅದರಲ್ಲಿ ಬಾರ್ಟೆಂಡರ್ಗಳು ಬಾಟಲಿ ತಿರುಗಿಸುವುದನ್ನು ನೋಡಿಯೇ ಹೌ ಹಾರಿರುತ್ತೇವೆ. ಅಂಥದ್ದರಲ್ಲಿ ಇಲ್ಲೋರ್ವ ಯುವತಿ ಗ್ರಾಮೀಣ ಪ್ರದೇಶದಿಂದ ಬಂದು ಬಾರ್ಟೆಂಡರ್ನಲ್ಲಿ ಇದೀಗ ವಿಶ್ವ ದಾಖಲೆ ಬರೆದಿದ್ದಾರೆ.
![Kavita Medar is Fastest Bartender in the World, Kavita Medar native place Hubli, Kavita Medar world record, Kavita Medar news, ಫಾಸ್ಟೆಸ್ಟ್ ಬಾರ್ಟೆಂಡರ್ ಆಗಿ ದಾಖಲೆ ಬರೆದ ಕವಿತಾ ಮೇದಾರ, ಕವಿತ ಮೇದಾರ ಸ್ವಂತ ಗ್ರಾಮ ಹುಬ್ಬಳ್ಳಿ, ಕವಿತಾ ಮೇದಾರ ವಿಶ್ವ ದಾಖಲೆ, ಕವಿತಾ ಮೇದಾರ ಸುದ್ದಿ,](https://etvbharatimages.akamaized.net/etvbharat/prod-images/kn-hbl-01-word-record-pkg-7208089_20012022085247_2001f_1642648967_762.jpg)
ಹೌದು. ಹೀಗೆ ಗಿರ ಗಿರ ಎಂದು ಬಾಟಲಿಗಳಲ್ಲಿ ತಿರುಗಿಸುತ್ತ ನೋಡುಗರನ್ನು ಅಚ್ಚರಿಗೆ ಒಳಪಡಿಸುವ ಇವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಕವಿತಾ ಮೇದಾರ. ಹೀಗೆ ಇವರ ಈ ಕಲೆಗೆ ಜಗ್ಲಿಂಗ್ ಮತ್ತು ಫೆರಿಂಗ್ ಅಂತ ಹೆಸರು.
ಸಾಮಾನ್ಯವಾಗಿ ಸಿನಿಮಾಗಳಲ್ಲಿ ಅಥವಾ ದೊಡ್ಡ - ದೊಡ್ಡ ಪಬ್, ಬಾರ್ಗಳಲ್ಲಿ ಈ ರೀತಿಯಾಗಿ ಹುಡುಗರು ತಿರುಗಿಸುವುದನ್ನ ನೀವು ನೋಡಿರ್ತೀರಾ. ಆದರೆ ಇದನ್ನು ಈ ಯುವತಿ ಕಲಿತಿದ್ದು, ಇದರಲ್ಲಿಯೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆ ಮಾಡಿದ್ದಾರೆ. ಅಲ್ಲದೇ ಭಾರತದಲ್ಲಿಯೇ ಜಗಲಿಂಗ್ ಅಂಡ್ ಫೇರಿಂಗ್ನಲ್ಲಿ ದಾಖಲೆ ಬರೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.
ಓದಿ: ಯಕ್ಷಗಾನ ಪ್ರದರ್ಶನ ಮುಗಿಸಿ ವಾಪಸಾಗುತ್ತಿದ್ದ ವೇಳೆ ರಸ್ತೆ ಅಪಘಾತ: ಕಲಾವಿದ ಸಾವು
ಇನ್ನೂ ಇದನ್ನೆಲ್ಲ ಕಲಿಬೇಕು ಅಂತ ಸುಮ್ಮನೆ ಮಾತಲ್ಲಿ ಹೇಳುವುದ ಅಸಾಧ್ಯ. ನೋಡೋಕೆ ಎಷ್ಟು ರೋಮಾಂಚನವಾಗಿರುತ್ತದೆಯೋ ಇದನ್ನು ಕಲಿಯೋದು ಅಷ್ಟೇ ಟಫ್ ಕೂಡ. ಲಾಕ್ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡ ಕವಿತಾ ಪುಣೆಯಲ್ಲಿ ಟ್ರೈನಿಂಗ್ ಪಡೆದು ಸದ್ಯ ವಿಶ್ವ ಬುಕ್ ಆಫ್ ರೆಕಾರ್ಡ್ನಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ.
![Kavita Medar is Fastest Bartender in the World, Kavita Medar native place Hubli, Kavita Medar world record, Kavita Medar news, ಫಾಸ್ಟೆಸ್ಟ್ ಬಾರ್ಟೆಂಡರ್ ಆಗಿ ದಾಖಲೆ ಬರೆದ ಕವಿತಾ ಮೇದಾರ, ಕವಿತ ಮೇದಾರ ಸ್ವಂತ ಗ್ರಾಮ ಹುಬ್ಬಳ್ಳಿ, ಕವಿತಾ ಮೇದಾರ ವಿಶ್ವ ದಾಖಲೆ, ಕವಿತಾ ಮೇದಾರ ಸುದ್ದಿ,](https://etvbharatimages.akamaized.net/etvbharat/prod-images/kn-hbl-01-word-record-pkg-7208089_20012022085247_2001f_1642648967_112.jpg)
ಸ್ವಿಟ್ಜರ್ಲ್ಯಾಂಡ್ನಲ್ಲಿ ನಡೆಯುವ ಸ್ಪರ್ಧೆಗೆ ಈಗಾಗಲೇ ಕವಿತಾ ಆಯ್ಕೆಯಾಗಿದ್ದರು. ಆದರೆ ಹಣದ ತೊಂದರೆ ಆಗಿತ್ತು. ಅದೃಷ್ಟವಶಾತ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ತಂಡ ಭಾರತಕ್ಕೆ ಬಂದು ಸ್ಪರ್ಧೆ ಏರ್ಪಡಿಸಿ ಮಹಿಳೆಯ ದಾಖಲೆಗೆ ಮುನ್ನುಡಿ ಬರೆದಿದ್ದಾರೆ. ಇವಳ ಸಾಧನೆ ಭಾರತ ಮಾತ್ರವಲ್ಲದೇ ಜಗತ್ತಿನ ಪ್ರಶಂಸೆಗೆ ಪಾತ್ರವಾಗುವಂತೆ ಮಾಡಿದೆ.
![Kavita Medar is Fastest Bartender in the World, Kavita Medar native place Hubli, Kavita Medar world record, Kavita Medar news, ಫಾಸ್ಟೆಸ್ಟ್ ಬಾರ್ಟೆಂಡರ್ ಆಗಿ ದಾಖಲೆ ಬರೆದ ಕವಿತಾ ಮೇದಾರ, ಕವಿತ ಮೇದಾರ ಸ್ವಂತ ಗ್ರಾಮ ಹುಬ್ಬಳ್ಳಿ, ಕವಿತಾ ಮೇದಾರ ವಿಶ್ವ ದಾಖಲೆ, ಕವಿತಾ ಮೇದಾರ ಸುದ್ದಿ,](https://etvbharatimages.akamaized.net/etvbharat/prod-images/kn-hbl-01-word-record-pkg-7208089_20012022085247_2001f_1642648967_856.jpg)
ಮಹಿಳೆ ಅಂದರೇ ಮನೆಯ ಕೆಲಸಕ್ಕೆ ಮಾತ್ರ ಸೀಮಿತವಾಗದೇ ಹೊಸ ಸಾಧನೆ ಮಾಡಬೇಕು ಎಂಬುವುದನ್ನು ಕವಿತಾ ತೋರಿಸಿಕೊಟ್ಟಿದ್ದಾರೆ. ಕವಿತಾಳ ಕೀರ್ತಿ ಇನ್ನಷ್ಟು ವ್ಯಾಪಿಸಲಿ. ಸರ್ಕಾರ ಏನಾದರೂ ಸಹಾಯ ಸೌಲಭ್ಯಗಳನ್ನು ನೀಡಲಿ ಎಂಬುವುದು ನಮ್ಮ ಆಶಯ.
![Kavita Medar is Fastest Bartender in the World, Kavita Medar native place Hubli, Kavita Medar world record, Kavita Medar news, ಫಾಸ್ಟೆಸ್ಟ್ ಬಾರ್ಟೆಂಡರ್ ಆಗಿ ದಾಖಲೆ ಬರೆದ ಕವಿತಾ ಮೇದಾರ, ಕವಿತ ಮೇದಾರ ಸ್ವಂತ ಗ್ರಾಮ ಹುಬ್ಬಳ್ಳಿ, ಕವಿತಾ ಮೇದಾರ ವಿಶ್ವ ದಾಖಲೆ, ಕವಿತಾ ಮೇದಾರ ಸುದ್ದಿ,](https://etvbharatimages.akamaized.net/etvbharat/prod-images/kn-hbl-01-word-record-pkg-7208089_20012022085247_2001f_1642648967_966.jpg)