ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರದ ಸೇವಾ ಭಾರತಿ ಟ್ರಸ್ಟ್‌ನ ಮಾತೃಛಾಯಾ ಬಾಲಮಂದಿರದಲ್ಲಿ 18 ವರ್ಷ ತುಂಬಿರುವ ಗುರುಸಿದ್ದಮ್ಮ ಎಂಬುವರನ್ನು ಹೇಮಂತ್‌ಕುಮಾರ್ ಎಂಬುವರು ಗುರುಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಹೇಮಂತ್‌ಕುಮಾರ್ ಬೆಂಗಳೂರಿನ ಸರಸ್ವತಿ ಮತ್ತು ನಂಜುಂಡರಾವ್ ಅವರ ಮಗನಾಗಿದ್ದಾರೆ.
ಆರ್‌ಎಸ್‌ಎಸ್ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು ಹಾಗೂ ನಗರದ ನಿವಾಸಿಗಳು ಈ ಕಲ್ಯಾಣ ಕಾರ್ಯದಲ್ಲಿ ಭಾಗವಹಿಸಿದ್ದರು. ಹಿರಿಯರು ಸುಖವಾಗಿ ಬಾಳಿ ಎಂದು ಆಶೀರ್ವದಿಸಿದರು. ಬಾಲಮಂದಿರದ ಮಕ್ಕಳು ಮತ್ತು ಪೋಷಕರು ಕಣ್ಣೀರು ಸುರಿಸುತ್ತ ಯುವತಿಯನ್ನು ಗಂಡನ ಮನೆಗೆ ಕಳುಹಿಸಿಕೊಟ್ಟರು.
ಬಾಲಕಲ್ಯಾಣ ಮಂದಿರದಲ್ಲಿ ಬೆಳೆದ ಮಕ್ಕಳಿಗೆ ಅಪ್ಪ ಅಮ್ಮ ಎಲ್ಲ ಎಂಬ ಭಾವನೆ ಮೂಡಬಹುದು. ಆದರೆ, ಅನೇಕ ತಾಯಂದಿರ ಮಮತೆ ಹಾಗೂ ವಾತ್ಸಲ್ಯ ಸಾಕಷ್ಟು ದೊರೆಯುತ್ತದೆ. ಉಳ್ಳವರ ಮದುವೆಯಲ್ಲಿ ಸಹನೆಯನ್ನು ಮೀರಿದ ಸಂಪತ್ತು ಪ್ರದರ್ಶನವಾಗುತ್ತದೆ. ಆದರೆ, ಇಂದಿನ ಮದುವೆಯಲ್ಲಿ ಸಂಸ್ಕಾರ ಪ್ರದರ್ಶನವಾಗಿದೆ. ಹಿರಿಯರ ಉಪಸ್ಥಿತಿಯಲ್ಲಿ ವಧು ವರರು ಗೃಹಸ್ಥಾಶ್ರಮ ಪ್ರವೇಶಿಸಿದರು.
ಇದನ್ನೂ ಓದಿ: ಮಗ ಅಕಾಲಿಕ ಮರಣ.. ವಿಧವೆಯಾದ ಸೊಸೆಗೆ ಮರು ಮದುವೆ ಮಾಡಿಸಿ ಮಾದರಿಯಾದ ಅತ್ತೆ ಮಾವ