ಹುಬ್ಬಳ್ಳಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಸಾಕಷ್ಟು ಆವಿಷ್ಕಾರ ನಡೆಯುತ್ತಿವೆ. ಅಂಥದ್ದೇ ಒಂದು ವಿನೂತನವಾದ ಸ್ಯಾನಿಟೈಸರ್ ಸಾಧನವನ್ನು ಹೊಸೂರು ಬಿ ಆರ್ ಟಿಎಸ್ ಬಸ್ ನಿಲ್ದಾಣದಲ್ಲಿ ಅಳವಡಿಸಲಾಗಿದೆ.
ಹೊಸೂರು ಬಿ.ಆರ್.ಟಿ.ಎಸ್ ಬಸ್ ನಿಲ್ದಾಣದಲ್ಲಿ ಫುಟ್ ಆಪರೇಟೆಡ್ ಸ್ಯಾನಿಟೈಜರ್ ಸಾಧನ ಅಳವಡಿಸಲಾಗಿದೆ. ಎಲ್ಲೆಲ್ಲೂ ಹೋಗಿ ಬಂದವರು ಸ್ಯಾನಿಟೈಸರ್ ಬಾಟಲಿ ಮುಟ್ಟುತ್ತಿದ್ದರು. ಇದರಿಂದ ಕೋರೊನಾ ವೈರಸ್ ಹರಡುವ ಭೀತಿ ಇತ್ತು. ಕಾಲಿನಿಂದ ಪ್ರೆಸ್ ಮಾಡಿದ್ರೆ ಸಾಕು ಕೈಗೆ ಸ್ಯಾನಿಟೈಸರ್ ಬರುವಂತೆ ಹೊಸ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ ಹುಬ್ಬಳ್ಳಿಯ ಕೆ ಎಲ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸ್ವಯಂಚಾಲಿತ ಸ್ಯಾನಿಟೈಜರ್ ಮಷಿನ್ ಕಂಡು ಹಿಡಿದಿದ್ದಾರೆ. ಆದ್ರೆ ಈಗ ಅಗ್ಗದ ಹಾಗೂ ಕೈಗೆಟಕುವ ಸ್ಯಾನಿಟೈಸರ್ ಯಂತ್ರ ಕಂಡಹಿಡಿದಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.