ಹುಬ್ಬಳ್ಳಿ: ವಾಣಿಜ್ಯ ನಗರಿ, ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಖ್ಯಾತಿಯಾಗಿದೆ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ಸರ್ಕಲ್. ಇಲ್ಲಿರುವ ವೀರರಾಣಿ ಚೆನ್ನಮ್ಮನ ಪುತ್ಥಳಿಯ ಸುತ್ತಮುತ್ತ ಬಿರುಕು ಕಾಣಿಸಿದ್ದು, ಆತಂಕಕ್ಕೆ ಕಾರಣವಾಗಿದೆ ಎಂಬ ವರದಿಯನ್ನು ಈಟಿವಿ ಭಾರತ ಜು. 24 ರಂದು ಪ್ರಕಟಿಸಲಾಗಿತ್ತು.
ಹುಬ್ಬಳ್ಳಿಯ ಮುಕುಟ ಚೆನ್ನಮ್ಮನ ಪುತ್ಥಳಿ ಶಿಥಿಲ... ಸಾರ್ವಜನಿಕರಿಂದ ಆಕ್ರೋಶ
ಈ ವರದಿಯಿಂದ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಕೊನೆಗೂ ಪುತ್ಥಳಿಯ ಕೆಳಭಾಗದಲ್ಲಿನ ಬಿರುಕುಗಳಿಗೆ ತೇಪೆ ಹಾಕುವ ಕೆಲಸ ಮಾಡಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ನಿರ್ಮಾಣನಗೊಂಡಿರುವ ಪುತ್ಥಳಿಯ ತಳಭಾಗದ ಬೇಸಮೆಂಟ್ಗೆ ಹೊಂದಿಸಿದ ಕಲ್ಲುಗಳು ಹೊರಗೆ ಚಾಚಿದ್ದವು. ಹೀಗಾಗಿ ಚೆನ್ನಮ್ಮ ಮೂರ್ತಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿದೆ, ಪುತ್ಥಳಿಯ ಆವರಣ ಸಂಪೂರ್ಣ ಶಿಥಿಲಗೊಂಡಿದ್ದು ಅನಾಹುತಕ್ಕೆ ಎಡೆ ಮಾಡಿಕೊಡುತ್ತಿದೆ ಎಂಬ ವರದಿ ಪ್ರಕಟಿಸಿತ್ತು.
'ಹುಬ್ಬಳ್ಳಿಯ ಮುಕುಟ ಚೆನ್ನಮ್ಮನ ಪುತ್ಥಳಿ ಶಿಥಿಲ... ಸಾರ್ವಜನಿಕರಿಂದ ಆಕ್ರೋಶ' ಎಂಬ ತಲೆಬರಹದಡಿ ವಿಸ್ತೃತ ವರದಿ ಪ್ರಸಾರ ಮಾಡಲಾಗಿತ್ತು. ಈ ವರದಿಗೆ ಸ್ಪಂದಿಸಿರುವ ಪಾಲಿಕೆ ಅಧಿಕಾರಿಗಳು ಈಗ ದುರಸ್ತಿ ಕೆಲಸ ಮಾಡಿಸಿದ್ದಾರೆ.
ಅಧಿಕಾರಿಗಳು ಪುತ್ಥಳಿ ತಳಪಾಯಕ್ಕೆ ಹಾಕಿದ ಕಲ್ಲುಗಳನ್ನು ಹೊಂದಿಸುವುದರ ಜೊತೆಗೆ ಸಿಮೆಂಟ್ ಕೆಲಸ ಮಾಡಿಸಿದ್ದಾರೆ. ಈಟಿವಿ ಭಾರತ ವರದಿಗೆ ಸ್ಪಂದಿಸಿ, ಜನರ ಆತಂಕ ದೂರ ಮಾಡಿರುವ ಅಧಿಕಾರಿಗಳಿಗೆ ಧನ್ಯವಾದ.