ಹುಬ್ಬಳ್ಳಿ: ಉಪಚುನಾವಣೆಗೆ ಮಹಾದಾಯಿ ವಿಷಯವನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ ಅಸ್ತ್ರ ಮಾಡಿಕೊಂಡಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಐದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಮಹದಾಯಿ ಸಮಸ್ಯೆ ಇತ್ಯರ್ಥ ಮಾಡದವರಿಗೆ ಈ ಭಾಗದ ಜನ, ರೈತರು ಚುನಾವಣೆ ವೇಳೆ ತಕ್ಕ ಉತ್ತರ ಕೊಡಬೇಕು ಎಂದರು.
ಮಂತ್ರಿಗಿರಿ ಆಸೆ ತೋರಿಸೊ ಹುಮ್ಮಸ್ಸು ರೈತರ ಪರವಾಗಿಯೂ ಇರಬೇಕು. ಸಿಎಂ ಮಂತ್ರಿ ಮಾಡ್ತೀನಿ ಎಂದು ನೇರವಾಗಿ ಅನರ್ಹರಿಗೆ ಆಸೆ, ಆಮಿಷ ತೋರಿಸುತ್ತಿದ್ದಾರೆ. ಇದು ನೇರವಾಗಿ ಭ್ರಷ್ಟಾಚಾರ ಮಾಡಿದಂತೆ. ಚುನಾವಣಾ ಆಯೋಗ ಈ ಬಗ್ಗೆ ಗಮನ ಹರಿಸಬೇಕು. ಚುನಾವಣಾ ಆಯೋಗ ಯಾಕೆ ಸುಮ್ಮನಿದೆ ಅನ್ನೊ ಅನುಮಾನ ಕಾಡುತ್ತಿದೆ ಎಂದರು.
ಈಗ ನಾನು ಕೋರ್ಟ್ ನೋಟಿಸ್, ವಿಚಾರಣೆಗೆ ಹೋಗುವುದರಲ್ಲಿ ಬ್ಯೂಸಿ ಇದ್ದೀನಿ. ಹೀಗಾಗಿ ಉಪಚುನಾವಣೆಗೆ ಸ್ವಲ್ಪ ದಿನ ಬಿಟ್ಟು ಧುಮುಕುತ್ತೇನೆ. ಕೆಪಿಸಿಸಿ ಅಧ್ಯಕ್ಷ ಗಾದೆ ಬದಲಾವಣೆ ಇಲ್ಲ. ನಾನು ಯಾರಿಗೂ ಕೆಟ್ಟದ್ದು ಮಾಡಿಲ್ಲ. ತೊಂದರೆಯನ್ನೂ ಮಾಡಿಲ್ಲ. ನಾನು ತಪ್ಪು ಮಾಡಿದ್ರೆ ಶಿಕ್ಷೆಗೆ ಗುರಿಯಾಗಲು ಸಿದ್ಧವೆಂದು ಹೇಳಿದ್ದೇನೆ. ರಾಜ್ಯದ ಹಿತದೃಷ್ಟಿಯಿಂದ ಮಹದಾಯಿ ವಿಚಾರವನ್ನ ಪ್ರಸಾಪ್ತ ಮಾಡಿದ್ದೇನೆ ಎಂದರು.
ಆಪರೇಷನ್ ಕಮಲದ ವಿಚಾರದಲ್ಲಿ ಏನೇನೋ ವ್ಯಾಪಾರ ನಡೆದಿದೆ ಅನ್ನೋದು ಈಗಾಗಲೇ ಬಹಿರಂಗವಾಗಿದೆ. ಮಹಾದಾಯಿ ವಿಚಾರ ರಾಜ್ಯದ ಸ್ವಾಭಿಮಾನದ ಪ್ರಶ್ನೆಯಾಗಿದೆ. ಈ ಭಾಗದ ರೈತರು ಸೂಕ್ತ ಉತ್ತರ ಕೊಡಬೇಕು ಎಂದರು.