ETV Bharat / state

ಕಷ್ಟಕ್ಕೆ ರೊಕ್ಕ ಕೊಟ್ಟ ಗೆಳೆಯ, ವಾಪಾಸ್ ಕೇಳಿದ್ರೆ ಪ್ರಾಣ ತೆಗೆದುಬಿಟ್ಟರು!

author img

By

Published : Jul 30, 2019, 9:56 PM IST

ಹಣ ಕೊಡಲು ಕರೆದಿರೋದಾಗಿ ತಿಳಿದ ನಾಗರಾಜ ಬೈಕ್ ಮೇಲೆ ಅಲ್ಲಿಗೆ ಹೋಗಿದ್ದಾನೆ. ಅಲ್ಲಿ ಕೆಲ ಕಾಲ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಅಷ್ಟೇ...

ಕೊಟ್ಟ ಹಣ ಕೇಳಿದಕ್ಕೆ ಗೆಳಯ ಪ್ರಾಣತೆಗೆದ ಗೆಳೆಯವರು

ಧಾರವಾಡ : ಇತ್ತೀಚೆಗಷ್ಟೇ ಮದುವೆಯಾಗಿದ್ದ ಯುವಕ ಪತ್ನಿಯೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ. ಆದರೆ ವಿಧಿಯಾಟವೇ ಬೇರೆಯಾಗಿತ್ತು.‌ ಒಂದು ಕಡೆ ವಿಧಿ ಆತನ ನೌಕರಿ ಕಿತ್ತುಕೊಂಡರೆ ಮತ್ತೊಂದೆಡೆ ಆತನೊಡನೆ ಓಡಾಡಿ, ಸಹಾಯ ಪಡೆದ ಗೆಳೆಯರೇ ಆತನ‌ ಪಾಲಿಗೆ ಬದುಕಿಗೆ ಕೊಳ್ಳಿ ಇಟ್ಟರು!

ಮೂರು ತಿಂಗಳ ಹಿಂದಷ್ಟೇ ನಾಗರಾಜ ಮದುವೆಯಾಗಿದ್ದ. ಧಾರವಾಡ‌ ನಗರದ ಟಾಟಾ ಮೋಟರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಆತನನ್ನು ಇತ್ತೀಚೆಗಷ್ಟೇ ಕೆಲಸದಿಂದ ತೆಗೆಯಲಾಗಿತ್ತು.

ಕೊಟ್ಟ ಹಣ ಕೇಳಿದಕ್ಕೆ ಗೆಳಯ ಪ್ರಾಣತೆಗೆದ ಗೆಳೆಯವರು

ಹೀಗಾಗಿ ಕೈಯಲ್ಲಿ‌ ಕೆಲಸವಿಲ್ಲದ್ದು ಮತ್ತು ಇತ್ತೀಚಿಗಷ್ಟೇ ಮದುವೆಯಾಗಿದ್ದರಿಂದ ಹಣದ ಅಡಚಣೆಯುಂಟಾಗಿತ್ತು. ಕೆಲ ತಿಂಗಳ ಹಿಂದೆ ತನ್ನ ಆತ್ಮೀಯ ಸ್ನೇಹಿತ ಮಲ್ಲಿಕಾರ್ಜುನ ಹಡಪದ ಎಂಬುವವರಿಗೆ ಒಂದು ಲಕ್ಷ ರೂಪಾಯಿ ಸಾಲ‌ ಕೊಟ್ಟಿದ್ದ. ಧಾರವಾಡ ತಾಲೂಕಿನ ಮುಗದ ಗ್ರಾಮದ ಮಲ್ಲಿಕಾರ್ಜುನ ಹಣ ಮರಳಿಸುವುದು ತಡ‌ ಮಾಡಿದ್ದ. ತನ್ನ ಆರ್ಥಿಕ ಸ್ಥಿತಿ ಹದಗೆಟ್ಟಿದ್ದಕ್ಕೆ ಗೆಳೆಯ ಮಲ್ಲಿಕಾರ್ಜುನ ಹಡಪದಗೆ ತಾನು ಕೆಲ ತಿಂಗಳ ಹಿಂದೆ ಸಾಲದ ರೂಪದಲ್ಲಿ ನೀಡಿದ್ದ ಹಣ‌ ಮರಳಿ ನೀಡುವಂತೆ ಕೇಳಿಕೊಂಡಿದ್ದಾನೆ.

ಶುಕ್ರವಾರ ಸಂಜೆ ಮಲ್ಲಿಕಾರ್ಜುನ ತನ್ನಿಬ್ಬರು ಗೆಳೆಯರಾದ ಪೀರಜಾದೆ‌ ಮತ್ತು ನವೀನ್ ಜೊತೆ ಕರ್ನಾಟಕ ವಿಶ್ವವಿದ್ಯಾಯದ ಬಳಿ ಇರುವ ರೈಲ್ವೆ ಹಳಿ ಬಳಿ ಬಂದಿದ್ದಾರೆ.‌ ಅಲ್ಲಿಗೆ ನಾಗರಾಜನಿಗೆ ಬರಲು ಹೇಳಿದ್ದಾರೆ. ಹಣ ಕೊಡಲು ಕರೆದಿರೋದಾಗಿ ತಿಳಿದ ನಾಗರಾಜ ಬೈಕ್ ಮೇಲೆ ಅಲ್ಲಿಗೆ ಹೋಗಿದ್ದಾನೆ. ಅಲ್ಲಿ ಕೆಲಕಾಲ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮಲ್ಲಿಕಾರ್ಜುನ ಅಲ್ಲೇ ಬಿದ್ದಿದ್ದ ಕಟ್ಟಿಗೆಯಿಂದ ನಾಗರಾಜನನ್ನು ಹೊಡೆದು ಕೊಂದು ಹಾಕಿದ್ದಾನೆ. ಬಳಿಕ ಅಲ್ಲಿಂದ ಮೂವರೂ ಪರಾರಿಯಾಗಿದ್ದಾರೆ.

ಯಾವಾಗ ರಾತ್ರಿಯಾದರೂ ನಾಗರಾಜ‌ ಮನೆಗೆ ಬರಲಿಲ್ಲವೋ ಆಗ ಮನೆಯವರು ಉಪನಗರ ಠಾಣೆಗೆ ದೂರು ನೀಡಿದ್ದಾರೆ. ಕೊನೆಗೆ ಸೋಮವಾರ ಸಂಜೆ ನಾಗರಾಜದನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಪೀರಜಾದೆ‌ ಮತ್ತು ನವೀನ್ ಪಾತ್ರದ ಬಗ್ಗೆ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಮಲ್ಲಿಕಾರ್ಜುನ ಹಡಪದ ಮಾತ್ರ ಪರಾರಿಯಾಗಿದ್ದಾನೆ.

Intro:ಧಾರವಾಡ: ಇತ್ತೀಚೆಗಷ್ಟೇ ಮದುವೆಯಾಗಿದ್ದ ಯುವಕ ಪತ್ನಿಯೊಂದಿಗೆ ನೆಮ್ಮದಿ ಜೀವನ ನಡೆಸುತ್ತಿದ್ದ ಆದರೆ ವಿಧಿಯಾಟವೇ ಬೇರೆಯಾಗಿತ್ತು.‌ ಒಂದು ಕಡೆ ವಿಧಿ ಆತನ ನೌಕರಿ ಕಿತ್ತುಕೊಂಡರೆ ಮತ್ತೊಂದು ಕಡೆ ಆತನೊಡನೆ ಓಡಾಡಿ, ಸಹಾಯ ಪಡೆದ ಗೆಳೆಯರೇ ಆತನ‌ ಪಾಲಿಗೆ ಯಮನಾಗಿ ಹೋಗಿದ್ದಾರೆ ಎನ್ನಲಾಗಿದೆ.

ನಿನ್ನೆ ರಾತ್ರಿ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಸಿಕ್ಕಿದ್ದ ಮೃತದೇಹ ನಾಗರಾಜ ಹರಪನಹಳ್ಳಿ ಅವರದು. ಧಾರವಾಡ ನಗರದ ಕೆಲಗೇರಿ ಬಡಾವಣೆಯ ನಿವಾಸಿಯಾಗಿರುವ ೨೩ ವರ್ಷದ ನಾಗರಾಜನ ಪಾಲಿಗೆ ಆತನ ಗೆಳೆಯರೇ ಯಮನಾಗಿ ಹೋಗಿದ್ದಾರೆ.

ಮೂರು ತಿಂಗಳ ಹಿಂದಷ್ಟೇ ನಾಗರಾಜ ಮದುವೆಯಾಗಿದ್ದ. ಧಾರವಾಡ‌ ನಗರದ ಟಾಟಾ ಮೋಟರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಆತನನ್ನು ಇತ್ತೀಚೆಗಷ್ಟೇ ಕೆಲಸದಿಂದ ತೆಗೆಯಲಾಗಿತ್ತು. ಹೀಗಾಗಿ ಕೈಯಲ್ಲಿ‌ ಕೆಲಸವಿಲ್ಲದ್ದು ಮತ್ತು ಇತ್ತೀಚಿಗಷ್ಟೇ ಮದುವೆಯಾಗಿದ್ದರಿಂದ ಹಣದ ಅಡಚಣೆಯುಂಟಾಗಿತ್ತು. ಕೆಲ ತಿಂಗಳ ಹಿಂದೆ ತನ್ನ ಆತ್ಮೀಯ ಸ್ನೇಹಿತ ಮಲ್ಲಿಕಾರ್ಜುನ ಹಡಪದ ಎಂಬುವವರಿಗೆ ಒಂದು ಲಕ್ಷ ರೂಪಾಯಿ ಸಾಲ‌ ಕೊಟ್ಟಿದ್ದ. ಧಾರವಾಡ ತಾಲೂಕಿನ ಮುಗದ ಗ್ರಾಮದ ಮಲ್ಲಿಕಾರ್ಜುನ ಹಣ ಮರಳಿಸುವುದು ತಡ‌ಮಾಡಿದ್ದ. ತನ್ನ ಆರ್ಥಿಕ ಸ್ಥಿತಿ ಹದಗೆಟ್ಟಿದ್ದಕ್ಕೆ ಗೆಳೆಯ ಮಲ್ಲಿಕಾರ್ಜುನ ಹಡಪದಗೆ ತಾನು ಕೆಲ ತಿಂಗಳ ಹಿಂದೆ ಸಾಲದ ರೂಪದಲ್ಲಿ ನೀಡಿದ್ದ ಹಣ‌ ಮರಳಿ ನೀಡುವಂತೆ ಕೇಳಿಕೊಂಡ. ಹೀಗೆ ಹಣ ಕೇಳಿದ್ದೇ ನಾಗರಾಜನ ಪಾಲಿಗೆ ಸಾವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.Body:ಶುಕ್ರವಾರ ಸಂಜೆ ಮಲ್ಲಿಕಾರ್ಜುನ ತನ್ನಿಬ್ಬರು ಗೆಳೆಯರಾದ ಪೀರಜಾದೆ‌ ಮತ್ತು ನವೀನ್ ಜೊತೆ ಕರ್ನಾಟಕ ವಿಶ್ವವಿದ್ಯಾಯದ ಬಳಿ ಇರುವ ರೈಲ್ವೆ ಹಳಿ ಬಳಿ ಬಂದಿದ್ದಾರೆ.‌ ಅಲ್ಲಿಗೆ ನಾಗರಾಜನಿಗೆ ಬರಲು ಹೇಳಿದ್ದಾರೆ. ಹಣ ಕೊಡಲು ಕರೆದಿರೋದಾಗಿ ತಿಳಿದ ನಾಗರಾಜ ಬೈಕ್ ಮೇಲೆ ಅಲ್ಲಿಗೆ ಹೋಗಿದ್ದಾನೆ. ಅಲ್ಲಿ ಕೆಲ ಕಾಲ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅಷ್ಟೇ... ಮಲ್ಲಿಕಾರ್ಜುನ ಅಲ್ಲೇ ಬಿದ್ದಿದ್ದ ಕಟ್ಟಿಗೆಯಿಂದ ನಾಗರಾಜನನ್ನು ಹೊಡೆದು ಕೊಂದು ಹಾಕಿದ್ದಾನೆ. ಬಳಿಕ ಅಲ್ಲಿಂದ ಮೂವರೂ ಪರಾರಿಯಾಗಿದ್ದಾರೆ. ಯಾವಾಗ ರಾತ್ರಿಯಾದರೂ ನಾಗರಾಜ‌ ಮನೆಗೆ ಬರಲಿಲ್ಲವೋ ಆಗ ಮನೆಯವರು ಉಪನಗರ ಠಾಣೆಗೆ ದೂರು ನೀಡಿದ್ದಾರೆ. ಕೊನೆಗೆ ಸೋಮವಾರ ಸಂಜೆ ನಾಗರಾಜದನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಪ್ರಕರಣದಲ್ಲಿ ಪೀರಜಾದೆ‌ ಮತ್ತು ನವೀನ್ ಪಾತ್ರದ ಬಗ್ಗೆ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಮಲ್ಲಿಕಾರ್ಜುನ ಹಡಪದ ಪರಾರಿಯಾಗಿದ್ದಾನೆ. ಒಟ್ಟಿನಲ್ಲಿ ಗೆಳೆಯ‌ ಎಂಬ ಕಾರಣಕ್ಕೆ ಸಾಲ ನೀಡಿ ಸಹಾಯ ಮಾಡಿದವನನ್ನೇ ಕೊಂದಿದ್ದು ಇಡೀ ಗೆಳೆಯರ ಗುಂಪಿನಲ್ಲಿ ನಡುಕವನ್ನೇ ಹುಟ್ಟಿಸಿದೆ.

ಬೈಟ್: ರಾಕೇಶ, ಮೃತ ನಾಗರಾಜನ ಅಣ್ಣ ( ಜಾಕೀಟ್ ಧರಿಸಿದವರು)

ಬೈಟ್: ಅರುಣ, ಮೃತ‌ ನಾಗರಾಜ‌ ತಂದೆ ( ಸ್ವೇಟರ್ ಧರಿಸಿದವರು)

ಬೈಟ್: ಡಿ.ಎಲ್. ನಾಗೇಶ, ಡಿಸಿಪಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.