ETV Bharat / state

ಹುಬ್ಬಳ್ಳಿಯೊಳಗೆ ಹಿಂಗ್‌ ಇದ್‌ ಸೈಕಲ್‌ಗಳು.. ಹಂಗ್‌ ಅನ್ನೋದೊರಳಗೇ ಮಂಗಮಾಯ.. ಕಾರಣ ತೈಲಬೆಲೆ.. - ಪೆಟ್ರೋಲ್ ಬೆಲೆ ಏರಿಕೆ ಹಿನ್ನೆಲೆ ಸೈಕಲ್ ಕಳ್ಳತನಕ್ಕೆ ಮುಂದಾದ ಖದೀಮರು

ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿರುವ ಹಿನ್ನೆಲೆ ಸಾರ್ವಜನಿಕರು ಬೈಕ್ ಬಿಟ್ಟು ಸೈಕಲ್ ಖರೀದಿಸಲು ಮುಂದಾಗುತ್ತಿದ್ದಾರೆ. ಆದರೆ, ಈಗ ಕಳ್ಳರ ಕಣ್ಣು ಸೈಕಲ್ ಮೇಲೂ ಬಿದ್ದಿದೆ. ಸಾರ್ವಜನಿಕರು ಕಳ್ಳರ ಹಾವಳಿ ತಪ್ಪಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ..

ಹುಬ್ಬಳ್ಳಿಯಲ್ಲಿ ಹೇಚ್ಚಿದ ಸೈಕಲ್​​ ಕಳ್ಳತನ
ಹುಬ್ಬಳ್ಳಿಯಲ್ಲಿ ಹೇಚ್ಚಿದ ಸೈಕಲ್​​ ಕಳ್ಳತನ
author img

By

Published : Jul 21, 2021, 5:11 PM IST

Updated : Jul 21, 2021, 5:20 PM IST

ಹುಬ್ಬಳ್ಳಿ : ಲಾಕ್​​ಡೌನ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಆಗಿರುವುದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು, ಬೈಕ್, ಕಾರ್ ಬಿಟ್ಟು ಈಗ ಸೈಕಲ್ ಕಳ್ಳತನ ಮಾಡಲು ಮುಂದಾಗಿದ್ದಾರಂತೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೈಕಲ್ ಕಳ್ಳರ ಹಾವಳಿ ಹೆಚ್ಚಾಗಿದೆ. ಜನರು ಮನೆಯ ಹೊರಗೆ ಸೈಕಲ್ ನಿಲ್ಲಿಸಲು ಭಯ ಪಡುತ್ತಿದ್ದಾರೆ. ಮನೆಯ ಮುಂದೆ, ಕಾಂಪೌಂಡ್‌ನೊಳಗೆ ನಿಲ್ಲಿಸಿದ್ದ ಸೈಕಲ್​ಗಳು ಕ್ಷಣಾರ್ಧದಲ್ಲಿ ಮಂಗಮಾಯವಾಗುತ್ತಿವೆಯಂತೆ.

ನಗರದ ದೇಶಪಾಂಡೆಲೇಔಟ್, ಸಂತೋಷನಗರ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಸೈಕಲ್‌ಗಳು ಕಳ್ಳತವಾಗುತ್ತಿವೆ. ಕಳೆದ ಮೂರು ತಿಂಗಳಿನಲ್ಲಿ ಸುಮಾರು ಸೈಕಲ್‌ಗಳು ಕಳ್ಳತನವಾಗಿರುವ ಕುರಿತು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ಸಹ ದಾಖಲಾಗಿವೆ ಅಂತಿದಾರೆ ಸ್ಥಳೀಯರು.

ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿರುವ ಹಿನ್ನೆಲೆ ಸಾರ್ವಜನಿಕರು ಬೈಕ್ ಬಿಟ್ಟು ಸೈಕಲ್ ಖರೀದಿಸಲು ಮುಂದಾಗುತ್ತಿದ್ದಾರೆ. ಆದರೆ, ಈಗ ಕಳ್ಳರ ಕಣ್ಣು ಸೈಕಲ್ ಮೇಲೂ ಬಿದ್ದಿದೆ. ಸಾರ್ವಜನಿಕರು ಕಳ್ಳರ ಹಾವಳಿ ತಪ್ಪಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಹೆಚ್ಚಿರುವ ಸೈಕಲ್​​ ಕಳ್ಳತನ ಪ್ರಕರಣಗಳು..

ಇದನ್ನೂ ಓದಿ : ಸಿಎಂ ಭೇಟಿ ಮಾಡಿದ ಸಿದ್ಧಗಂಗಾ ಶ್ರೀ.. ಬಿಎಸ್​ವೈ ಜೊತೆ ಮಹತ್ವದ ಚರ್ಚೆ

Last Updated : Jul 21, 2021, 5:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.