ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ದ್ವಿಶತಕ ಬಾರಿಸಿದ್ದು, ಇಂದು ನವಲಗುಂದ ತಾಲೂಕಿನ ಮೊರಬ ಗ್ರಾಮದ ಮೂವರು ಸೇರಿದಂತೆ ನಾಲ್ವರಿಗೆ ಸೋಂಕು ಹರಡಿದೆ. ಈವರೆಗೂ ಗ್ರಾಮದಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿದೆ.
ಆಸ್ಪತ್ರೆಗೆ ದಾಖಲಾದ ದಿನವೇ ಜೂನ್ 15ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ರೋಗಿ ಸಂಖ್ಯೆ-7060 (65 ವರ್ಷ) ವ್ಯಕ್ತಿಯಿಂದ ಮೂವರಿಗೆ ಸೋಂಕು ತಗುಲಿದೆ.
- ರೋಗಿ ಸಂಖ್ಯೆ-9158, 72 ವರ್ಷದ ಮಹಿಳೆ
- ರೋಗಿ ಸಂಖ್ಯೆ-9159, 43 ವರ್ಷದ ಪುರುಷ
- ರೋಗಿ ಸಂಖ್ಯೆ-9160, 30 ವರ್ಷದ ಪುರುಷ
- ರೋಗಿ ಸಂಖ್ಯೆ-9161, 35 ವರ್ಷದ ಮಹಿಳೆ