ಧಾರವಾಡ: ಜಿಲ್ಲೆಯ ಕೊರೊನಾ ಬುಲೆಟಿನ್ ಬಿಡುಗಡೆಗೊಂಡಿದೆ. ನಿನ್ನೆಯವರೆಗೆ ದಾಖಲಾಗಿದ್ದ 317 ಮಾದರಿಗಳಲ್ಲಿ 104 vರದಿಗಳು ನೆಗೆಟಿವ್ ಬಂದಿದ್ದು, 213 ಜನರ ವರದಿ ಬಾಕಿಯಿದೆ.
![ಧಾರವಾಡ ಜಿಲ್ಲೆಯ ಕೊರೊನಾ ಬುಲೆಟಿನ್](https://etvbharatimages.akamaized.net/etvbharat/prod-images/kn-dwd-9-corona-health-bulletine-av-ka10001_29042020194746_2904f_1588169866_512.jpg)
ಇಂದು 24 ಗಂಟೆಗಳಲ್ಲಿ 227 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 8 ಜನರಿಗೆ ಆಸ್ಪತ್ರೆಯಲ್ಲಿ ಐಸೊಲೇಷನ್ನಲ್ಲಿ ಇಡಲಾಗಿದೆ. ಇಲ್ಲಿಯವರೆಗೆ ಒಟ್ಟು 2,993 ಜನರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ.
ಅದರಲ್ಲಿ 2,212 ಜನರಿಗೆ 14 ದಿನಗಳ ಐಸೊಲೇಷನ್ನಲ್ಲಿ ಇಡಲಾಗಿದೆ. 70 ಜನರಿಂದ 14 ದಿನಗಳ ಐಸೊಲೇಷನ್ ಹಾಗೂ 703 ಜನರಿಂದ 28 ದಿನಗಳ ಐಸೊಲೇಷನ್ ಪೂರ್ಣಗೊಂಡಿದೆ.