ETV Bharat / state

ಗೂಟದ ಕಾರು ಬೇಕು ಎನ್ನುವವರಿಗೆ ಸಚಿವ ಸ್ಥಾನ ನೀಡಬಾರದು: ಯತ್ನಾಳ್​​​ - ಬಸನಗೌಡ ಪಾಟೀಲ ಯತ್ನಾಳ್​

ಗೂಟದ ಕಾರು ಬೇಕು ಎನ್ನುವವರಿಗೆ ಸಚಿವ ಸ್ಥಾನ ನೀಡಬಾರದು. ಕೆಲಸ ಮಾಡುವವರಿಗೆ ಸಚಿವ ಸ್ಥಾನ ನೀಡಲಿ. ಪಕ್ಷಕ್ಕೆ ಬಂದವರಿಗೆ ಸಚಿವ ಸ್ಥಾನ ಹಂಚಿಕೆ ಮಾಡಲಿ. ಅವರು ಪಕ್ಷಕ್ಕೆ ಬಂದಿದ್ದಕ್ಕೆ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹೇಳಿದ್ದಾರೆ.

Basangouda patil yatanal
ಬಸನಗೌಡ ಪಾಟೀಲ ಯತ್ನಾಳ್​
author img

By

Published : Jan 28, 2020, 3:05 PM IST

ಹುಬ್ಬಳ್ಳಿ: ರಾಜ್ಯ ಸಚಿವ ಸಂಪುಟವನ್ನು ಶುಕ್ರವಾರದೊಳಗೆ ವಿಸ್ತರಣೆ ಮಾಡಲಿ. ಸಂಪುಟ ವಿಸ್ತರಣೆ ವಿಚಾರ ಒಂದು ರೀತಿ ಪ್ರಹಸನವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್​

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗ್ಗೆಯಿಂದ ರಾತ್ರಿಯವರೆಗೂ ಬರೀ ಮಾಧ್ಯಮಗಳಲ್ಲಿ ಸಂಪುಟ ವಿಸ್ತರಣೆಯದ್ದೇ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಗಮನಹರಿಸಬೇಕಾಗಿದೆ. ಅದಕ್ಕಾಗಿ ಸಂಪುಟ ವಿಸ್ತರಣೆ ಅತ್ಯಗತ್ಯವಾಗಿದೆ ಎಂದರು.

ಸಂಪುಟ ವಿಸ್ತರಣೆಗೆ ಹೈಮಾಂಡ್ ಹಾಗೂ ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಸಂಪುಟ ವಿಸ್ತರಣೆ ವೇಳೆ ಕೆಲವರು ತ್ಯಾಗ ಮಾಡಲಿ. ಕೇವಲ ವಿಧಾನಸೌಧದಲ್ಲಿ ಕುಳಿತುಕೊಳ್ಳುವವರಿಗೆ ಸಚಿವ ಸ್ಥಾನ ನೀಡಬಾರದು ಎಂದರು.

ಗೂಟದ ಕಾರು ಬೇಕು ಎನ್ನುವವರಿಗೆ ಸಚಿವ ಸ್ಥಾನ ನೀಡಬಾರದು. ಕೆಲಸ ಮಾಡುವವರಿಗೆ ಸಚಿವ ಸ್ಥಾನ ನೀಡಲಿ. ಪಕ್ಷಕ್ಕೆ ಬಂದವರಿಗೆ ಸಚಿವ ಸ್ಥಾನ ಹಂಚಿಕೆ ಮಾಡಲಿ. ಅವರು ಪಕ್ಷಕ್ಕೆ ಬಂದಿದ್ದಕ್ಕೆ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದ ಅವರು, ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ತ್ಯಾಗ ಮಾಡಿದ್ದೇನೆ ಎಂದರು.

ಮಿಣಿ ಮಿಣಿ ಪೌಂಡರ್ ಎಂಬ ಹೆಚ್​ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆ ಮಿಣಿ ಮಿಣಿ ಪೌಡರ್ ಎಲ್ಲಿತ್ತೋ ಏನೋ. ನಾನಂತೂ ನೋಡಿಲ್ಲ. ಕುಮಾರಸ್ವಾಮಿಯವರೇ ಸೃಷ್ಟಿಸಿದ ಪೌಡರ್ ಇದು. ಬಿಜೆಪಿಯವರು ಮಾತನಾಡಿದರೆ ವಿಕೃತ ಮನಸ್ಸು ಅಂತಾರೆ. ಆದರೆ ಕುಮಾರಸ್ವಾಮಿಯವರದ್ದು ವಿಕೃತ ಮನಸ್ಸು. ಸಿಡಿ ಮಾಡುತ್ತೇನೆ, ಸಿಡಿ ಬಿಡುಗಡೆ ಮಾಡುತ್ತೇನೆ ಅನ್ನುವವರದ್ದು ವಿಕೃತ ಮನಸ್ಸು ಎಂದರು.

ಅವರ ಸಿಡಿಗಳು ನಮ್ಮ ಬಳಿಯೂ ಇವೆ. ಕುಮಾರಸ್ವಾಮಿಯವರು ಏನೇನು ಮಾಡುತ್ತಾರೆ ಅನ್ನೋದು ನಮಗೂ ಗೊತ್ತಿದೆ. ನಮಗೂ ಸಿಡಿ ಬಿಡುಗಡೆ ಮಾಡೋಕೆ ಬರುತ್ತದೆ ಎಂದು ಕುಮಾರಸ್ವಾಮಿ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.