ETV Bharat / state

ಚಾಕು ಇರಿದು ಅಪಘಾತವೆಂದು ಬಿಂಬಿಸಿದ ಆರೋಪ: ಮೂವರ ವಿರುದ್ಧ ದೂರು

author img

By

Published : Oct 26, 2021, 9:30 AM IST

ಕ್ಷುಲ್ಲಕ ವಿಚಾರಕ್ಕೆ ಅಮಿತ್ ಹಾಗೂ ಮಾರುತಿ ಲಕ್ಕಣ್ಣವರ ನಡುವೆ ಜಗಳ ನಡೆದಿದೆ. ಈ ಹಿನ್ನೆಲೆಯಲ್ಲಿ ಅಮಿತ್ ತನ್ನ ಸಹಚರರೊಂದಿಗೆ ಸೇರಿ ಮಾರುತಿಗೆ ಚಾಕುವಿನಿಂದ ಇರಿದು ಅಪಘಾತ ಎಂದು ಬಿಂಬಿಸಿರುವ ಆರೋಪ ಕೇಳಿ ಬಂದಿದೆ.

knife
knife

ಹುಬ್ಬಳ್ಳಿ: ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು, ಅದನ್ನು ಅಪಘಾತವೆಂದು ಬಿಂಬಿಸಿ ನಗರದ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಶಿರಡಿ ನಗರದ ನಿವಾಸಿ ಮಾರುತಿ ಲಕ್ಕಣ್ಣವರಿಗೆ ಅಮಿತ್​ ಹಾಗೂ ಸಹಚರರಾದ ಶಶಿಕುಮಾರ್,​​ ಯಲ್ಲಪ್ಪ ಹಟ್ಟಿ ಚಾಕು ಇರಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕ್ಷುಲ್ಲಕ ವಿಚಾರವಾಗಿ ಮಾರುತಿ ಲಕ್ಕಣ್ಣವರ ಜತೆ ನಿನ್ನೆ ಅಮಿತ್​​​ ಕಿರಿಕ್ ಮಾಡಿಕೊಂಡಿದ್ದ. ಈ ವೇಳೆ ಅಮಿತ್​​, ಮಾರುತಿ ಕೊಲೆ ಮಾಡುವ ಉದ್ದೇಶದಿಂದ ಶಶಿಕುಮಾರ್ ಹಾಗೂ ಯಲ್ಲಪ್ಪನಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಬಳಿಕ ಶಶಿಕುಮಾರ್​, ಮಾರುತಿ ಹೊಟ್ಟೆಗೆ ಇರಿದು ಅಮಿತ್ ಜತೆ ಪರಾರಿಯಾಗಿದ್ದಾನೆ. ಬಳಿಕ ಯಲ್ಲಪ್ಪ ಹಟ್ಟಿ ಯಾರಿಗೂ ವಿಷಯ ತಿಳಿಸದೆ, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾನೆ. ಸಾಕ್ಷ್ಯ ನಾಶಪಡಿಸುವ ನಿಟ್ಟಿನಲ್ಲಿ ಮಾರುತಿ ಬೈಕ್​ ಮೇಲಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ವೈದ್ಯರ ಬಳಿ ಹೇಳಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಸೆಲ್ಫಿ ಮ್ಯಾನ್ ಸರೆಂಡರ್ ಹೈಡ್ರಾಮಾ: ಮುಂಬೈ ಪೊಲೀಸರಿಂದ ಬೆದರಿಕೆ ಎಂದಿದ್ದ ಕಿರಣ್ ಗೋಸಾವಿ?

ಮೂವರ ಕುತಂತ್ರ ಮಾರುತಿ ಪತ್ನಿ ಲಕ್ಷ್ಮೀ ಲಕ್ಕಣ್ಣವರಿಗೆ ತಿಳಿದಿದ್ದು, ಅವರು ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.