ETV Bharat / state

ಬಿಆರ್​​ಟಿಎಸ್ ಕಾರಿಡಾರ್​​​ನಲ್ಲಿ ಸಂಚರಿಸಿದ ಆ್ಯಂಬುಲೆನ್ಸ್​ಗೆ ದಂಡ... ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಫೆಬ್ರವರಿ 7ರಂದು ಈ ರಸ್ತೆಯಲ್ಲಿ ರೋಗಿಯನ್ನ ಆಸ್ಪತ್ರೆಗೆ ದಾಖಲಿಸಲು ಸಂಚರಿಸಿದ ಆ್ಯಂಬುಲೆನ್ಸ್​ಗೆ ಬಿಆರ್​​ಟಿಎಸ್ ಅಧಿಕಾರಿಗಳು 600 ರೂಪಾಯಿ ದಂಡ ವಿಧಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

brts-road-in-hubballi
ಬಿಆರ್​​ಟಿಎಸ್ ಕಾರಿಡಾರ್
author img

By

Published : Feb 25, 2021, 5:24 PM IST

ಹುಬ್ಬಳ್ಳಿ: ಅವಳಿ ನಗರ ಸಂಪರ್ಕಿಸಲು ಆರಂಭಿಸಿರುವ ಬಿಆರ್​​​ಟಿಎಸ್​ ಸಾರಿಗೆಯ ಪ್ರತ್ಯೇಕ ಕಾರಿಡಾರ್​​ ರಸ್ತೆಯಲ್ಲಿ ಯಾವುದೇ ಖಾಸಗಿ ವಾಹನಗಳ ಓಡಾಡ ನಿಷೇಧಿಸಲಾಗಿದೆ. ಆದರೆ ಪೊಲೀಸರು, ರಾಜಕಾರಣಿಗಳು ಮತ್ತು ತುರ್ತು ವಾಹನಗಳಿಗೆ ಈ ಮಾರ್ಗದಲ್ಲಿ ಸಂಚರಿಸಲು ಅವಕಾಶವಿದೆ.

ಆದರೆ ರೋಗಿಯೊಬ್ಬರನ್ನು ಈ ಮಾರ್ಗದ ಮೂಲಕ ಆಸ್ಪತ್ರೆಗೆ ಸಾಗಿಸಿದ್ದ ಆ್ಯಂಬುಲೆನ್ಸ್​ಗೆ ಬಿಆರ್​ಟಿಎಸ್ ಅಧಿಕಾರಿಗಳು ದಂಡ ವಿಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಿಆರ್​​​​ಟಿಎಸ್ ಸಾರಿಗೆಯ ಈ ಪ್ರತ್ಯೇಕ ಕಾರಿಡಾರ್ ನಿರ್ಮಾಣ ಅವೈಜ್ಞಾನಿಕವಾಗಿದೆ ಅನ್ನೋ ಆರೋಪವಿದೆ. ಅಲ್ಲದೇ ಈ ಪ್ರತ್ಯೇಕ ಕಾರಿಡಾರ್ ನಿರ್ಮಾಣದಿಂದ ಹುಬ್ಬಳ್ಳಿ-ಧಾರವಾಡ ಮಾರ್ಗ ಇಕಟ್ಟಿನಿಂದ ಕೂಡಿದೆ. ಇತಂಹ ಪರಿಸ್ಥಿತಿಯಲ್ಲಿ ಕಾರಡಾರ್​ನಲ್ಲಿ ಅಂಬುಲೈನ್ಸ್ ಸಂಚರಿಸಲು ಅನುಮತಿ ಇದ್ದರೂ ಅಧಿಕಾರಿಗಳು ಮಾತ್ರ ಆ್ಯಂಬುಲೆನ್ಸ್​​ಗೆ ದಂಡ ವಿಧಿಸಿ ದರ್ಪ ಮೆರೆದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಬಿಆರ್​​ಟಿಎಸ್ ಕಾರಿಡಾರ್​​​ನಲ್ಲಿ ಸಂಚರಿಸಿದ ಆ್ಯಂಬುಲೆನ್ಸ್​ಗೆ ದಂಡ

ಫೆಬ್ರವರಿ 7ರಂದು ಈ ರಸ್ತೆಯಲ್ಲಿ ರೋಗಿಯನ್ನ ಆಸ್ಪತ್ರೆಗೆ ದಾಖಲಿಸಲು ಸಂಚರಿಸಿದ ಆ್ಯಂಬುಲೆನ್ಸ್​ಗೆ ಬಿಆರ್​​ಟಿಎಸ್ ಅಧಿಕಾರಿಗಳು 600 ರೂಪಾಯಿ ದಂಡ ವಿಧಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮಾಜಿ ಸಿಎಂ, ಹಾಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕನಸಿನ ಯೋಜನೆ ಆಗಿರುವ ಬಿಆರ್​​​​ಟಿಎಸ್ ಸಾರಿಗೆ ವ್ಯವಸ್ಥೆ ವಿರುದ್ಧ ಒಂದೆಡೆ ಅವರದ್ದೇ ಪಕ್ಷದ ಶಾಸಕ ಅರವಿಂದ ಬೆಲ್ಲದ್ ಅಪಸ್ವರ ಎತ್ತಿದ್ದಾರೆ. ಇನ್ನೊಂದೆಡೆ ಜನರ ಜೀವ ಉಳಿಸಲು ಕಾರ್ಯನಿರ್ವಹಿಸುವ ಆ್ಯಂಬುಲೆನ್ಸ್​ಗೆ ಅಧಿಕಾರಿಗಳು ದಂಡ ವಿಧಿಸಿರುವುದು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅತಿಯಾಗಿದೆ ಶಬ್ಧ ‌ಮಾಲಿನ್ಯ: ಉದ್ಭವಿಸಲಿದೆಯಾ ಭಾರಿ ಸಮಸ್ಯೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.