ETV Bharat / state

ಪೌತಿ ಖಾತೆ ಮಾಡಿಕೊಡಲು 2,000 ಲಂಚ ಕೇಳಿದ ಗ್ರಾಮ ಲೆಕ್ಕಾಧಿಕಾರಿ - ವಿಡಿಯೋ ವೈರಲ್​ - benakanahalli Village accountant bribe case

ಪೌತಿ ಖಾತೆ ಮಾಡಿಕೊಡಲು ಲಂಚ-ಬೆನಕನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಆರೋಪ-ವಿಡಿಯೋ ವೈರಲ್

Village accountant asked for bribe in davanagere viral video
ಲಂಚ ಕೇಳಿದ ಗ್ರಾಮ ಲೆಕ್ಕಾಧಿಕಾರಿ
author img

By

Published : Jul 7, 2022, 3:47 PM IST

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯತ್​ನ​ ಲೆಕ್ಕಾಧಿಕಾರಿ ಧರ್ಮಪ್ಪ ಅವರು ವ್ಯಕ್ತಿಯೋರ್ವರಲ್ಲಿ ಲಂಚ ಕೇಳಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಗ್ರಾಮ ಲೆಕ್ಕಾಧಿಕಾರಿ 2 ಸಾವಿರ ಲಂಚ ಕೇಳಿದ್ದು, 500 ರೂ. ಕೊಡಲು ಹೋದ ವ್ಯಕ್ತಿಯನ್ನು ವಾಪಸ್ ಕಳುಹಿಸಿದ್ದಾರೆ ಎನ್ನಲಾಗ್ತಿದೆ.

ಪೌತಿ ಖಾತೆ ಮಾಡಿಸಲು ಬೆನಕನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಧರ್ಮಪ್ಪ ಬಳಿ ಬಂದ ವ್ಯಕ್ತಿ (ಹೆಸರು ಹೇಳಲಿಚ್ಛಿಸದವರು) ತಮ್ಮ ಫೈಲ್ ಮೂವ್ ಮಾಡುವಂತೆ ಹೇಳಿ 500 ರೂಪಾಯಿ ಕೊಡಲು‌ ಮುಂದಾಗಿದ್ದಾರೆ. ಈ ವೇಳೆ, 500 ರೂಪಾಯಿ ಕೊಡಲು ಬರುತ್ತೀಯಾ, ನೀನೇ ಇಟ್ಟುಕೊಂಡು ಹೋಗು, ನಾನು ಆರ್​ಐಗೆ 500 ಮತ್ತು ಸಿಬ್ಬಂದಿಗೆ 300 ರೂ. ಕೊಡಬೇಕು. ಅವರಿಗೆ ಕೊಟ್ಟ ಮೇಲೆ ನನಗೇನು ಉಳಿಯುತ್ತದೆ ಎಂದು ವ್ಯಕ್ತಿಗೆ ಆವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

2,000 ಲಂಚ ಕೇಳಿದ ಗ್ರಾಮ ಲೆಕ್ಕಾಧಿಕಾರಿ - ವಿಡಿಯೋ ವೈರಲ್​

ಇದನ್ನೂ ಓದಿ: ಅನೈತಿಕ ಸಂಬಂಧ ಪಶ್ನಿಸಿದ ಪತ್ನಿಯನ್ನು ಕೊಂದೇಬಿಟ್ಟ ಪತಿ.. ಹೃದಯಾಘಾತದ ಕಥೆ ಕಟ್ಟಿದವ ಪರಾರಿ

ಬಳಿಕ 500 ರೂಪಾಯಿ ಕೂಡ ಮುಟ್ಟದೇ 2,000 ರೂಪಾಯಿಗೆ ಬೇಡಿಕೆ ಇಟ್ಟು ವ್ಯಕ್ತಿಯನ್ನು 2,000ರೂ. ತೆಗೆದುಕೊಂಡು ಬಾ ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ ಎನ್ನಲಾಗ್ತಿದೆ. ಈ ಭ್ರಷ್ಟ ಅಧಿಕಾರಿ ಧರ್ಮಪ್ಪ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.