ದಾವಣಗೆರೆ: ಅವು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ದಲಿತ ಕುಟುಂಬಗಳು. ಸರ್ಕಾರ ಇವರಿಗೆ ಸಾಕಷ್ಟು ಸೌಲಭ್ಯ ನೀಡಿದರೂ ಆ ಸೌಲಭ್ಯಗಳಿಂದ ಅವರು ವಂಚಿತರಾಗಿದ್ದರು. ಆದರೆ, ಇಲ್ಲೊಬ್ಬ ಗ್ರಾಮದ ಜಮೀನ್ದಾರ ಇವರ ಮೇಲೆ ದರ್ಪ ಮೆರೆದಿದ್ದಾನೆ. ತನ್ನ ಅಡಕೆ ತೋಟಕ್ಕೆ ರಸ್ತೆ ಮಾಡುವ ಸಲುವಾಗಿ ದಲಿತ ಕುಟುಂಬಗಳಿಗೆ ಸೇರಿದ ಶೌಚಾಲಯ ನೆಲಕ್ಕುರಿಳಿಸಿ, ಗುಡಿಸಲುಗಳಿಗೆ ಬೆಂಕಿ ಹಂಚಿ ಕ್ರೌರ್ಯ ಮೆರೆದಿದ್ದಾನೆ.
ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಹೋಬಳಿ ಬಳಿಯ ಕಾಟೆನಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಗಳು ಅನುಭವಿಸುತ್ತಿರುವ ನರಕಯಾತೆ ಇದು. ದಲಿತ ಕುಟುಂಬಗಳು ರೋಸಿಹೋಗಲು ಪ್ರಮುಖ ಕಾರಣ ಈ ಗ್ರಾಮದ ಜಮೀನ್ದಾರ ವೀರೇಶ್, ಈತ ತನ್ನ ಅಡಕೆ ತೋಟಕ್ಕೆ ರಸ್ತೆ ಮಾಡಲು ದಲಿತ ಕುಟುಂಬಗಳಿಗೆ ತೊಂದರೆ ಕೊಡುತ್ತಿದ್ದಾನೆ.
ಸರ್ಕಾರ ನೀಡಿದ ಶೌಚಾಲಯಗಳನ್ನೇ ಧ್ವಂಸ ಮಾಡಿ, ದಲಿತರ ಗುಡಿಸಲಿಗೆ ಬೆಂಕಿ ಇಟ್ಟಿದ್ದಾನೆ. ಮೇಲಾಗಿ ಹಲ್ಲೆ ಕೂಡಾ ಮಾಡಿದ್ದಾನೆ. ದಾಖಲೆಗಳ ಪ್ರಕಾರ, ಆ ಸ್ಥಳ ದಲಿತ ಕುಟುಂಬಗಳದ್ದು. ಇಂತಹ ಪರಿಸ್ಥಿತಿಯಲ್ಲಿ ಉದ್ದೇಶ ಪೂರ್ವಕವಾಗಿ ದಬ್ಬಾಳಿಕೆ ಮಾಡಿ ಅವರನ್ನ ಖಾಲಿ ಮಾಡಿಸುವ ಹುನ್ನಾರ ಮಾಡಿ ನಿತ್ಯ ಹಿಂಸೆ ಕೊಡುತ್ತಿದ್ದಾನೆ.
ವೀರೇಶ್ ಕಳೆದ ಹಲವಾರು ವರ್ಷಗಳಿಂದ ಹೀಗೆ ಹಿಂಸೆ ಕೊಡುತ್ತಲೇ ಇದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರು ಪ್ರಯೋಜನ ಆಗುತ್ತಿಲ್ಲ. ಈಗ ಪೊಲೀಸರೇ ಪ್ಲಾನ್ ಮಾಡಿ ಆತನ ಕಡೆಯಿಂದ ಒಂದು ದೂರು ತೆಗೆದುಕೊಂಡು ದಲಿತ ಹುಡುಗರನ್ನ ಹುಡುಕಾಡುವ ಪ್ಲಾನ್ ಮಾಡಿದ್ದಾರೆ.
ಇದು ಎಲ್ಲರೂ ಸೇರಿಕೊಂಡು ಮಾಡುತ್ತಿರುವ ಪ್ಲಾನ್ ಅಷ್ಟೆ. 13 ಕುಟುಂಬಗಳಿಗೆ ವೀರೇಶ್ನಿಂದ ಹಿಂಸೆ ಆಗುತ್ತಿದೆ. ಗುರಮ್ಮ ಒಬ್ಬಂಟಿ ಮಹಿಳೆ. ಮಕ್ಕಳು ಕೂಲಿ ಕೆಲಸಕ್ಕೆ ದೂರದ ಚಿಕ್ಕಮಗಳೂರು ಕಾಫಿ ತೋಟದಲ್ಲಿ ಗುಳೆ ಹೋಗಿದ್ದಾರೆ. ಇವಳು ಗ್ರಾಮದಲ್ಲಿ ಕೂಲಿ ಮಾಡುತ್ತಾರೆ. ಇದನ್ನೆ ನೋಡಿಕೊಂಡು ವೀರೇಶ್ ಇವರಿಗೆ ಹಿಂಸೆ ನೀಡುತ್ತಿದ್ದಾನೆ.
ಒಟ್ಟಾರೆ, ಈ ಘಟನೆಯಲ್ಲಿ ವೀರೇಶ್ ಪುತ್ರನಿಗೂ ಗಾಯವಾಗಿದೆಯಂತೆ. ಮೇಲಾಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ ಎಂದು ಹೇಳಲಾಗುತ್ತಿದೆ. ನೀವು ಬೇಕಾದ್ದು ಮಾಡಿಕೊಂಡು ಹೋಗಿ, ನಾವು ಬಂದಿದ್ದು ಎದುರಿಸುತ್ತೇವೆ ಅಂತಿದ್ದಾನೆ ವೀರೇಶ್.
ಅದೇನೆ ಆಗಲಿ, ಈಗಾಗಲೇ ಎಫ್ಐಆರ್ ಆಗಿದೆ. ಆದರೆ, ಆರೋಪಿಗಳು ಬಿಂದಾಸ್ ಆಗಿ ಹೊರಗೆ ತಿರುಗಾಡುತ್ತಿದ್ದಾರೆ. ಆದಷ್ಟು ಬೇಗ ಬಿಳಿಚೋಡು ಠಾಣೆಯ ಪೊಲೀಸರು ಆರೋಪಿಗಳನ್ನ ಬಂಧಿಸಿ ದಲಿತ ಕುಟುಂಬ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕಾಗಿದೆ.
ಓದಿ: ಬಿಎಂಟಿಸಿಗೆ ಬೆಣ್ಣೆ, ಉ ಕ ಸಾರಿಗೆಗೆ ಸುಣ್ಣ: ಸಿಎಂ ವಿರುದ್ಧ ಸಂಪುಟ ಸಹೋದ್ಯೋಗಿಯಿಂದ ಸಣ್ಣಗೆ ಅಸಮಾಧಾನ