ETV Bharat / state

53 ಸರ್ಕಾರಿ ಶಾಲೆ ಗೋಡೆಗಳ ಸುಂದರೀಕರಣ: ಸುಮನಾ ಫೌಂಡೇಶನ್​ ಮೆಚ್ಚುಗೆ ಕಾರ್ಯ - ದೇವರಬೆಳಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ವರ್ಷಗಟ್ಟಲೆ ಸುಣ್ಣ ಬಣ್ಣವನ್ನೇ ಕಾಣದ ಅದೆಷ್ಟೋ ಸರ್ಕಾರಿ ಶಾಲೆಗಳಿಗೆ ಬೆಂಗಳೂರಿನ‌ ಸಂಜಯನಗರದ ಸುಮನಾ ಫೌಂಡೇಶನ್ ತಂಡ ಹೊಸ‌‌ ಸ್ವರೂಪ ನೀಡ್ತಿದೆ. ಶಾಲೆ ಗೋಡೆಗಳ‌ ಮೇಲೆ ಬಣ್ಣಬಣ್ಣದ ಚಿತ್ರಗಳನ್ನು ಬಿಡಿಸಿ ವಿದ್ಯಾರ್ಥಿಗಳನ್ನು ಶಾಲೆಯೆಡೆ ಆಕರ್ಷಿಸುತ್ತಿದೆ.

‌sumana foundation
ದೇವರಬೆಳಕೆರೆ ಗ್ರಾಮದ ಪ್ರಾಥಮಿಕ ಶಾಲೆ
author img

By

Published : Jan 11, 2023, 8:55 AM IST

Updated : Jan 11, 2023, 10:21 AM IST

ದೇವರಬೆಳಕೆರೆ ಗ್ರಾಮದ ಸರ್ಕಾರಿ ಶಾಲೆಗೆ ಸುಮನಾ ಫೌಂಡೇಶನ್​ ವತಿಯಿಂದ ಸುಣ್ಣ ಬಣ್ಣ

ದಾವಣಗೆರೆ: ಬೆಂಗಳೂರಿನ‌ ಸಂಜಯನಗರದ ಸುಮನಾ ಫೌಂಡೇಶನ್‌ನ ತಂಡವೊಂದು ಸದ್ದಿಲ್ಲದೇ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡ್ತಿದೆ. ಸುಣ್ಣಬಣ್ಣ ಕಾಣದ ಅದೆಷ್ಟೋ ಸರ್ಕಾರಿ ಶಾಲೆಗಳಲ್ಲಿ ಈ ತಂಡ ಹಲವು ದಿನಗಳ ಕಾಲ ಉಳಿದುಕೊಂಡು ಜನ ಮೆಚ್ಚುಗೆಯ ಕೆಲಸ ಮಾಡುತ್ತಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನೂ ಇದೇ ತಂಡ ಜನರು ತಿರುಗಿ ನೋಡುವಂತೆ ಮಾಡಿದೆ.

ರಾಜ್ಯಾದ್ಯಂತ ಸಂಚರಿಸುವ ಸುಮನಾ ಫೌಂಡೇಶನ್​ನ‌ ಸದಸ್ಯರು ಇಲ್ಲಿಯತನಕ ಒಟ್ಟು 53 ಸರ್ಕಾರಿ ಶಾಲೆಗಳಿಗೆ ಆಕರ್ಷಕ ವಿನ್ಯಾಸ ನೀಡಿದ್ದಾರೆ. ದೇವರಬೆಳಕೆರೆ ಗ್ರಾಮದಲ್ಲಿರುವ‌ ಸರ್ಕಾರಿ ಶಾಲೆಯಲ್ಲಿ ಉಳಿದುಕೊಂಡು ತಮ್ಮ ಸ್ವಂತ ಖರ್ಚಿನಲ್ಲೇ ಬಣ್ಣ ಬಳಿದು, ‌ಮಕ್ಕಳನ್ನು ಆಕರ್ಷಿಸುವ ಚಿತ್ರಗಳನ್ನು ಬಿಡಿಸಿದ್ದಾರೆ. ಇವರ ಕೆಲಸಕ್ಕೆ ಗ್ರಾಮಸ್ಥರು ಕೂಡ ಬೆಂಬಲ ಕೊಟ್ಟಿದ್ದು, ಊಟ ಹಾಗೂ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.

ಸುಮನಾ ಫೌಂಡೇಶನ್ ಸಂಸ್ಥಾಪಕಿ ಸುನಿತಾ ಮಂಜುನಾಥ್ ಪ್ರತಿಕ್ರಿಯಿಸಿ, 'ದಾವಣಗೆರೆಗೆ 20 ಜನರ ತಂಡ ಬಂದಿದ್ದು, ಸುಮನಾ ಸುಂದರ ಮನಸ್ಸಿನ ನಾಗರಿಕರು ಎಂಬ ಅರ್ಥದಲ್ಲಿ ಈ ಕಾರ್ಯ ಮಾಡುತ್ತಾ ಬಂದಿದ್ದೇವೆ. ಇಲ್ಲಿಯತನಕ 53 ಶಾಲೆಗಳನ್ನು ಸುಂದರೀಕರಣ ಮಾಡಿದ್ದೇವೆ. ದೇವರಬೆಳಕೆರೆ ಶಾಲೆಯ ಗೋಡೆಗಳ‌ ಮೇಲೆ ಮಕ್ಕಳನ್ನು ಆಕರ್ಷಿಸುವ ಚಿತ್ರಗಳನ್ನು ಚಿತ್ರಿಸಲಾಗಿದೆ' ‌ಎಂದರು.‌

ಇದನ್ನೂ ಓದಿ: ಶಾಲೆ ಗೋಡೆಯಲ್ಲಿ ಅರಳಿದ ನಾಡ ಬಾವುಟ.. ಹೊಸ ರಂಗು ನೀಡಿದ ಗೆಳೆಯರ ಬಳಗ

ನಿರ್ಮಾಣದ ಸಂದರ್ಭದಲ್ಲಿ ಮಾತ್ರ ಈ ಶಾಲೆ ಸುಣ್ಣಬಣ್ಣ ಕಂಡಿತ್ತಂತೆ. ಅಲ್ಲಿಂದ ಈವರೆಗೂ ಗೋಡೆಗಳು ಬಣ್ಣವನ್ನೇ ಕಂಡಿಲ್ಲ. ಗ್ರಾಮದ ಯುವಕ ವೀರೇಶ್ ಎಂಬುವರು ಸುಮನಾ ಫೌಂಡೇಶನ್ ಸಂಪರ್ಕಿಸಿ ತಮ್ಮೂರಿನ ಶಾಲೆಯ ಸಮಸ್ಯೆ ಕುರಿತು ತಿಳಿಸಿದ್ದರಂತೆ.

ಇದನ್ನೂ ಓದಿ: ಬಣ್ಣ ನಮ್ಮದು, ಶಾಲೆಗೆ ಸಹಾಯ ನಿಮ್ಮದು : ಬಣ್ಣ ದರ್ಪಣ ಅಭಿಯಾನ ಆರಂಭಿಸಿದ ಪ್ರಹ್ಲಾದ ಜೋಶಿ

'ಸುಮನಾ ಫೌಂಡೇಶನ್ ಸದಸ್ಯರ ಶ್ರಮದಿಂದಾಗಿ ಶಾಲೆಯು ಅರಿಶಿಣ, ಕುಂಕುಮ ಬಣ್ಣದಿಂದ ಮಿಂಚುತ್ತಿದೆ. ಶಾಲೆಯ ಮುಖ್ಯದ್ವಾರದಲ್ಲಿ ಬಿಡಿಸಲಾದ ಮಕ್ಕಳ ಚಿತ್ರಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೋರ್ಡ್, ವೀಣೆ‌ ಹಿಡಿದು ಕುಳಿತಿರುವ ಸರಸ್ವತಿ ಹಾಗೂ ಜಿರಾಫೆ ಹುಲ್ಲು ತಿನ್ನುತ್ತಿರುವ ಗ್ರಾಫಿಕ್‌ ಚಿತ್ರಗಳು ಮಕ್ಕಳನ್ನು ಸೆಳೆಯುತ್ತಿವೆ. ಶಾಲೆಯ ಮೆಟ್ಟಿಲುಗಳು ನೀಲಿ ಬಣ್ಣದಿಂದ ಮಕ್ಕಳನ್ನು ಸ್ವಾಗತಿಸುತ್ತಿವೆ. ಕಳೆಗುಂದಿದ್ದ ಶಾಲೆಯ ಗೋಡೆಗಳಿಗೆ ಹೊಸ ಸ್ಪರ್ಶ ನೀಡಿದ್ದಾರೆ' ಎಂದು ಗ್ರಾಮದ ಮುಖಂಡ ಕರಿಬಸಪ್ಪ ಖುಷಿ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಜಾ ದಿನಗಳಲ್ಲಿ ಶಾಲೆ ಗೋಡೆಗಳಿಗೆ ಸುಣ್ಣಬಣ್ಣ: ಕೊಪ್ಪಳ ಶಿಕ್ಷಕರ ಮಾದರಿ ನಡೆಗೆ ಮೆಚ್ಚುಗೆ

Last Updated : Jan 11, 2023, 10:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.