ETV Bharat / state

ಕಲರ್ ಪ್ರಿಂಟರ್​ನಿಂದಲೇ ಖೋಟಾ ನೋಟು ಮುದ್ರಣ: ಇಬ್ಬರ ಬಂಧನ - ಒರಿಜಿನಲ್​​ ನೋಟುಗಳನ್ನೇ ಸ್ಕ್ಯಾನ್​ ಮಾಡಿ ಪ್ರಿಂಟ್

ದಾವಣಗೆರೆಯ ನಗರದ ಯಲ್ಲಮ್ಮ ನಗರದಲ್ಲಿ ಖೋಟಾ ನೋಟು ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

printing-of-fake-notes-from-color-printer-two-accused-arrested-in-davanagere
ಕಲರ್ ಪ್ರಿಂಟರ್​ನಿಂದಲೇ ಖೋಟಾ ನೋಟುಗಳ ಮುದ್ರಣ: ಚಾಲಕಿಗಳ ಕೈ ಚಳಕಕ್ಕೆ ಪೊಲೀಸರಿಗೇ ದಂಗು
author img

By

Published : Aug 12, 2022, 7:51 PM IST

ದಾವಣಗೆರೆ: ಜಿಲ್ಲೆಯಲ್ಲಿ ಖೋಟಾ ನೋಟು ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಚಾಲಾಕಿಗಳು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಖದೀಮರು ಕಲರ್ ಪ್ರಿಂಟರ್​ನಿಂದಲೇ ಖೋಟಾ ನೋಟುಗಳನ್ನು ಪ್ರಿಂಟ್​ ಹಾಕುತ್ತಿದ್ದರು.

ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿಸಿಆರ್​ಬಿ ಪೊಲೀಸರು ದಾಳಿ ನಡೆಸಿದ್ದಾರೆ. ಅಶೋಕ ಹಾಗೂ ಅರಸನಾಳು ಹಾಲೇಶಿ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 1,20,700 ರೂಪಾಯಿ ಖೋಟಾ ನೋಟುಗಳು ಹಾಗೂ ಒಂದು ಕಲರ್ ಜೆರಾಕ್ಸ್ ಮಷಿನ್ ಹಾಗೂ ಇದಕ್ಕೆ ಸಂಬಂಧಿಸಿದ ಇತರೆ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಲರ್ ಪ್ರಿಂಟರ್​ನಿಂದಲೇ ಖೋಟಾ ನೋಟುಗಳ ಮುದ್ರಣ: ಚಾಲಕಿಗಳ ಕೈ ಚಳಕಕ್ಕೆ ಪೊಲೀಸರೇ ದಂಗು

ಒರಿಜಿನಲ್​ ನೋಟುಗಳ ಸ್ಕ್ಯಾನ್,​ ಪ್ರಿಂಟ್​: ಆರೋಪಿಗಳು ನೋಡಲು ಹಳ್ಳಿಗರಂತೆ ಕಾಣಿಸುತ್ತಾರೆ. ಯಲ್ಲಮ್ಮ ನಗರದ 4ನೇ ಮೇನ್ ರಸ್ತೆ, 6ನೇ ಕ್ರಾಸ್​ನ ತೆಲಗಿ ಶೇಖರಪ್ಪನವರ ಮನೆ ಸಮೀಪ ದಂಧೆ ನಡೆಸುತ್ತಿದ್ದರು. 100 ರೂ. ಮೌಲ್ಯದ 26 ನೋಟುಗಳು, 200 ರೂ. ಮೌಲ್ಯದ 133 ನೋಟುಗಳು ಹಾಗೂ 500 ರೂ. ಮೌಲ್ಯದ 183 ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿಗಳು ಕಲರ್ ಜೆರಾಕ್ಸ್ ಮಷಿನ್ ಇಟ್ಟುಕೊಂಡು ಬಾಂಡ್ ಪೇಪರ್​ನಲ್ಲಿ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡುತ್ತಿದ್ದರು. ಅವುಗಳ ಮೇಲೆ ಪೆನ್ಸಿಲ್​ನಲ್ಲಿ ಅಸಲಿ ನೋಟಿನ ಹಾಗೇ ಕಾಣುವಂತೆ ಮಾರ್ಕ್ ಮಾಡುತ್ತಿದ್ದರು. ಈ ನೋಟುಗಳನ್ನು ಯಾರೇ ನೋಡಿದರೂ ನಕಲಿ ನೋಟುಗಳೆಂಬ ಅನುಮಾನವೇ ಬರುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಖೋಟಾ ನೋಟು ಸೃಷ್ಟಿಸುತ್ತಿದ್ದರು. ಇವರು ಮೂಲ (ಒರಿಜಿನಲ್​) ನೋಟುಗಳನ್ನೇ ತೆಗೆದುಕೊಂಡು ಸ್ಕ್ಯಾನ್​ ಮಾಡಿ ಪ್ರಿಂಟ್​ ಮಾಡುತ್ತಿದ್ದರು ಎಂದು ಎಸ್​ಪಿ ಸಿ.ಬಿ.ರಿಷ್ಯಂತ್ ತಿಳಿಸಿದರು.

ಇದನ್ನೂ ಓದಿ: ಹೈಫೈ ಜೀವನಕ್ಕಾಗಿ ಕಳ್ಳತನ: 12 ಬುಲೆಟ್​ ಎಗರಿಸಿ ಸಿಕ್ಕಿಬಿದ್ದ ಬಿಟೆಕ್ ವಿದ್ಯಾರ್ಥಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.