ದಾವಣಗೆರೆ: ಅಕ್ರಮವಾಗಿ ನಡೆಸುತ್ತಿದ್ದ ಕಲ್ಲು ಕ್ವಾರಿ ಮೇಲೆ ದಾವಣಗೆರೆಯ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಸ್ಫೋಟಕಗಳನ್ನು ಜಪ್ತಿ ಮಾಡಿದ್ದಾರೆ.
![ಸ್ಫೋಟಕಗಳನ್ನು ವಶಕ್ಕೆ ಪಡೆದ ಪೊಲೀಸರು](https://etvbharatimages.akamaized.net/etvbharat/prod-images/kn-dvg-03-05-vasha-av-7204336_05032021200842_0503f_1614955122_816.jpg)
ಶಿವಮೊಗ್ಗ ಹಾಗು ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ಗಳು ಸ್ಫೋಟಗೊಂಡ ಘಟನೆಗಳು ನಡೆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ದಾವಣಗೆರೆಯ ಪೊಲೀಸರು ಹಾಗು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮ ಕಲ್ಲು ಕ್ವಾರಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಪೊಲೀಸರು ಹಾಗೂ ಬ್ಯಾಡ್ಮಿಂಗ್ ತಜ್ಞರು ದಾವಣಗೆರೆ ತಾಲೂಕು ಒಂಟಿಹಾಳು ಗ್ರಾಮದ ಹತ್ತಿರವಿರುವ ಗುಬ್ಬಿಕೊಂಡ ಗ್ರಾಮದ ಸ ನಂ. 13 ರ ಕಲ್ಲು ಕ್ವಾರಿ ಮೇಲೆ ದಾಳಿ ನಡೆಸಿ, ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ. ಕುರ್ಕಿ ಕ್ಯಾಪ್ ಗ್ರಾಮದ ನಿವಾಸಿ ಯುವರಾಜ ಕಾರ್ತಿಕ್ (22) ಈತನನ್ನು ವಶಕ್ಕೆ ಪಡೆದು, ಸ್ಥಳವನ್ನು ಪರಿಶೀಲಿಸಿದಾಗ ಸ್ಥಳದಲ್ಲಿ ಸಾಕಷ್ಟು ಸ್ಫೋಟಕ ವಸ್ತುಗಳು ದೊರೆತಿವೆ.
ಇದನ್ನೂ ಓದಿ:ಅಡಿಕೆ ಸಿಂಗಾರದಲ್ಲಿ ಮೂಡಿದ ಗಣೇಶನ ಮೊಗ: ವಿಡಿಯೋ ವೈರಲ್
14 ಸಾದಾ ಕೇಪು, ಐಡಿಯಲ್ ಪವರ್ -90 ಜಲ್ 10 ಟೂಬ್ಗಳು, ಕಲಕ್ಷನ್ ವೈರ್ (150 ಗ್ರಾಂ), 01 ಕೆಜಿ ಮದು(ಮಸಿ), ಡಿಗಾರ್ಡ್ ಕೇಬಲ್ ಶೇ.1 ಮೀಟರ್, ಹಸಿರು ಬಣ್ಣದ ಸಾದಾ ಬತ್ತಿ (ಸುಮಾರು 60 ಅಡಿ), ಬ್ಯಾಂಗ್ ಉಪ್ಪು ಸುಮಾರು (04 ಕೆಜಿ), 02 ಮೆಗರ್ ಮೆಷಿನ್, 01 ಕೇಪ್ ಚೆಕ್ ಮಾಡುವ ಚೆಕ್ ಮೀಟರ್, 01 ಎಲೆಕ್ಟ್ರಿಕ್ ಡೆಮೊನೆಟರ್, ಬಿಲ್ ಪುಸ್ತಕ ಇತ್ಯಾದಿ ವಸ್ತ್ರಗಳು ಸ್ಥಳದಲ್ಲಿ ಪತ್ತೆಯಾಗಿರುತ್ತವೆ. ಇವುಗಳ ಅಂದಾಜು ಬೆಲೆ 1,15,934/- ರೂ. ಇರಬಹುದು. ಇವುಗಳನ್ನು ಜಪ್ತಿ ಪಡಿಸಿಕೊಂಡು ನಂತರ ಕಾರ್ತಿಕ್ (22) ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ.