ETV Bharat / state

'ಪೊಗರು' ಸಿನಿಮಾ ವಿರುದ್ಧ 'ನಿಮ್ಮೂರು' ಚಿತ್ರದ ನಿರ್ಮಾಪಕ ರಾಜಶೇಖರ್ ಆಕ್ರೋಶ

author img

By

Published : Feb 27, 2021, 3:44 PM IST

ಪೊಗರು ಚಿತ್ರತಂಡದ ವಿರುದ್ಧ ನಿಮ್ಮೂರು ಸಿನಿಮಾದ ನಿರ್ಮಾಪಕ ರಾಜಶೇಖರ್ ವಾಗ್ದಾಳಿ ನಡೆಸಿದರು.

ಪೊಗರು ಸಿನಿಮಾ ವಿರುದ್ಧ ನಿಮ್ಮೂರು ಚಿತ್ರದ ನಿರ್ಮಾಪಕ ರಾಜಶೇಖರ್ ಆಕ್ರೋಶ
Nimmuru Film Producer outrage against Pogaru team at Davangere

ದಾವಣಗೆರೆ: 'ಪೊಗರು' ಸಿನಿಮಾ ತಂಡದ ವಿರುದ್ಧ 'ನಿಮ್ಮೂರು' ಸಿನಿಮಾದ ನಿರ್ಮಾಪಕ ರಾಜಶೇಖರ್ ದಾವಣಗೆರೆಯಲ್ಲಿ ವಾಗ್ದಾಳಿ ನಡೆಸಿದರು.

ನಿಮ್ಮೂರು ಚಿತ್ರದ ನಿರ್ಮಾಪಕ ರಾಜಶೇಖರ್ ಪತ್ರಿಕಾಗೋಷ್ಠಿ

ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಗರು ಸಿನಿಮಾ ರಿಲೀಸ್​ ಆಗುತ್ತಿದೆ ಎಂದು ಚಿತ್ರಮಂದಿರಗಳಿಂದ ನಮ್ಮ ಚಿತ್ರವನ್ನು ತೆಗೆದು ಹಾಕಿದರು. ನಾನು ಕೂಡ ಒಬ್ಬ ಚಿತ್ರ ನಿರ್ಮಾಪಕನಿದ್ದೇನೆ. ನನಗೆ ಒಂದು ಮಾತು ಕೇಳಲಿಲ್ಲ ಎಂದು ಪೊಗರು ಚಿತ್ರತಂಡದ ವಿರುದ್ಧ ನಿಮ್ಮೂರು ಚಿತ್ರದ ನಿರ್ಮಾಪಕ ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಅಶೋಕ ಚಿತ್ರಮಂದಿರದಲ್ಲಿ ನಿಮ್ಮೂರು ಸಿನಿಮಾ ಇದೇ ಫೆ.12 ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಪೊಗರು ಸಿನಿಮಾ ತಂಡದವರ ಕುತಂತ್ರಕ್ಕೆ ಫೆ.19 ಕ್ಕೆ ಬಿಡುಗಡೆ ಮಾಡಿ ಪದ್ಮಾಂಜಲಿ ಚಿತ್ರ ಮಂದಿರಕ್ಕೆ ಎತ್ತಿ ಹಾಕಿದರು. ನಿಮಗೆ ನಿಮ್ಮ ಸಿನಿಮಾ ದೊಡ್ಡದು, ನನಗೆ ನನ್ನ ಸಿನಿಮಾ ದೊಡ್ಡದು, ಚಾಲೆಂಜ್​​ ಮಾಡುತ್ತೀನಿ. ನಿಮ್ಮ ನಿರ್ದೇಶಕರ ಜೊತೆ ನೀವು ನಮ್ಮ ಸಿನಿಮಾ ನೋಡಿ, ನಮ್ಮ ನಿರ್ದೇಶಕರೊಂದಿಗೆ ನಾನು ನಿಮ್ಮ ಸಿನಿಮಾ ನೋಡುತ್ತೀನಿ. ಜನ ಯಾರ ಸಿನಿಮಾಕ್ಕೆ‌ ಮೆಚ್ಚುಗೆ ವ್ಯಕ್ತಪಡಿಸುತ್ತಾರೋ ನೋಡೋಣ ಎಂದು ಪೊಗರು ಚಿತ್ರತಂಡಕ್ಕೆ ಸವಾಲು ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.