ದಾವಣಗೆರೆ: ಲಾಕ್ಡೌನ್ನಿಂದಾಗಿ ದಾವಣಗೆರೆಯಲ್ಲಿ ಟೊಮ್ಯಾಟೊ, ಎಲೆಕೋಸು ಬೆಳೆದ ರೈತರು ಈಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ದಾವಣಗೆರೆ ತಾಲೂಕಿನ ಗಂಗನಕ್ಕೆ ಮತ್ತು ಶಿವಪುರ ಗ್ರಾಮಗಳ ಜಮೀನುಗಳಲ್ಲಿ ಬೆಳೆದಿದ್ದ ಟೊಮ್ಯಾಟೊ ಹಾಗೂ ಎಲೆಕೋಸನ್ನ ಸ್ವತಃ ರೈತರೇ ನಾಶಪಡಿಸಿದ್ದಾರೆ. ಒಂದು ಬಾಕ್ಸ್ ಟೊಮ್ಯಾಟೊಗೆ ಕೇವಲ 120 ರೂಪಾಯಿಗೆ ವರ್ತಕರು ಕೇಳುತ್ತಿದ್ದಾರೆ. ಇದರಿಂದ ಕಂಗಾಲಾದ ರೈತರು ಟ್ರ್ಯಾಕ್ಟರ್ ಮೂಲಕ ಬೆಳೆ ನಾಶಪಡಿಸಿದ್ದಾರೆ.
ಕಷ್ಟ ಪಟ್ಟು ಸಾಲ ಮಾಡಿ ಟೊಮ್ಯಾಟೊ, ಎಲೆಕೋಸು ಬೆಳೆದಿದ್ದರು. ಅಲ್ಪಸ್ವಲ್ಪ ಲಾಭ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರು ಈಗ ಲಾಕ್ಡೌನ್ನಿಂದಾಗಿ ಕಂಗಾಲಾಗಿದ್ದಾರೆ.