ದಾವಣಗೆರೆ : ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಮಾಡಲು ಸಂಕಲ್ಪ ಮಾಡಿ ಎಂದು ಗ್ರಾಪಂ ಸದಸ್ಯರಿಗೆ ಜನಸೇವಕ್ ಸಮಾವೇಶದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕರೆ ನೀಡಿದ್ದಾರೆ.
ಗ್ರಾಪಂ ಸದಸ್ಯರನ್ನು ಬಲಗೊಳಿಸಲು ಹಮ್ಮಿಕೊಂಡಿದ್ದ ಜನಸೇವಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಪಂನಲ್ಲಿ ಗೆಲುವು ಸಾಧಿಸಿದ ನೀವು ನಮ್ಮ ಶಾಸಕರು ಸಚಿವರು ಹಾಗೂ ಅಧ್ಯಕ್ಷರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಸಂಕಲ್ಪ ಮಾಡಿ ಎಂದರು.
ನಳೀನ್ ಕುಮಾರ್ ಕಟೀಲ್, ಸಿಎಂ ಬಿಎಸ್ವೈ ಈ ಕಾರ್ಯಕ್ರಮ ಆರಂಭಿಸಿದ್ದು, ಗಂಡು ಮೆಟ್ಟಿದ ನಾಡಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ನೀವೆಲ್ಲ ಇರುವುದು ನಮ್ಮ ಪಕ್ಷಕ್ಕೆ ಬಲಕೊಟ್ಟಿದೆ. ನಮ್ಮ ಪಕ್ಷದ ಅಡಿಪಾಯ ಗಟ್ಟಿಯಾಗಿದ್ದು, ಕಾಂಗ್ರೆಸ್ ಮುಕ್ತ ಜಿಲ್ಲೆಯನ್ನಾಗಿ ಮಾಡುತ್ತೇವೆ ಎಂಬ ಸಂಕಲ್ಪವನ್ನು ಮಾಡಬೇಕಾಗಿದೆ ಎಂದರು.