ETV Bharat / state

ಈ ಅವಧಿಯಲ್ಲಿ ಏನ್ಬೇಕಾದ್ರೂ ಆಗ್ಬಹುದು, ಯಾರೂ ಗೂಟಾ ಹೊಡೆದುಕೊಂಡು ಇರಲ್ಲ : ಸಚಿವ ಈಶ್ವರಪ್ಪ

ನಾನು ಮುಖ್ಯಮಂತ್ರಿ ಎಂದು ಹೇಳಿಕೊಳ್ಳಲು ನಾನೇನು ಸಿದ್ದರಾಮಯ್ಯನಾ?. ಡಿಕೆಶಿ ಹಾಗೂ ಸಿದ್ದರಾಮಯ್ಯ ತಮ್ಮ ಹೆಸರು ಕೂಗುವಂತೆ ಕಾರ್ಯಕರ್ತರಿಗೆ ಹೇಳಿ ಕಳುಹಿಸುತ್ತಾರೆ. ಕೂಗಿದ ಬಳಿಕ ಅವರು ಕೂಗ್ತಾರೆ, ನಾನು ಏನ್ ಮಾಡ್ಲಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ ಎಂದು ಗೇಲಿ ಮಾಡಿದರು..

k-s-eshwarappa
ಕೆ. ಎಸ್. ಈಶ್ವರಪ್ಪ
author img

By

Published : Jul 23, 2021, 8:20 PM IST

ದಾವಣಗೆರೆ : ಆರು ದಿನ ಆರು ತಿಂಗಳಲ್ಲ. ಈ ಅವಧಿಯಲ್ಲಿ ಏನ್ಬೇಕಾದ್ರು ಆಗ್ಬಹುದು. ಇಲ್ಲಿ ಯಾರೂ ಗೂಟ ಹೊಡೆದುಕೊಂಡು ಇರುವುದಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಸಿಎಂ ಬದಲಾವಣೆ ಬಗ್ಗೆ ಸುಳಿವು ನೀಡಿದರು.

ನಗರದಲ್ಲಿ ಮಾತನಾಡಿದ ಅವರು, ನಾನು ಈ ಇಲಾಖೆಯಲ್ಲಿ ಇರ್ತೀನೋ ಬೇರೊಂದು ಇಲಾಖೆಗೆ ಹೋಗುತ್ತೀನೋ ಗೊತ್ತಿಲ್ಲ. ಸಿಎಂ ಬದಲಾವಣೆ ನಂತರ ಸಚಿವ ಸಂಪುಟ ಪುನಾರಚನೆಯಾಗುತ್ತದೆ. ಆಗ ಯಾವ ಇಲಾಖೆ, ಯಾರಿಗೆ ಕೊಡ್ತಾರೆ ಗೊತ್ತಿಲ್ಲ ಎಂದರು.

ಸಿಎಂ ಬದಲಾವಣೆ ಬಳಿಕ ಸಂಪುಟ ಪುನಾರಚನೆ, ಯಾವ ಖಾತೆ ಕೊಡ್ತಾರೋ ಗೊತ್ತಿಲ್ಲ.. ಕೆ ಎಸ್ ಈಶ್ವರಪ್ಪ

ಸಿಎಂ ಬದಲಾವಣೆ ಖಚಿತವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಗೊತ್ತಿಲ್ಲ ಕಣ್ರೀ, ನಾನೂ ಗೂಟ ಹೊಡೆದುಕೊಂಡು ಇರಕ್ಕೆ ಆಗಲ್ಲ. ನಮ್ಮ ಇಲಾಖೆಗೆ ನಾವು ಇಲ್ಲದಿದ್ರೆ, ಇನ್ನೊಬ್ಬರು ಬರ್ತಾರೆ ಎಂದು ಕೆಂಡಾಮಂಡಲರಾದರು.

ಸಿಎಂ ರೇಸ್​ನಲ್ಲಿರುವವರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಮೇಲೆ ಪ್ರೀತಿ ಇರುವಂತವರು ಸಿಎಂ ಆಗಲಿ ಎಂದು ಹೇಳುತ್ತಾರೆ. ಈ ಸಿಎಂ ಸ್ಥಾನದ ಬಗ್ಗೆ ನನ್ನ ಹೆಸರು ಯಾರು ಬಳಕೆ ಮಾಡ್ಬೇಡಿ ಎಂದು ಮನವಿ ಮಾಡಿದರು.

ಕಾರ್ಯಕರ್ತರಿಗೆ ಹೇಳಿ ಕಳುಹಿಸುತ್ತಾರೆ : ನಾನು ಮುಖ್ಯಮಂತ್ರಿ ಎಂದು ಹೇಳಿಕೊಳ್ಳಲು ನಾನೇನು ಸಿದ್ದರಾಮಯ್ಯನಾ?. ಡಿಕೆಶಿ ಹಾಗೂ ಸಿದ್ದರಾಮಯ್ಯ ತಮ್ಮ ಹೆಸರು ಕೂಗುವಂತೆ ಕಾರ್ಯಕರ್ತರಿಗೆ ಹೇಳಿ ಕಳುಹಿಸುತ್ತಾರೆ. ಕೂಗಿದ ಬಳಿಕ ಅವರು ಕೂಗ್ತಾರೆ, ನಾನು ಏನ್ ಮಾಡ್ಲಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ ಎಂದು ಗೇಲಿ ಮಾಡಿದರು.

ಅವರಿಗೆ ನೈತಿಕತೆ ಇಲ್ಲ: ಇನ್ನು, ದಲಿತ ಮುಖ್ಯಮಂತ್ರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಸಾಕಷ್ಟು ಬಾರಿ ಆಡಳಿತ ಮಾಡಿದೆ. ಆದ್ರೆ, ದಲಿತ ಮುಖ್ಯಮಂತ್ರಿ ಈ ಕಾಂಗ್ರೆಸ್ ನವರು ಮಾಡಿದ್ರಾ?. ಇದರ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ ಎಂದು ಕೈ ನಾಯಕರಿಗೆ ಟಾಂಗ್ ನೀಡಿದರು.

ಸಿಎಂ ಸ್ಥಾನ ನೀಡ್ತಾರೋ, ಇಲ್ಲವೋ ಗೊತ್ತಿಲ್ಲ‌ : ವಯಸ್ಸಾದ ಸಾಕಷ್ಟು ಕೇಂದ್ರದ ನಾಯಕರನ್ನು ನಮ್ಮ ವರಿಷ್ಠರು ಸಚಿವ ಸಂಪುಟದಿಂದ ಕೈಬಿಟ್ಟು ಯುವಕರಿಗೆ ಅವಕಾಶ ನೀಡಿದ್ದಾರೆ. ರಾಜ್ಯದಲ್ಲಿ ಯುವಕರಿಗೆ ಸಿಎಂ ಸ್ಥಾನ ನೀಡ್ತಾರೋ ಇಲ್ಲವೋ ಗೊತ್ತಿಲ್ಲ‌ ಎಂದರು.

ಓದಿ: ರಾಜ್ಯದಲ್ಲಿ ಜುಲೈ 27ರವರೆಗೆ ವರುಣನ ಅಬ್ಬರ : ಹಲವು ಜಿಲ್ಲೆಗಳಲ್ಲಿ ಹೈಅಲರ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.